ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೃತಿ 5 ಇಂದು ಎನಗೆ ಗೋವಿಂದ ನಿನ್ನ ಪಾದಾರ ವಿಂದವ ತೋರೊ ಮುಕುಂದ ಪ ಸುಂದರ ವದನನೆ ನಂದಗೋಪನ ಕಂದ ಮಂದರೋದ್ಧರ ಆನಂದ ಇಂದಿರಾ ರಮಣ ಅ.ಪ ನೊಂದೆನಯ್ಯ ಭವಬಂಧನದೊಳು ಸಿಲುಕಿ ಮುಂದೆ ದಾರಿ ಕಾಣದೆ ಕುಂದಿದೆ ಜಗದೊಳು ಕಂದನು ಎಂದೆನ್ನ ಕುಂದುಗಳೆಣಿಸದೆ ಕಂದರ್ಪ ಜನಕನೆ 1 ಮೂಢತನದಿ ಬಹು ಹೇಡಿ ಜೀವ ನಾನಾಗಿ ದೃಢಭಕುತಿಯನು ಮಾಡಲಿಲ್ಲವೊ ಹರಿಯೆ ನೋಡಲಿಲ್ಲವೊ ನಿನ್ನ ಪಾಡಲಿಲ್ಲವೊ ಮಹಿಮೆ ಗಾಡಿಕಾರ ಕೃಷ್ಣ ಬೇಡಿಕೊಂಬೆನೊ ನಿನ್ನ 2 ಧಾರುಣಿಯೊಳು ಭೂಭಾರ ಜೀವ ನಾನಾಗಿ ದಾರಿತಪ್ಪಿ ನಡೆದೆ ಸೇರಿದೆ ಕುಜನರ ಆರೂ ಕಾಯುವರಿಲ್ಲ ಸೇರಿದೆ ನಿನಗಯ್ಯ ಧೀರ ವೇಣುಗೋಪಾಲ ಪಾರಗಾಣಿಸೊ ಹರಿಯೆ 3
--------------
ವಿಜಯೀಂದ್ರತೀರ್ಥರು
ನೀ ಕರುಣದಿಂದ ಪಾಲಿಸದಿದ್ದರೆ ಇನ್ನುನಾ ಕಾಣೆ ಮನ್ನಿಸುವರ ಪ. ಸಾಕಾರ ಮೂರುತಿ ಸರ್ವೋತ್ತಮನೆನೀ ಕಾಯೊ ಪರಾಕುಮಾಡದೆ ಎನ್ನನು ದೇವ ಅ.ಪ. ಗುರುಹಿರಿಯರನು ಕಂಡು ತರಳತನದಲಿ ನಾನುಚರಣಕೆರಗದೆ ತಿರುಗಿದೆವರ ಸಕಲ ಸಂಪದವ ಬೇಡಿ ಬಯಸುತ ನಿನ್ನಸ್ಮರಣೆಯನು ಮರೆತಿದ್ದೆನೊಸ್ಮರನ ಬಾಣಕೆ ಸಿಲುಕಿ ಪರಸತಿಗೆ ಮರುಳಾಗಿದುರ್ಗತಿಗೆ ನೆಲೆಯಾದೆನೊಸಿರಿಯರಸನೆ ನಿನ್ನ ಚರಣವನು ನಂಬಿದೆನೊಕರುಣದಿಂ ಕಡೆಹಾಯಿಸೊ 1 ಆರುಮಂದಿಗಳೆಂಬ ಕ್ರೂರವೈರಿಗಳಿಂದಗಾರಾದೆನವರ ದೆಸೆಗೆಮಾರಿಹಬ್ಬದÀ ಕುರಿಯು ತೋರಣವ ಮೆಲುವಂತೆತೋರುತಿದೆ ಎನ್ನ ಮತಿಗೆಘೋರ ಸಂಸಾರವೆಂಬೋ ವಾರಿಧಿಯ ದಾಟಿಸುವಚಾರುತರ ಬಿರುದು ನಿನಗೆಮಾರನಯ್ಯನೆ ನಿನ್ನ ಚರಣವನು ನಂಬಿದೆನುಪಾರಗಾಣಿಸೊ ಎನ್ನನು 2 ಹಲವು ಜನ್ಮಗಳಲ್ಲಿ ಬಲುನೊಂದು ಬಾಯಾರಿತೊಳತೊಳಲಿ ಬಳಲುತಿಹೆನುಸಲೆ ಉದರ ಪೋಷಣೆಗೆ ತಲೆಹುಳುಕ ನಾಯಂತೆಹಲವು ಮನೆ ತಿರುಗುತಿಹೆನೊಜಲದ ಮೇಲಿನ ಗುಳ್ಳೆಯಂತಿಪ್ಪ ಈ ದೇಹನೆಲೆಯೆಂದು ನೆಚ್ಚುತಿಹೆನೊಜಲಜನಾಭನೆ ನಿಮ್ಮ ಮಹಿಮೆಯನು ಪೊಗಳುವೆನುಚೆಲುವ ಶ್ರೀ ಹಯವದನ ರನ್ನ 3
--------------
ವಾದಿರಾಜ
ಬಾರೋ ಬೇಗ ತೋರೋ ಮುಖವನು ನಿನ್ನ ಬಾರಿಗೆ ಬಿದ್ದೆನು ಪಾರಗಾಣಿಸೊ ಪ ಅಂಗಜನಯ್ಯಾ ಭುಜಂಗ ಶಯನಾ ಶ್ರೀ ರಂಗ ಎನ್ನಾ ಅಂತರಂಗಕ್ಕೆ ನೀ 1 ಕಂಜಲೋಚನ ನಾ ನಿನಗಂಜಲಿ ಮುಗಿಯುವೆ ಕುಂಜರೇಶ ವರದ ಭುಜಂಗ ಶಯನ2 ಘನ್ನಮಹಿಮ ಸನ್ಮತಿಯ ಪಾಲಿಸು ಪ್ರ ಸನ್ನ ಪ್ರಾಣನಾಥ ವಿಠಲರಾಯನೆ 3
--------------
ಬಾಗೇಪಲ್ಲಿ ಶೇಷದಾಸರು