ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗೋವಿಂದ ಸಲಹೆನ್ನನು - ಸದಾನಂದಗೋವಿಂದ ಸಲಹೆನ್ನನು ಪ ಗೋವಿಂದ ಸಲಹೆನ್ನ ಕುಮುದಲೋಚನ ನಿನ್ನಸೇವಕರಡಿಯ ಸೇವಕನಯ್ಯ ಗೋವಿಂದ ಅ ಅಚ್ಯುತ ಸರ್ವೋ-ತ್ತಮನೆ ಚಿನ್ಮಯ ಗೋವಿಂದ - ನಿಶ್ಚಲಭಕ್ತಿಕ್ರಮವ ಬೋಧಿಸೊ ಗೋವಿಂದ - ಪಾಪವನೆಲ್ಲಶಮನಗೊಳಿಪ ಗೋವಿಂದ - ಲಕ್ಷ್ಮೀರಮಣನಮೋ ದಶಾವತಾರಿ ಗೋವಿಂದ 1 ಮನವೆನ್ನ ಮಾತು ಕೇಳದು ಕಾಣೊ ಗೋವಿಂದಮನವ ಗೆಲ್ಲುವ ಬಲ ಎನಗಿಲ್ಲ ಗೋವಿಂದಕನಸಿನಂತಿಹ ದೇಹ ಸ್ಥಿರವಲ್ಲ ಗೋವಿಂದಬಿನುಗು ಬುದ್ಧಿಗಳ ಬಿಡಿಸಯ್ಯ ಗೋವಿಂದನೆನಹು ನಿನ್ನೊಳಗಿಟ್ಟು ನಡೆಸಯ್ಯ ಗೋವಿಂದನೆನೆವ ದಾಸರ ಮನದೊಳಗಿರ್ಪ ಗೋವಿಂದವನಜಲೋಚನ ನಾ ನಿನ್ನವನಯ್ಯ ಗೋವಿಂದಘನ ಮಹಿಮನೆ ನಿನ್ನ ಮೊರೆಹೊಕ್ಕೆ ಗೋವಿಂದಮುನಿಗಳ ಮನದೊಳು ಮಿನುಗುವ ಗೋವಿಂದನಿನಗಲ್ಲದಪಕೀರ್ತಿ ಎನಗೇನೊ ಗೋವಿಂದಜನನ ರಹಿತ ಗೋವಿಂದ - ನಿನ್ನಡಿಗಳನೆನವು ಕೊಡೊ ಗೋವಿಂದ - ದುರ್ವಿಷಯ ವಾ-ಸನೆಯ ಬಿಡಿಸೊ ಗೋವಿಂದ - ಕುತ್ಸಿತ ಕೆಟ್ಟತನವ ಬಿಡಿಸೊ ಗೋವಿಂದ - ಸದ್ಗುಣವೆಂಬಧನವ ತುಂಬಿಸೊ ಗೋವಿಂದ - ಇದಕ್ಕೆ ಬಡ-ತನವೆ ನಿನಗೆ ಗೋವಿಂದ - ಸದಾ ನಿನ್ನಘನ ಸ್ಮರಣೆ ಕೊಡು ಗೋವಿಂದ - ಸನಕಸನಂದನಾರ್ಚಿತ ಗೋವಿಂದ 2 ಕಿನ್ನರ ಸನ್ನುತ ಗೋವಿಂದ - ಅಪರಿಮಿತಕರುಣಾಸಾಗರ ಗೋವಿಂದ - ಅರಿಯದಂಥಪರಮ ಜ್ಯೋತಿಯೆ ಗೋವಿಂದ - ಗಂಗೆಯ ಪೆತ್ತಚರಣ ನಿರ್ಮಲ ಗೋವಿಂದ - ತೆತ್ತೀಸ ಕೋಟಿಸುರರ ಪೊರೆವ ಗೋವಿಂದ - ಶ್ರೀವೈಕುಂಠಪುರದೊಳಗಿಹ ಗೋವಿಂದ - ಅಚ್ಯುತಾನಂತತಿರುಪತಿ ನೆಲೆಯಾದಿ ಕೇಶವ ಗೋವಿಂದ 3
--------------
ಕನಕದಾಸ
ಶ್ರೀಪಾದರಾಯ ನಿಮ್ಮ | ಆಪಾದ ಮೌಳಿ ಭಜಿಪಾಪಾಪಿಯಾದರು ಅವ | ಪಾಪವನೆಲ್ಲ ಕಳೆವಾ ಪ ಧೃತ - ಶ್ರೀಪತಿಯೊಲಿಮೆಯ | ಪ್ರಾಪಿಸುತೆನ್ನನುವ್ಯಾಪುತ ದರ್ಶಿಯ ಮಾಡೊ ಮಹಾತ್ಮಾ ಅ.ಪ. ವಾರಿಧಿ ಭವ ತರಣ ||ಕೀರುತಿ ತವ ಸ್ಮರಣ | ಬಾರಿಬಾರಿಗೆ ಶ್ರವಣಸೂರೆಗೊಂಬುವ ನರನ | ಸಾರಿ ಉದ್ಧರಿಪೆ ಅವನಾ ||ಧೃತ - ವಾರವಾರಕೆ ನಿನ ಪರಿವಾರದಲಿಡುಸೂರಿ ಸುವರ್ಣರ ಕರಜ ಉದಾರಾ 1 ಮೋದ ಮಾಧವ ಪ್ರಿಯ ನಿನಪಾದವ ನಂಬಿದೆ | ಬುಧ ಜನ ವಂದ್ಯಾ 2 ಚಾರು ಚರಿತೆಯ ನಾನಾಪರಿಪರಿಯಲಿ ಗಾನಾ | ವಿರಚಿಸಿ ಜನರ ಅಜ್ಞಾನಾ ||ಹರಿಸಿ ಅವರಿಗೆ ಜ್ಞಾನಾ |ಭರಣ ಪಾಲಿಸಿ ಕರುಣಬೀರಿದೆ ಸುಸಾಧನ | ಗುರು ಪರಮ ಪಾವನಾ ||ಧೃತ - ಗುರುಗೋವಿಂದ ವಿಠಲನ | ಚರಣವ ಭಜಿಸುವವರಧೃವ ಮೂರುತಿ | ನಿರುತದಿ ಕೀರ್ತಿ 3
--------------
ಗುರುಗೋವಿಂದವಿಠಲರು
ಶ್ರೀರಂಗ ರಂಗನಾಥ ಎನ್ನ ಕಣ್ಗಾಳೆದುರು ನಿಂತಿದಂತಿದೆ ಪ ವಜ್ರಮಾಣಿಕದ ಕಿರೀಟವನಿಟ್ಟು ಪ್ರಜ್ಜಲಿಸುವ ಹಣೆಯ ಕಸ್ತೂರಿಬಟ್ಟು ವಜ್ರದ ಕರ್ಣಕುಂಡಲ ಅಳವಟ್ಟು ಸಾಜದ ಅಧರಚಂದವಿನ್ನೆಷ್ಟು 1 ಕಬ್ಬುಬಿಲ್ಲನು ಪೋಲ್ವ ಪುಬ್ಬಿನ ಚಂದ ಅಬ್ಜದಂತೆಸೆವಾ ನಯನದಾನಂದ ಕುಸುಮವ ಪೋಲುವ ನಾಸಿಕದಂದ ಕದಪು ಹೊಳೆಯುತ್ತ ಬಂದ 2 ಕಂಠದೊಳಗೆ ಇಟ್ಟ ಕೌಸ್ತುಭಮಣಿಯು ಎಂಟು ಪದಕಗಳನಳವಡಿಸಿದ ಅಣಿಯು ಗಂಟೆ ಗೆಜ್ಜೆವುಡಿದಾರದ ಫಣಿಯು ಸಂಧ್ಯರಾಗವ ಪೋಲ್ವ ಪೀತಾಂಬರದಣಿಯು 3 ಶಂಖಚಕ್ರವು ಗದೆ ಆಭಯಹಸ್ತಗಳು ಪಂಕಜಮುಖಿ ಇರುವ ವಕ್ಷಸ್ಥಳವು ಶಂಕರನಪಿತನ ಪಡೆದ ನಾಭಿದಳವು ಶಂಕೆ ಇಲ್ಲದ ಕಣಕಾಲಿನ ಹೊಳವು 4 ಅಂದುಗೆ ಗೆಜ್ಜೆಗಳ ಚಂದದಿಂದಿಟ್ಟು ಕುಂದಣದ ಪಾಡಗವನಳವಟ್ಟು ಚಂದದಿಂ ವಜ್ರದಾವುಗೆಯ ಮೆಟ್ಟು ತ [ಬಂದ] ಗಂಗೆ ಪಡೆದನಖಾಪಂಕ್ತಿಗಳೆಷ್ಟು5 ವಜ್ರಾಂಕುಶ ಧ್ವಜರೇಖೆಗಳಿಂದ ಪದ್ಮಪಾದದ ಕೆಂಪುಗಳು ಬಹುಚಂದ ಹೊದ್ದಿದ ಭಕ್ತರ ಪಾಪವನೆಲ್ಲ ಒದ್ದು ಮುಕ್ತಿಯನೀವ ಮುದ್ದು ಶ್ರೀ ವೆಂಕಟಕೃಷ್ಣ 6
--------------
ಯದುಗಿರಿಯಮ್ಮ
ಅಂಜಲೇತಕೆ ಮನವೆ ಅನುಗಾಲವುಕಂಜನಾಭನ ಭಕುತಿ ಕೈಕೊಂಡ ಬಳಿಕ ಪನಾರಾಯಣನೆಂಬ ನಾಲ್ಕು ಅಕ್ಷರದಿಂದಘೋರಪಾಪವನೆಲ್ಲ ಕಳೆಯಬಹುದು ||ಶ್ರೀ ರಾಮನಾಮವೆಂಬ ಸಿಂಗಾಡಿ ತಕ್ಕೊಂಡುವೈರಿಷಡ್ವರ್ಗಗಳ ವಧೆ ಮಾಡಬಹುದು 1ಶ್ರೀ ಕೇಶವನೆ ಎಂಬ ಸಿದ್ಧ ಮಂತ್ರಗಳಿಂದಕಾಕುಕರ್ಮಗಳನ್ನು ಕಳೆಯಬಹುದು ||ವೈಕುಂಠಪತಿ ಎಂಬ ವಜ್ರವನೆ ತಕ್ಕೊಂಡುನೂಕಿ ಯಮಬಂಟರನು ನುಗ್ಗು ಮಾಡಲುಬಹುದು 2ಹರಿವಾಸುದೇವನೆಂಬ ಅಮೃತಪಾನಗಳಿಂದಮರಣ ಜನನಗಳೆರಡ ಜಯಿಸಬಹುದು ||ಅರಿತರೆ ಮನದೊಳಗೆ ಪುರಂದರವಿಠಲನಸರಸ ಸದ್ಗತಿಯನ್ನು ಸವಿಗಾಣಬಹುದು 3
--------------
ಪುರಂದರದಾಸರು