ಒಟ್ಟು 6 ಕಡೆಗಳಲ್ಲಿ , 3 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರತಿಯನೆತ್ತುವೆ ಪ ಸಾರಸನೇತ್ರಗೆ ಮುತ್ತಿನ ಅ.ಪ ನೀಡುತ್ತಯನ್ನನು ಕೂಡಿ ಸುಖಪಡಿಸುವವಗೆ 1 ಅನುದಿನದಲಿ ಎನ್ನ ಘನ ಬೋಧೆ ಪೇಳುವವಗೆ 2 ಪಾಮರತ್ವವ ಬಿಡಿಸಿ ಕ್ಷೇಮಾವಕೊಡುವ ಗುರು ರಾಮ ವಿಠ್ಠಲನಿಗೆ 3
--------------
ಗುರುರಾಮವಿಠಲ
ಕಾರು ಯಾರಮನೆಗುಂಟು ಖೋಡಿ ಚೋರತ್ವದಪಹಾರ ಮಾಡಿ ತಿಂದದ್ದೆಲ್ಲ ಪ ಕಾಯಜನಯ್ಯನ ದಿವ್ಯ ಚರಿತಗಳನ್ನು ಬಾಯಿಂದ ಪೊಗಳುತ ಕೈಯಿಂದ ಬರೆದು ಮಾಯಾಮೋಹವ ಬಿಡದೆ ನ್ಯಾಯಮಾರ್ಗವತಪ್ಪ ನ್ಯಾಯದಿಂ ಪರರೊಡವೆ ಬಾಯ್ಬಡಿದು ತಿಂದದ್ದು 1 ನಳಿನನಾಭನ ವಿಮಲ ಸುಲಲಿತ ಮಹಿಮೆಗಳ ತಿಳಿದು ಆನಂದದಿಂ ನಲಿನಲಿದು ಹಿಗ್ಗದೆ ಇಳೆಯ ವಾಸನೆಯಿಂದ ಅಳಿವ ಸುಖದಾಸೆಗೆ ಇಳೆಜನರ ಗಳಿಕೆಯನು ಕಳವಿನಿಂ ತಿಂದದ್ದು 2 ಭೂಮಿಯೊಳಧಿಕ ಶ್ರೀರಾಮನ ದಾತೃತ್ವ ಹೇ ಮನವೆ ನೀ ತಿಳಿದು ಪಾಮರತ್ವ ಬಿಡದೆ ಕಾಮಿತದೊಳು ಬಿದ್ದು ಭೂಮಿ ಜನರೆದುರಿಗೆ ಸ್ವಾಮಿಭಕ್ತಿಯ ತೋರಿ ಕಾಮಿಸಿ ತಿಂದದ್ದು 3
--------------
ರಾಮದಾಸರು
ಗುಬ್ಬಿಯಾಳೊ ಗೋವಿಂದ ಗೋವಿಂದಾ ಗೋವಿಂದ ಗೋವಿಂದಾನೆಂದು ನೆನಯಿರೊ ಗುಬ್ಬಿಯಾಳೊ ಪ. ಕ್ಲೇಶ ಪರಿಹಾರವು ಗುಬ್ಬಿಯಾಳೊ ನಾರಾಯಣನ ಧ್ಯಾನದಿಂದ ನರಕಭಯವಿಲ್ಲವೊ ಗುಬ್ಬಿಯಾಳೊ 1 ಮಾಧವನ ನೆನೆದರೆ ಮನೋಭೀಷ್ಟ ಕೊಡುವೊನು ಗುಬ್ಬಿಯಾಳೊ ನಾಶನವು ಗುಬ್ಬಿಯಾಳೊ 2 ವಿಷ್ಣುಭಜನೆಯಿಲ್ಲದವಗೆ ವೈಷ್ಣವರ ಜನ್ಮವುಂಟೆ ಗುಬ್ಬಿಯಾಳೊ ಇಹುದೊ ಗುಬ್ಬಿಯಾಳೊ 3 ತ್ರಿವಿಕ್ರಮನ ನೆನೆದರೆ ಸಾವಿತ್ರಿಯಾಗಿಹರೊ ಗುಬ್ಬಿಯಾಳೊ ವಾಮನದೇವರು ನಮಗೆ ವರಗಳ ಕೊಡುವೋರು ಗುಬ್ಬಿಯಾಳೊ 4 ಸಿರಿ ನಮಗೆ ಒಲಿವಳೊ ಗುಬ್ಬಿಯಾಳೊ ಹೃಷೀಕೇಶನ ಧ್ಯಾನದಿಂದ ಹೃದಯ ಪರಿಶುದ್ಧವೊ ಗುಬ್ಬಿಯಾಳೊ 5 ಪದ್ಮನಾಭ ನಮ್ಮೆಲ್ಲರ ಪಾಲಿಸಿ ರಕ್ಷಿಪನೊ ಗುಬ್ಬಿಯಾಳೊ ದಾಮೋದರನ ನೆನೆದರೆ ಪಾಮರತ್ವ ಬಿಡಿಸುವನೊ ಗುಬ್ಬಿಯಾಳೊ 6 ಸಂಕರ್ಷಣನ ಧ್ಯಾನದಿಂದ ಸಂತಾನ ಅಭಿವೃದ್ಧಿಯು ಗುಬ್ಬಿಯಾಳೊ ವಾಸುದೇವನ ದಯದಿಂದ ವಂಶಉದ್ಧಾರವೊ ಗುಬ್ಬಿಯಾಳೊ 7 ಪ್ರದ್ಯುಮ್ನನ ನೆನೆದರೆ ಭೂಪ್ರದಕ್ಷಿಣೆ ಫಲವು ಗುಬ್ಬಿಯಾಳೊ ಅನಿರುದ್ಧನ [ಸೇವಿಸೆ ಪುನೀತರಹೆವೊ] ಗುಬ್ಬಿಯಾಳೊ 8 ತಿಳಿಯಿರೊ ಗುಬ್ಬಿಯಾಳೊ ಅಧೋಕ್ಷಜ ನಮ್ಮೆಲ್ಲರಿಗಾಧಾರವಾಗಿಹನೊ ಗುಬ್ಬಿಯಾಳೊ 9 ನಾರಸಿಂಹದೇವರು ನಮ್ಮ ಕುಲದೈವವೊ ಗುಬ್ಬಿಯಾಳೊ ಅಚ್ಯುತ ಲಕ್ಷ್ಮಿಯ ಕೂಡಿ ಸಚ್ಚಿದಾನಂದನೊ ಗುಬ್ಬಿಯಾಳೊ 10 ಜನಾರ್ದನದೇವರು ಜಗಕೆಲ್ಲ ಶ್ರೇಷ್ಠರೊ ಗುಬ್ಬಿಯಾಳೊ ಕ್ಷಮಿಸುವನೊ ಗುಬ್ಬಿಯಾಳೊ 11 ಹರಿನಾಮಾಮೃತಕೆ ಸರಿಧರೆಯೊಳಗೆ ಇಲ್ಲವೊ ಗುಬ್ಬಿಯಾಳೊ ಶ್ರೀಕೃಷ್ಣ ರಂಗೇಶಯೆಂಬೊ ಸಿದ್ಧಕ್ರಿಯ ಬಲ್ಲರೆ ಗುಬ್ಬಿಯಾಳೊ12 ಈ ಗುಬ್ಬಿ ಪಾಡುವರಿಗೆ ಇಹಪರವು ಸಂತತವು ಗುಬ್ಬಿಯಾಳೊ ಧರಣಿಯೊಳು ಆಚಂದ್ರಾರ್ಕ ತಾರಕವಾಗಿಹರು ಗುಬ್ಬಿಯಾಳೊ 13 ನಿತ್ಯ ಮರೆಯದೆ ನೀ ನೆನೆಮನವೆ ನಿತ್ಯ ಮನವೆ ಗುಬ್ಬಿಯಾಳೊ 13
--------------
ವಾದಿರಾಜ
ಚಿಂತೆ ಪರಿಹರ ಮಾಡೋ ಎನ್ನಯ್ಯ ಸಜ್ಜನರ ಪ್ರಿಯ ಪ ಚಿಂತೆ ಪರಿಹರ ಮಾಡೊ ಎನ್ನಯ ಚಿಂತೆ ಪರಿಹರ ಮಾಡಿ ಎನ್ನ ಅಂತರಂಗದಿ ನಿಮ್ಮ ನಿರ್ಮ ಲಂತ:ಕರುಣದ ಚರಣವಿರಿಸಿ ಸಂತಸದಿ ಪೊರೆ ಸಂತರೊಡೆಯ ಅ.ಪ ನಿಮ್ಮ ಪಾದವ ನಂಬಿಕೊಂಡಿರುವ ಈ ಬಡವನನ್ನು ಕಮ್ಮಿ ದೃಷ್ಟಿಯಿಂ ನೋಡದಿರು ದೇವ ನಿನ್ನ ಬಿಟ್ಟೆನ ಗ್ಹಿಮ್ಮತನ್ಯರದಿಲ್ಲ ಜಗಜೀವ ಭಜಕಜನ ಕಾವ ಮೂಡಿಮುಳುಗುತಿಹ್ಯದೈ ಸಮ್ಮತದಿ ಸಲಹೆನ್ನ ದಯಾನಿಧಿ ಬ್ರಹ್ಮಬ್ರಹ್ಮಾದಿಗಳ ವಂದ್ಯನೇ 1 ಆರುಮೂರರಿಕ್ಕಟ್ಟಿನೊಳು ಗೆಲಿಸೋ ಘನಪಿಂಡಾಕಾರ ಆರು ಎರಡರ ಸಂಗ ತಪ್ಪಿಸೋ ಮಹಬಂಧ ಬಡಿಪ ಘೋರ ಸಪ್ತಶರಧಿ ದಾಂಟಿಸೋ ತವದಾಸನೆನಿಸೊ ಗಾರುಮಾಡಿ ಕೊಲ್ಲುತಿರ್ಪ ದೂರಮಾಡೆನ್ನ ದುರಿತದುರ್ಗುಣ ಸೇರಿಸು ತ್ವರ ದಾಸಸಂಗದಿ ನಾರಸಿಂಹ ನಾರದವಿನುತ 2 ಪಾಮರತ್ವ ತಾಮಸವ ಬಿಡಿಸೋ ವಿಷಯಲಂಪಟ ಪ್ರೇಮ ಮೋಹ ಕಾಮ ಖಂಡ್ರಿಸೋ ಹರಲಿರುಳು ನಿಮ್ಮ ಭಜನಾನಂದ ಕರುಣಿಸೊ ಸುಚಿಂತದಿರಿಸೊ ಕಾಮಿತಜನಕಾಮಪೂರಿತ ನಾಮರೂಪರಹಿತಮಹಿಮ ಸ್ವಾಮಿ ಅಮಿತಲೀಲ ವರ ಶ್ರೀರಾಮ ಪ್ರಭು ತ್ರಿಜಗದ ಮೋಹ 3
--------------
ರಾಮದಾಸರು
ಬೇಡಿಕೊಂಬೆನೊ ಶ್ರೀಹರಿಯೆ ನಿಮ್ಮ ಅಡಿಯ ಮರೆಯೆನೊ ಪ ಬೇಡಿಕೊಂಬೆನಯ್ಯ ನಿಮ್ಮ ಅಡಿಯಪಿಡಿದು ಬಿಡದೆ ನಾನು ಗಡನೆ ಎನ್ನ ಕಡುದಾರಿದ್ರ್ಯ ಕಡಿದು ಬಯಲು ಮಾಡಿ ಹರಿಯೇ ಅ.ಪ ದೈತ್ಯಶಿಕ್ಷಕ ಚಿತ್ತಜತಾತ ಭಕ್ತರಕ್ಷಕ ಅ ನಾಥ ಪ್ರೀತ ಮುಕ್ತಿದಾಯಕ ಸತ್ಯಸಂಧನನ್ನು ಮಾಡಿ ಮತ್ರ್ಯಭೋಗದಾಸೆಬಿಡಿಸಿ ನಿತ್ಯನಿರ್ಮಲಾತ್ಮ ನಿಮ್ಮ ಭಕ್ತಿಯಿತ್ತು ಸಲಹೊ ಹರಿಯೆ 1 ಶ್ಯಾಮಸುಂದರ ಸ್ವಾಮಿ ಭಕ್ತಪ್ರೇಮ ಮಂದಿರ ರಮಾ ಸತ್ಯಭಾಮಾ ಮನೋಹರ ಪಾಮರತ್ವ ತಾಮಸ ದುಷ್ಕಾಮಿತಂಗಳ್ಹರಿಸಿ ನಿಮ್ಮ ನಾಮಜಪವು ತಪದೊಳಿರಿಸಿ ಪ್ರೇಮದಿಂದ ಸಲಹೊ ಹರಿಯೆ2 ಪದುಮನಾಭನೆ ಸದಮಲಾಂಗ ಒದಗುಬೇಗನೆ ಈ ವಿಧದಿ ಬೇಡ್ವೆ ಸುದಯವಂತನೆ ಸುದತಿ ಮಾಡಿದಂಥ ಪದದ ಕೃಪೆಯನಿತ್ತು ಎನ್ನ ಮುದದಿ ಸಲಹು ಸಿರಿಯರಾಮ 3
--------------
ರಾಮದಾಸರು
ಶರಣ ನೀನೆಲೊ ನರಹರಿ ಶರಣನೀನೆಲೊ ನರಹರಿ ಚರಣ ಪ ಶರಣ ನೀನಿರ್ದು ಮರವೆಗೂಡಿ ಜರಾಮರಣ ಪಡೆವರೇನೊ ಅ,ಪ ಯೋಗಮಾರ್ಗ ವಹಿಸಿ ನಿಜವಾದ ಭಾಗವತರ ಒಲಿಸಿ ರಾಗರಹಿತನಾಗಿ ನೀಗದ ಸಂಸಾರ ಭೋಗ ತ್ಯಜಿಸಿ ಭವರೋಗ ಗೆಲಿಯುವಂಥ 1 ಮಿಥ್ಯೆ ಮಾಯ ನೀಗಿ ಸತತ ನೀ ಸತ್ಯ ಜನಕೆ ಬಾಗಿ ಸತ್ಯಸಂಧನಾಗಿ ಚಿತ್ತಜತಾತನ ಭಕ್ತನೆನಿಸಿ ಯಮ ಮೃತ್ಯುಗೆಲಿಯುವಂಥ 2 ಪಾಮರತ್ವ ತೊರೆದು ನಿಜವಾದ ನೇಮನಿತ್ಯ ಪಿಡಿದು ಭೂಮಿಗಧಿಕ ಮಮಸ್ವಾಮಿ ಶ್ರೀರಾಮನ ನಾಮ ಭಜಿಸಿ ಮುಕ್ತಿ ಸಾಮ್ರಾಜ್ಯಪಡೆಯೆಲೊ 3
--------------
ರಾಮದಾಸರು