ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಡೆ ನಾ ಬ್ರಹ್ಮಾಂಡಯೊಡೆಯ ಶ್ರೀ ವೆಂಕಟೇಶನ ಪ ಕಂಡೆ ನಾ ಭಕುತರ ಹಿಂಡುಗಳು ನೆರೆ ಕೊಂಡಾಡುತಲಿದೆ ಪದಪುಂಡರೀಕವ ನಾ ಅ.ಪ ತುಂಗ ಮಹಿಮ ಸತ್ಸಂಗವಿತ್ತು ಮನದಂತರ ವರಿ- ತಾಂಗೀರಸದೀ ಮಂಗಳ ಪೌರ್ಣಿಮೆಭಾರ್ಗವವಾಸರದಿ ಭಾರ್ಗವಿಪತಿ ನಿನ್ನನು ಗ್ರಹದಿ ನಗದೊಡೆಯ ಭಕ್ತ- ರಘಹರಿಸುತ ಪನ್ನಗಗಿರಿಯೊಡೆಯ ನಿನ್ನಯ ಗುಡಿಯನ್ನು ಬಗೆ ಬಗೆ ಸುತ್ತಿಪರ ಹಿಂಡನ್ನು ನಾ ಕಂಡೆನೋ ಜಾಗು ಮಾಡದೆ ಬಾಯಿಬೀಗವ ಕೈಕೊಂಡು ಸಾಗಿ ಕಾಸಾರದಿ ಸ್ನಾನ ಮಾಡಿಕೊಂಡು ಬಾಗಿ ವರಾಹದೇವರ ವಂದಿಸಿ ಬೇಗದಿ ಹರಕೆ ಕೈಕೊಂಡಿಹ ದೇವನ 1 ಮುಕ್ತರೊಡೆಯ ಪುರುಷೋತ್ತಮ ನಿನ್ನಯ ಭಕ್ತರ ವಿಪತ್ತುಗಳೆಲ್ಲ ಹರಿಸಿಶಕ್ತ್ಯಾನುಸಾರ ತ್ವ- ದ್ಭಕ್ತರೆಸಗುವ ಅತ್ಯಲ್ಪಭಕ್ತಿಯ ಸ್ವೀಕರಿಸಿ ಭಕ್ತಿಯಿಂದ ಪ್ರಾಕಾರದಿ ಸುತ್ತಲು ಹೊತ್ತಗಂಡದೀಪಸಾರುತಲಿ ನಿತ್ಯನೂತನ ನಿನ್ನ ಸ್ತುತಿಸುತಲೀ ಮತ್ತೆ ಉರುಳುತಲೀ ಉತ್ತಮಗತಿಪ್ರದ ವ್ಯಕ್ತನಹುದೊ ತ್ವ- ದ್ಭಕ್ತರ ಮನೋರಥ ಪೂರ್ತಿಮಾಡುವ ಭಕ್ತವತ್ಸಲನೆಂಬ ಬಿರುದು ಪೊತ್ತ ಸ- ರ್ವೋತ್ತಮ ಶ್ರೀ ಪುರುಷೋತ್ತಮ ನಿನ್ನನು2 ಬೊಮ್ಮಜನಕ ಪರಬೊಮ್ಮನೆ ನಿನ್ನಯ ಸನ್ಮಹಿಮೆಯ ನಾ ಒಮ್ಮನದೀ ಒಮ್ಮೆಯಾದರು ಮನ್ಮನದಲಿ ನಿನ್ನಯ ಸನ್ಮಂಗಳರೂಪವ ನಿಲ್ಲಿಸದೆ ಸುಮ್ಮನೆಕುಳಿತು ಇಮ್ಮನನಾಗಿರೆ ಘಮ್ಮನೆ ಎನ್ನನು ಒಳಕ್ವೈದೆ ಕಣ್ಮನದೆದುರಲಿ ನೀ ನಿಂದೆ ನೀನೆನ್ನಯ ತಂದೆ ಸನ್ಮುದದಿಂದೆ ಪಾಮರನೆಂದೆನ್ನ ಪ್ರೇಮದಿ ಕರುಣಿಸಿ ಸನ್ಮಹಿಮೆಯ ತೋರ್ದೆ ಜಗದೀಶ ಕಾಮಿತಜನರ ಕಲ್ಪದ್ರುಮ ನೀನೆಲೊ ಈ ಮೇಲುಗಿರೀಶ ಶ್ರೀ ವೆಂಕಟೇಶಾ ನಿನ್ನ3
--------------
ಉರಗಾದ್ರಿವಾಸವಿಠಲದಾಸರು
ರಾಮ ನಿನ್ನಯ ದಿವ್ಯ ನಾಮವೇ ಗತಿಯೆಂಬೆ ಪಾಮರನೆಂದೆನ್ನ ಪಾಲಿಸು ತಂದೆ ಪ. ಸುರರಾಜನಂಗಸಂಗವಗೈದು ಶಿಲೆಯಾದ ವರಮುನಿ ಗೌತಮನರಸಿಯು ನಿನ್ನ ಚರಣಾರವಿಂದ ಸಂಸ್ಪರ್ಶಮಾತ್ರದಿ ದಿವ್ಯ ತರುಣಿಯಾಗಿಹಳೆಂಬ ಪರಿಯ ನಂಬಿದೆನು 1 ಪ್ರಥಮ ವರ್ಣವು ಪಾಪ ತತಿಗಳ ತರಿವುದು ಜತನ ಮಾಡುವುದನ್ಯ ವರ್ಣವೆಂದೆನುತ ನಿತ್ಯ ಸಂಸ್ತುತಿಮಾಳ್ಪವದರಿಂದಾ- ಶ್ರಿತ ಕಲ್ಪತರು ನೀನೆ ಗತಿಯೆಂಬೆ ನಿರತಾ 2 ನಿತ್ಯ ನಿರ್ನಾಮಗೊಳಿಸು ಪನ್ನಗಾಚಲನಾಥ ಪರಿಪೂರ್ಣ ಕೃಪೆಯಿಂದ ಮನ್ನಿಸಿ ಮನಸನ್ನು ನಿನ್ನಲ್ಲಿ ಇರಿಸು 3
--------------
ತುಪಾಕಿ ವೆಂಕಟರಮಣಾಚಾರ್ಯ