ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಲ ಶಾಪದಿಂದಡಗಿತೈ ಧರ್ಮ ಪರಿವಾರ ಪ ತಾಪಪಡಿಸುವ ಪರಿಯ ಶ್ರೀಪತಿಯೆ ಬಲ್ಲ ಅ.ಪ ಇಷ್ಟ ಸುಖ ಪಡೆಯುವರ ಪುಣ್ಯ ಫಲವು || ಇಷ್ಟಿದರನರಿಯದವ ನರನೊ ಪಾಮರನೊ 1 ಸ್ಥಿರಚರ ಪ್ರಾಣಿಯೊಳು ಪರಿಕಿಸಲು ಮೇಲಾದ | ನರಜನ್ಮದೊಳು ಬಂದು ಸುಖದುಃಖದ || ಚಾರದಿಂ ನಡೆಯುವವನವ ನರೋತ್ತಮನು 2 ಪುಣ್ಯಫಲದೊಳು ಸದಾನಂದ ಸುಖ ಪಡೆವ 3
--------------
ಸದಾನಂದರು
ಭೋಯತಿ ವರದೇಂದ್ರಾ ಶ್ರೀಗುರುರಾಯ ರಾಘವೇಂದ್ರಾ ಪ ಕಾಯನಿನ್ನ ಶುಭಕಾಯ ಭಜಿಸುವ ಕಾಯೊ ತವಕ ಚಂದ್ರಾ ಅ.ಪ ನೇಮವು ಎನಗೆಲ್ಲಿ ಇರುವದು ಕಾಮಿಯಾದವನಲ್ಲಿ ಭೂಮಹಾಮಹಿಮನ ಪಾಮರನೊ ನಿನ್ನ ನಾಮ ಒಂದೆ ಬಲ್ಲೆ 1 ಕಂಡ ಕಂಡ ಕಡೆಗೆ ತಿರುಗುತ ಬೆಂಡಾದೆನು ಕೊನೆಗೆ ಕಂಡ ಕಂಡವರನು ಬಲು ಕೊಂಡಾಡುತ ದಣ ಕೊಂಡೆ ಕಟ್ಟಕಡೆಗೆ 2 ಮಂತ್ರವು ನಾನರಿಯೆ ಶ್ರೀಮನ್ ಮಂತ್ರಾಲಯ ಧೊರಿಯೆ ಅಂತರಂಗದಲಿ ನಿಂತು ಪ್ರೇರಿಸುವ ನಂತಾದ್ರೀಶಧೊರಿಯೆ3
--------------
ಅನಂತಾದ್ರೀಶರು
ಮರೆಯದೆ ಸಲಹೊ ಮಾರುತೀಶ ಎನ್ನ ಶರಣೆಂಬೆನು ನಿನ್ನ ಪ ಶರಣಾಗತರನು ಬಿಡದೆ ಪೊರೆವ ಫನ್ನ- ಗಿರಿ ಅಂಜನೆತನಯಅ.ಪ ವನನದಿಗಿರಿಗುಹೆಗಳಲಿ ನಿನ್ನ ರೂಪ ತೋರುವುದೈ ಭೂಪ ಶರಧಿ ಲಂಘಿಸಿ ರಾವಣನಿಗೆ ತಾಪ ಪುಟ್ಟಿಸಿದೆಯೊ ರಘುಪ- ನಡಿಗಳ ಬಿಡದೆ ಸೇವಿಸುವರ ಪಾಪ ಮಾಡುವಿ ನಿರ್ಲೇಪ ಸಡಗರದಲಿ ನಿನ್ನೊಡೆಯನ ತೋರಪ್ಪ ಘನಗಿರಿ ಹನುಮಪ್ಪ 1 ಊರಿನಲಿ ಊರ್ಹೊರಗು ನಿನ್ನ ಮೂರ್ತಿ ಎಷ್ಟ್ಹೇಳಲಿ ಕೀರ್ತಿ ಪಾಡುತ ಪೊಗಳ್ವರು ನಿನ್ನಯ ಸತ್ಕೀರ್ತಿ ವರ್ಣಿಸುವುದೆ ಅರ್ಥಿ ಪಾಮರನೊಮ್ಮೆ ಪಾಡಲು ನಿನ್ನ ವಾರ್ತೆ ಪರಿಹಾರವೋ ಭೀತಿ ನಾಡೊಳು ನಿನ್ನ ಭಜಿಸುವವರ ಸಂಗ ನೀಡು ಕೃಪಾಪಾಂಗ2 ಕಡಲ ಶಯನನ ಅಡಿಗಳ ಸೇವಿಸುತ ಕಡುಹರುಷವ ಪಡುತ ಬಿಡದೆ ನಿನ್ನಯ ಸೇವಕರಿವರೆನುತ ಶ್ರೀಶಗೆ ಪೇಳುತ್ತ ಕೊಡಿಸುವಿ ಮುಕ್ತಿಯ ಧೃಡಭಕ್ತರಿಗೆ ಸತತ ರಾಮರ ಸ್ಮರಿಸುತ್ತ ಕಮಲನಾಭ ವಿಠ್ಠಲನನು ಸೇವಿಸುತಭಕ್ತರ ಸಲಹುತ್ತ3
--------------
ನಿಡಗುರುಕಿ ಜೀವೂಬಾಯಿ