ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವ ಪರಿಯಲಿ ನಿಮ್ಮನೊಲಿಸಿ ಮೆಚ್ಚಿಪ ವಿಧವುರವೆಯಷ್ಟು ತೋರದಲ್ಲ ಪ ದೇವ ದೇವೇಶ ನೀನೆಂದು ನಂಬಿರಲು ಕೃ-ಪಾವಲೋಕನದಿ ಸಲಹೊ ದೇವಅ ಫಣಿರಾಜನಾಸನದಿ ಕುಳಿತಿಹಗೆ ಅರಿವೆಯಾಸನವ ನಾನೆಂತ್ಹಾಸಲಿಘನವಾದ ಗಂಗೆಯನು ಪಡೆದವಗೆ ಕಲಶ ನೀರನದೆಂತು ಮೈಗೆರೆಯಲಿತನುವಿನ ಪರಿಮಳವು ಘಮಘಮಿಪನಿಗೆ ಸುಚಂದನವದೆಂತು ನಾ ಪೂಸಲಿಅನವರತ ನಾಭಿಯೊಳು ಶತಪತ್ರವಿಹಗೆ ಮಿಕ್ಕಿನ ಪೂವ ಮುಡಿಸಲೆಂತೈ ದೇವ 1 ಸುರುಚಿರೋಜ್ವಲ ಪೀತವಾಸನಿಗೆ ಉಡುಗೊರೆಯಅರಿವೆಯೇನನು ಪೊದಿಸಲಿವರ ಕೌಸ್ತುಭವು ಕೊರಳೊಳಗೆ ಇಪ್ಪವಗೆ ಆ-ಭರಣವಾವುದ ತೊಡಿಸಲಿತರಣಿ ಶತಕೋಟಿತೇಜನ ಮುಂದೆ ಹ್ಯಾಗೆ ನಾ-ಪೆರತೊಂದು ದೀಪವಿಡಲಿನೆರಹಿದ ಫಣಿಪತಿಯ ಸ್ತೋತ್ರದೂರನ ನಾನುಸ್ಮರಿಪೆನೆಂತಯ್ಯ ದೇವ ದೇವ 2 ವನಜಜಾಂಡ ಕೋಟಿಯುದರಂಗೆ ಆವುದನುಉಣಿಸಿ ತೃಪ್ತಿಯ ಮಾಡಲಿಅನಿಮಿಷರಿಗಮೃತವನ್ನೆರೆದವನ ತೃಷೆಯ ನೀ-ರಿನೊಳೆಂತು ಸಂತವಿಡಲಿವಿನತೆಯಾತ್ಮಜ ಪಕ್ಷದನಿಲನಿರೆ ಬೇರೆ ಬೀ-ಸಣಿಗೆಯನ್ನೇಂ ಬೀಸಲಿಅಣುರೇಣು ಪರಿಪೂರ್ಣ ಮೂರುತಿಗೆ ನಾ ಪ್ರದ-ಕ್ಷಿಣೆಯೆಂತು ಸುತ್ತಿಬರಲಿ ದೇವ 3 ಮಿಗೆ ಫಣಿಯ ಫಣದಾತಪತ್ರವಿರುವಂಗೆ ನೆರ-ಳಿಗೆ ಕೊಡೆಯನೇಂ ಪಿಡಿಯಲಿಪಗಲಿರುಳು ಸಾಮಗಾನ ಪ್ರಿಯನ ಮುಂದೆ ಗೀ-ತಗಳ ನಾನೇಂ ಪಾಡಲಿಜಗವರಿಯೆ ಲಕ್ಷ್ಮೀದೇವಿಪತಿಗೆ ಎಷ್ಟು ಹೊ-ನ್ನುಗಳ ದಕ್ಷಿಣೆಯ ಕೊಡಲಿನಿಗಮತತಿ ಕಾಣದಿಹ ಮಹಿಮನಿಗೆ ನಮಿಸುವಬಗೆಯ ನಾನರಿವೆನೆಂತೈ ದೇವ 4 ಒಲಿಸುವುದನರಿಯೆ ಮೆಚ್ಚಿಸುವ ಬಗೆಯರಿಯೆ ಹೊ-ಗಳುವ ಹೊಲಬ ನಾನರಿಯೆನುತಿಳಿದುದಿಲ್ಲವು ಷೋಡಶೋಪಚಾರದ ಪೂಜೆ-ಗಳಲೊಂದು ಪರಿಯಾದರೂನೆಲೆಯ ಕಾಣೆನು ನಿಗಮಶಾಸ್ತ್ರ ನವವಿಧ ಭಕ್ತಿ-ಯೊಳಗೊಂದು ಬಗೆಯಾದರೂಅಳಿಲಸೇವೆಯನೊಪ್ಪಿಸಿಕೊಂಡು ಶರಣನ ಸಲಹೊನೆಲೆಯಾದಿ ಕೇಶವನೆ ಸ್ವಾಮಿ - ಪ್ರೇಮಿ5
--------------
ಕನಕದಾಸ
ಎಂಥಾದ್ದು ರಾಮನ ರೂಪಿನ್ನೆಂಥಾದ್ದು ಪ ಎಂಥಾದ್ದು ಶ್ರೀರಾಮನ ರೂಪಾ ನಿಂತು ಭಜಿಪತ್ಯಾನಂದಗೊಳಿಪಾ ಸಂತ ಕುಮುದ ಮಿತ್ರನು ತಾನೆನಿಪಾ ಆಹಾ ಚಿಂತಿಪರ ಜಗತ್ರತ್ತಿವಾಸರು ನಿರುತದಿ ಅಂತರಂಗದ ಜ್ಞÁನ ಚಕ್ಷು ಗೋಚರ ರೂಪಿನ್ನೆಂಥದ್ದು1 ಸುಷ್ಟವಾದನಿಷ್ಟಗಳು ಎಷ್ಟು ಬಳಲಿಪವು ಪಗಲಿರುಳು ಕಷ್ಟಬಡುತಿಹವಷ್ಟಾಂಗಗಳು ಆಹಾ ದೃಷ್ಟಗೋಚರ ಸ್ವಾಮಿ ಕಷ್ಟಕಳೆದು ನಮ್ಮ ನಿಷ್ಟಪೊಯ್ದೋಡಿಸೆ ತುಷ್ಟಗೊಳಿಪ ರೂಪಿನ್ನೆಂಥಾದು 2 ಸ್ಥಿರಮೂರ್ತಿ ನೀನಹುದಲ್ಲೆ ಸುರವೃಂದಕೆ ನೀ ಚೆಂದನಲ್ಲೆ ಮರುಳು ಮನುಜ ನಾನು ಮರೆದು ಬಳಲಿಪೆನು ಕರವ ಮುಗಿವೆ ತೋರಂಥಾದು 3
--------------
ನರಸಿಂಹವಿಠಲರು
ಏನು ಮರುಳಾಗುವೆಯೇ ಎಲೆಮಾನವ ನಿನ್ನ ಮಾನಿನಿಯ ಗುಣಕೆ ನೀ ಹಿಗ್ಗಿ ಹಿಗ್ಗಿ ಪ ದಾನ ಧರ್ಮಗಳ ಕೊಡಬೇಕೆಂದರೊಡ ಬಡಲು ಹೀನ ಗುಣಗಳನೆ ತಾ ಸೇವಿಸುವಳು ಜ್ಞಾನ ಮೋಕ್ಷಾದಿಗಳ ಹಾದಿಯನುಕಟ್ಟಿ ಭವ ಕಾನನವನೆ ಹೊಗಿಸಿ ತೊಳಲಿಸುವಳು 1 ನರಕವನು ತನ್ನಲ್ಲಿ ನೆಲೆಮಾಡಿ ಕೊಂಡಿಹಳು ಪರಿಪರಿಯ ಮೋಹಗಳ ಬೀಸುತಿಹಳು ಸ್ಮರನ ಬಾಣವ ಮಾಡಿ ಸಾಲು ಗೊಲೆಕೊಲ್ಲುವಳು ಅರಿಯದವರಂತೆ ಮಿಣ್ಣಗೆ ಇರುವಳು 2 ತನ್ನಮನ ಬಂದಂತೆ ಚರಿಸುವಳು ಪಗಲಿರುಳು ಕನ್ನಗೊಯ್ಕರ ವೋಲು ಕೊರೆಯುತಿಹಳು ಭಿನ್ನಭಾವದಿ ನಡೆದು ಮನೆಯ ಪಾಲ್ಮಾಡುವಳು ಕಣ್ಣಿನೊಳು ಕಂಡೊಡವೆಗಳನಿರಿಸಳು 3 ಸುದತಿ ಯಾಕಾರೆ ಯಾಗಿಹಳು ನೋಯೆ ನುಡಿವಳು ಕಂಡ ಕಂಡವರೊಳು ಹೋಯೆಂದು ಕೂಗುವಳು ಶಿಕ್ಷಿಸಳು ನಿನ್ನನುರೆ ಬಾಯೊಳಗೆ ಭಯಬಿಡಿಸಿ ಹಾಗಿಸುವಳು 4 ಕಾಮ ಕ್ರೋಧಾದಿಗಳ ಕೀಲ ಬಲಗೊಳಿಸುವಳು ಪ್ರೇಮ ಗೆಡಿಸುವಳೆಲ್ಲ ಬಾಂಧವರನು ಭೂಮಿಯೋಳಗಧಿಕ ಭೀಮನ ಕೋಣೆ ಲಕ್ಷ್ಮೀಪತಿಯ ನೆನೆನೆನೆದು ಸಖಿಯಾಗು ಕಂಡ್ಯಾ 5
--------------
ಕವಿ ಪರಮದೇವದಾಸರು
ನಿತ್ಯ ಸ್ಮರಿಸಿ ಕೃತಕೃತ್ಯನು ನೀನಾಗೊ ಪ ಕರ ಕಂ- ಜೋತ್ಥರಾದ ಗುರು ಅ.ಪ ಸುತ್ತಲು ಬಿಡದೆ ಧರಿತ್ರಿಯೊಳಗೆ ಸುಕ್ಷೇತ್ರಗಳಲಿ ಚರಿಸಿ ಹಸ್ತಿ ಗಣಕೆ ಪಂಚ ವಕ್ತ್ರರೆಂದು ಕರಿಸಿ ಛಾತ್ರ ವರ್ಗ ಸಂಯುಕ್ತರಾಗಿ ಸುಖತೀರ್ಥರ ಸುಮತಕೆ ಸಂಸ್ಥಾಪಕ ಗುರು 1 ಏನು ಕರುಣವೊ ಜ್ಞಾನಿಗಳನು ಧನದಾನದಿ ದಣಿಸುತಲಿ ಕ್ಷೋಣಿ ವಿಬುಧರಿಗೆ ನ್ಯಾಯ ಸುಧಾರಸ ಪಾನ ಮಾಡಿಸುತಲಿ ದೀನ ಜನಕೆ ಸುರಧೇನು ಎನಿಸಿದ ಮಹಾನುಭಾವರೆಂದು ಸಾನುರಾಗದಲಿ 2 ಶ್ರೀರಾಮನ ಪದಪದುಮ ನೋಳ್ಪಜನರ ಜನುಮ ಧೀಮಜ್ಜನರಿಗೆ ಕಾಮಿತ ಗರಿಯುವ3 ತರಣಿಯೋಳ್ಪಗಲಿರುಳು ಭವಶರಧಿಯ ದಾಟಿಸಲು ವಸನದಲಿ ಪರಿಶೋಭಿತ ತನು 4 ದುರಿತ ತಮಕೆ ದಿನಕರ ಸಮರೆನಿಸುತಲಿ ಸಿರಿ ಕಾರ್ಪರ ನರಹರಿಯ ಚರಣಯುಗ್ಮ ಸ್ಮರಿಸುತ ಹರುಷದಲಿ ಧರೆಯೊಳು ಪಂಢರ ಪುರ ಸುಕ್ಷೇತ್ರದಿವರತನುವಿರಿಸಿದ ಪರಮ ಮಹಿಮ ಗುರು 5
--------------
ಕಾರ್ಪರ ನರಹರಿದಾಸರು
ನಿನ್ನ ಪದ ಧ್ಯಾನಿಪರು ಪಗಲಿರುಳು ನಿನ್ನ ಭಕ್ತರು ಹರಿ ನಿನ್ನ ರೂಪ ನೆನೆನೆನೆದು ಸ್ಮರಿಸಿ ಮನದಲಿ ನಿಲಿಸಿ ಸ್ತುತಿಸಿ ಪಾದ ಧೂಳು ಶಿರದಲ್ಲಿ ಧರಿಸುವರು ಭಕ್ತರು ನಿನ್ನ ರೂಹವ ಮನಸಿನ ಜಗಲಿಯಲಿ ನಿಲಿಸುವರು ಭಕ್ತರು ನಿನ್ನ ನಂಬಿ ಸಕÀಲಕಾರ್ಯ ನಿರ್ವಹಿಸುವರು ಭಕ್ತರು ಹರಿ ನಿನ್ಹೊರತು ಅನ್ಯರನು ನೆನೆಯರೊ ಪನ್ನಗಾದ್ರಿನಿವಾಸ ಶ್ರೀ ಶ್ರೀನಿವಾಸ ನಿನ್ನ ಭಕ್ತರ ಸಂಗಕೊಡೊ ಎನಗೆ ಸರ್ವೇಶ
--------------
ಸರಸ್ವತಿ ಬಾಯಿ
ಲೋಕನೀತಿ ಇಳೆಯೊಳಗೆ ದೇಹತಾಳಿ ಬಂದೆಲ್ಲಾ ತಮ್ಮಾ ಗಳಸಿ ಮನೆ ಹೆಂಡಿರು ಮಕ್ಕಳಿಟ್ಟಿಲ್ಲಾ ಬಲಿಸಿ ಹಣ ಹೊನ್ನು ಹೂಳಿಟ್ಟಿಲ್ಲಾ ತಮ್ಮಾ ಒಲಿದು ಉಂಡಿ ವಿಷಯ ಸುಖವಾ ಪೇಳಲ್ಲಾ 1 ತೆರಪೀರಾದೆ ಜನಿಸಿದಾವು ಸುತ್ತಲು ಪರಿಪರಿಯ ಸುಖದುಃಖ ಪಗಲಿರುಳು ತಮ್ಮಾ ಇರದೆಯೊದಗಿ ದಣಿಸಿದಾವು ನಿನ್ನ ಮರುಳೆ 2 ಯಮನವರು ಬರುವದು ಮರೆತೇಯ ತಮ್ಮಾ ರಮಣೀ ಮೋಹಾ ಕೇಳಿರು ನೀನರಿಯಾ ಅಮಿತ ಧನ ಬಳಗ ಇನ್ನೆಲ್ಲಯ್ಯಾ ತಮ್ಮಾ ನಮೋ ನರಸಿಂಹವಿಠಲ ಎನ್ನಯ್ಯ 3
--------------
ನರಸಿಂಹವಿಠಲರು