ನಿಮ್ಮಿಚ್ಛೆ ಏನೇನು ಇಲ್ಲ ಎಲ್ಲಾ ಪರಮಾತ್ಮ ನಾಟ ಪ
ಪಗಲಿರುಳಾರಿಂದಬಹುದು ರವಿಶಶಿ ದಿಗುವಿವರವ
ಬೆಳಗುತಲುದಿಸುವರು ಗಗನ ಮಾರ್ಗದಿ ಮಳೆ ಬಹುದು
ಜಗದುದರನಾಟದಿ ಸೃಷ್ಟಿ ಸ್ಥಿತಿಲಯವಹುದು 1
ಮುಳಗದಂತೆ ಇಳೆಯು ಇರುತಿಹುದು
ಸುಳಿದು ಗಾಳಿಯು ಬೀಸುತಿಹುದು ಮೃತ್ಯು
ಕಾಲ ಬಳಿ ಕೊಲ್ಲುತಿಹುದು 2
ನಾನು ಮಾಡಿದೆನೆನ್ನುತಿಹುದು
ಕೆಡಿಸಿದನೆನ್ನುತಿಹರು 3
ಬಾಲ್ಯಯೌವನವು ತೋರುವುದು ನಿನ್ನ
ಕಾಲ ಕಾಲಕಾಗುವುದಾಗು ತಿಹುದುವಧಿ
ಕಾಲತೀರಲು ತನಗೆ ತಾ ಲಯವಹುದು 4
ಉಳ್ಳಷ್ಟ ಮೀರ ದಂತಿಹುದು ಎಲೆ
ನಿಲ್ಲದೊಡುವ ವಾಯುಸುತನ ಕೋಣೆಯ ಲಕ್ಷ್ಮೀ
ಊಳಿಗ ಸಾಗುತಿಹುದು 5