ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೆಳಗುವೆನಾರತಿಯ ನಾಂ ಪ. ನಳಿನಾಕ್ಷ ರಂಗಗೆ ನಲವಿಂದ ಪಾಡುತೆ ಅ.ಪ. ಕನಕಪಾತ್ರೆಯೊಳು ಘನಮುತ್ತುರತ್ನಂಗಳು ಮಿನುಮಿನುಗುತ್ತಿರಲು ಮನಮಂತುಬ್ಬೇರಲು 1 ನವಭಕ್ತಿಯೋಗಂಗಳಿಂ ನವಭಾವ ಪಾತ್ರಂಗಳಿಂ ನವನೀತ ಚೋರಗೆ ನಮಿಸುತ್ತೆ ನೇಮದಿಂ 2 ವರಶೇಷಶೈಲೇಶಗೆ ಶರಣಾಗತಸಂರಕ್ಷಗೆ ಕರಿರಾಜವರದಗೆ ಸುರರಾಜವಂದ್ಯಗೆ3
--------------
ನಂಜನಗೂಡು ತಿರುಮಲಾಂಬಾ
ಶ್ರೀನಿವಾಸನೆ ಗಾನಲೋಲನೆ ಸಾನುರಾಗದೊಳೀಕ್ಷಿಸೈ ಜ್ಞಾನಪೂರ್ಣನೆ ಸೂನುವೆಂಬಭಿಮಾನದಿಂ ಪರಿಪಾಲಿಸೈ ಪ. ದೀನಪಾಲಕ ದಾನವಾಂತಕ ದೈನ್ಯದಿಂ ಮೊರೆಹೊಕ್ಕೆನೈ ಜ್ಞಾನಗಮ್ಯನೆ ಭಾನುತೇಜನೆ ನೀನೇ ಗತಿಯೆಂದೆಂಬೆವೈ ಅ.ಪ. ಸಾರಸಾಕ್ಷನೆ ಶ್ರೀರಮೇಶನೆ ಸಾರಿ ಬಾ ಭವದೂರನೇ ಗಾರುಗೊಂಡೆವು ಪಾರುಗಾಣಿಸು ನೀರಜೋದ್ಭವ ಜನಕನೆ ಕಾರ್ಯಕಾರಣ ಕರ್ತೃ ನೀನಹುದಾರಯಲ್ ಜಗದೀಶನೆ ಬೇರೆ ಕಾಣೆವದಾರ ನಿನ್ನನೆÉೀ ಸಾರೆ ಬೇಡುವೆ ದೇವನೆ 1 ಸಾರ ಸಂಗ್ರಹ ಮಾಡುತೆ ಆರ್ಯಕೀರ್ತಿಯ ಸಾರಿಪಾಡುತೆ ವೀರನಾದವ ಗೈಯುತೆ ಭೂರಿ ವೈಭವವೆಲ್ಲವಂ ಧೈರ್ಯದಿಂ ನಲವೇರೆ ಕೀರ್ತಿಸಿ ಕಾರ್ಯಸಿದ್ಧಿಯ ಪೊಂದುವೋಲ್2 ನಿರ್ಗುಣಾತ್ಮನೆ ನಿರ್ವಿಕಲ್ಪನೆ ನಿತ್ಯನಿರ್ಮಲಚರಿತನೆ ಮಾರ್ಗದರ್ಶಕನಾಗಿ ನಮ್ಮೊಳಗಾವಗಂ ಕೃಪೆ ಗೈವನೇ ಸಾರ್ವಭೌಮನೆ ಸರ್ವಶಕ್ತನೆ ಶೇಷಶೈಲ ನಿವಾಸನೇ ಸಾರ್ವಕಾಲದೊಳೋವುದೆಮ್ಮನು ಪಾರ್ವತೀಪತಿ ಮಿತ್ರನೆ 3
--------------
ನಂಜನಗೂಡು ತಿರುಮಲಾಂಬಾ