ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮನದೊಳಗಿರು ಹರಿಯೆ ಮೂರ್ಲೋಕ ದೊರೆಯೆ ಪ. ಮನೆದೊಳಿ(?)ಗಿರು ಬಹು ಜನರು ಪೇಳುವ ದೂರು ಎಣಿಸಲು ಶಕ್ತನಾರು ಮುಖಾಬ್ಜ ತೋರು ಅ.ಪ. ಮೂರ್ತಿ ನೀನು ಪ್ರಾಕೃತ ಗುಣಸರ್ಗದಿ ಬರುವುದೇನು ಸರ್ಗರಕ್ಷಣ ಪಾಪವರ್ಗವೆಲ್ಲವನು ನಿಸರ್ಗ ಮೀರದೆ ಮಾಳ್ಪ ದುರ್ಗಮದ್ಭುತಕರ್ಮ ದೀರ್ಘದರ್ಶಿ ಮುನಿವರ್ಗಕೊಲಿದು ನಿಜ ಮಾರ್ಗ ತೋರ್ಪ ಶ್ರೀ ಭಾರ್ಗವೀ ರಮಣಾ 1 ಜಲದೊಳಗಾಡಿದನು ಬೇರನು ಕಿತ್ತಿ ಖಳರನು ಸೀಳಿದನು ನೆಲನನಳೆದು ತಾಯಿ ತಲೆಯ ತರಿದು ನಿಜಲಲನೆಗೋಸುಗ ದೈತ್ಯ ಕುಲವ ಸಂಹರಿಸಿದ ಶಿಲೆಯನು ರಕ್ಷಿಸಿ ಕಳವಳಿಸಿದ ಕಪಿ ತಿಲಕನ ಸ್ನೇಹವ ಬಳಸಿದನೆಂಬುದು 2 ಬಾಗಿಲ ಮುಚ್ಚಿದರೆ ಗೋಡೆಯ ಹಾರಿ ಹೋಗಿ ಮನೆಯ ಒಳಗೆ ಬಾಗಿಲ ಮರೆಯಲಿ ಬಾಗಿನೋಡುತ ಮೆಲ್ಲಗಾಗಿ ಬೆಣ್ಣೆಯ ಮೆದ್ದು ಸಾಗಿ ಬರುತಲಿರೆ ನಾಗವೇಣಿಯರು ಹಿಡಿಯಲು ನೀವಿಯ ನೀಗಿ ಪುರುಷರನು ಕೂಗಿದನೆಂಬರು3 ತೊಟ್ಟಿಲೊಳಗೆ ಮಲಗಿ ನಿದ್ರೆಯಗೈವ ಪುಟ್ಟ ಶಿಶುಗಳನೆಲ್ಲ ತಟ್ಟಿ ಎಬ್ಬಿಸಿ ಕಣ್ಣಾಕಟ್ಟಿ ವಸ್ತ್ರದಿ ತಾನೆ ಚಿಟ್ಟನೆ ಚೀರಿ ಒ- ತ್ತಟ್ಟು ಎಲ್ಲರು ಕೂಡಿ ಕಟ್ಟಿದ ಕರುಗಳ ಬಿಟ್ಟ ಮೊಲೆಗೆ ಒಳ- ಗಿಟ್ಟ ಹಾಲು ಮೊಸರೊಟ್ಟಿಲಿ ಸವಿವುದೆ 4 ವಿದ್ಯೆಯ ಕಲಿಯೆಂದರೆ ಅಮ್ಮಯ್ಯ ಎನಗೆ ನಿದ್ದೆ ಬರುವುದೆಂಬುವಿ ಹೊದ್ದಿಸಿ ತಟ್ಟಿದರೆದ್ದು ಓಡುವಿ ಗೋಪೆರಿದ್ದ ಠಾವಿಗೆ ನಾನಾ ಬದ್ಧವನು ಸುರುವಿ ಸಿದ್ಧವಾಗಿ ಕಾದಿರೆ ಕೈಗೆ ಸಿಕ್ಕದೆ ಉದ್ಧವ ಗೃಹದೊಳು ಬೌದ್ಧನಂತಿರುವಿ 5 ಕುದುರೆಯ ಹತ್ತಿದರೆ ಯಾರಾದರೂ ಕದನವ ಮಾಡಲಿಹರೆ ಹೃದಯ ಮಂಟಪದಿ ನೀ ಸದರವಾಡುತಲಿರೆ ಮದನ ಜನನಿವರ ಮದಮತ್ಸರಗಳ ಒದೆದು ತೀವ್ರದಲಿ ಪದಯುಗ ಪಾಲಿಸುವುದಯ್ಯ ಗಿರೀಶ 6
--------------
ತುಪಾಕಿ ವೆಂಕಟರಮಣಾಚಾರ್ಯ
ಇಂಥಾ ದೂರುವುದೊಳಿತಲ್ಲವರೆಮ್ಮ ರಂಗಯ್ಯನು, ಹಾವಳಿ |ಅಂಥಾದು ಏನು ಮಾಡಿದನಮ್ಮ ಎಂದೆಂದಿಗು ನಮ್ಮ ||ಸಂತತಿಯೊಳು ಗುಣವಂತರೇ ಕೃಷ್ಣ ನಿ-ರಂತರ ಬಡವರನೆಂತು ದಣಿಸುವ ಪಕಣ್ಣೇ ಬಿಡುವನು ಬೆದರಿಸೆ ಮಾತರಿಯ ವನದೊಳಗಡಗಿಹ |ಮಣ್ಣು ತಿಂಬುವ ಬಾಯ್ದೆರೆವನಾರ್ಯ ಹಿತಕರ್ಮಗಳರಿಯ ||ಅನ್ನ ತಿನ್ನಲರಿಯ ಬೆಣ್ಣೆ ಮೆಲುವ ಬಲು |ಹೆಣ್ಣು ನೆರೆದು ಮತ್ತನ್ಯರೊಳು ಕಲಹೆ 1ಎಲ್ಲ್ಯಾಡೊದು ದುರ್ಗಂಧವು ಕಠಿಣಾಂಗ ನೆಲಗೆದರುವ ಶ್ರಿಂಗ |ರಿಲ್ಲದೆ ರಹದೆರೆವರ್ಭಕ ರಂಗ ಪಾಪವರಿಯ, ಮಂಗ- ||ರೊಲ್ಲಭ ಅಹಿಫಣೆಯಲ್ಲಿ ಕುಣಿದು ವಸ- |ನಿಲ್ಲದೆ ತಿರುಗುವಗೆಲ್ಲಿದೊ ವಾಚಿ2ಮೀನ ಕೂರ್ಮದಂತ್ಯುದಕದೊಳಗೆ ಆಡುವ ಕೆಸರೊಳಗೆ |ಶ್ರೀನಾರಸಿಂಹ ಸಣ್ಣವರೊಳಗೆ ಆಡುವ ತನ್ನೊಳಗೆ ||ತಾನೇ ಅಗ್ನಿಯ ನುಂಗಿ ನಭಕೇಶಗೆಮಾನವಕೊಟ್ಟಾನೆ ಪ್ರಾಣೇಶ ವಿಠಲನ 3
--------------
ಪ್ರಾಣೇಶದಾಸರು
ವಂದಿಸಿದರೆ ವಂದ್ಯರು ಪೂಜಿತರು ಮುಕುಂದಗೋವಿಂದ ಶ್ರೀಹರಿಯನ್ನುಎಂದೆಂದು ಕುಂದದಾನಂದವೈದಿಸುವಇಂದಿರೆಯರಸ ಭವಬಂಧಮೋಚಕನ ಪ.ಹತ್ತಶ್ವಮೇಧಾವಭೃಥಸ್ನಾನ ಮಾಡಲುಮತ್ರ್ಯರ್ಗೆ ಪುನರ್ಜನ್ಮಗಳಿಲ್ಲವೊಸತ್ಯಭಾಮಾಧವನಿಗೆ ನಿಷ್ಕಾಮದಿ ನಮಿಸಿಮತ್ತೊಮ್ಮೆ ನಮಿಸೆ ಮುಕ್ತಿಗೆ ಸಾಧನ 1ಕೋಟಿಸಹಸ್ರ ತೀರ್ಥಗಳಲಿ ಮಿಂದುಕೋಟಿಸಹಸ್ರ ವ್ರತಗಳಾಚರಿಸೆಕೋಟಿ ಭಾಂತಕಗೆ ನಮಿಸಿದ ಫಲಕೆ ಸರಿ ಪಾಸಟಿಷೋಡಶಕಳೆಯೊಳೊಂದಲ್ಲ2ಹೇಳೆನೆ ಇಂದಾದರು ನಮಿಸಿ ಶ್ರೀಲೋಲಶಾಙ್ರ್ಗಪಾಣಿಯನಸಾಲು ಜನ್ಮದಘವ ಹಾಳುಮಾಡಿ ಮುಕ್ತಿಓಲಗಕೆ ಕರೆವ ವೈಷ್ಣವ ಜನರ 3ಉರಶಿರದೃಷ್ಟಿಲಿ ಮನವಾಚದಲಿಚರಣಕರಗಳಲಿ ಜಾನುಗಳಲಿಧರೆಯಲಿ ಅಷ್ಟಾಂಗಪ್ರಣಾಮ ಮಾಳ್ಪರ್ಗೆಹರಿದು ಹೋಗೆ ಪಾಪವರ ಮುಕ್ತಿಈವ4ಸರುವಾಂಗವ ಧರೆಗೊಂದಿಸಿ ಭಕುತಿಲಿಹೊರಳಾಡಿ ಭೂಮಿಲಿ ಪರವಶದಿಹರಿಗೆ ನಮಿಸಲು ಮೈಗೊರೆದ ಧೂಳಿಯ ಕಣಾಪರಿಮಿತ ಸಹಸ್ರಾಬ್ದ ಪರಮಾಣ ಪದವಕ್ಕು 5ಸಿರಿಅಜಭವೇಂದ್ರಸುರರುಮಹಾಮುನಿನಿಕರನೃಪಮನುಜೋತ್ತಮರೆಲ್ಲಪರಮಭಕುತಿಲಿ ನಮಿಸೆ ಹರಿವಶನಾಗುವಹರಿಜನಕೆ ಮುಕ್ತಿಪಥಕಿದೆ ಪಾಥೇಯ 6ಅರ್ಚಿತ ಕೃಷ್ಣನ ನೋಡುತಾನಂದಾಶ್ರುಹುಚ್ಚನಂತೆ ನಮಿಸಿ ನಗುತ ಸುರಿಸಿಅಚ್ಯುತಾನಂತ ಸದ್ಗುಣನಿಧಿ ಭಕ್ತಪ್ರಿಯನಿಚ್ಚಪ್ರಸನ್ವೆಂಕಟನೆಂದುಚ್ಚರಿಸಿ7
--------------
ಪ್ರಸನ್ನವೆಂಕಟದಾಸರು