ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಕ್ಷಿಸೊ ಎನ್ನ ರಕ್ಷಿಸೋ ಪ ರಕ್ಷಿಸು ಎನ್ನನು ಅಕ್ಷಯಗುಣಪೂರ್ಣ ಲಕ್ಷುಮಿರಮಣನೆ ಪಕ್ಷಿವಾಹನನೇ ಅ.ಪ ಪಾದವಿಲ್ಲದೆ ಜಲದೊಳು ಮುಳುಗಾಡಿ ವೇದಚೋರಕನನ್ನು ಸೀಳಿ ಬೀಸಾಡಿ ವೇದಾಚಲದೊಳು ನಿಂತು ಕೈ ನೀಡಿ ಸಾಧು ಸಜ್ಜನಪಾಲ ನೀ ದಯಮಾಡಿ 1 ವಾರಿಧಿ ಮಥನದಿ ಸುರರಿಗೆ ಒಲಿದು ಮೇರು ಮಂದರವನ್ನು ನೀ ಹೊತ್ತೆ ಒಲಿದು ವಾರಿಜಾಕ್ಷನೆ ವೈಕುಂಠದಿಂದಿಳಿದು ಊರಿದೆ ಚರಣವ ಗಿರಿಯೊಳು ನಲಿದು 2 ಧರಣಿಯ ಒಯ್ದ ದಾನವಗಾಗಿ ನೀನು ಹರಣದ ಸೂಕರನಂತಾದುದೇನು ಚರಣ ಸೇವಕರಿಗೆ ನೀ ಕಾಮಧೇನು ಕರುಣದಿ ಸಲಹೆನ್ನ ನಂಬಿದೆ ನಾನು 3 ತರಳನು ಕರೆಯೆ ಕಂಬದೊಳುದಿಸಿದೆಯೊ ದುರುಳ ದಾನವರ ಪ್ರಾಣವ ವಧಿಸಿದೆಯೊ ಕರಳಮಾಲೆಯ ಕೊರಳೊಳು ಧರಿಸಿದೆಯೊ ಮರಳಿ ಬಂದವ ಫಣಿಗಿರಿಯನೇರಿದೆಯೊ 4 ಕೋಮಲ ರೂಪದಿ ಭೂಮಿಯನಳೆದೆ ಆ ಮಹಾಬಲಿಯ ಪಾತಾಳಕ್ಕೆ ತುಳಿದೆ ಸ್ವಾಮಿ ಪುಷ್ಕರಣಿಯ ತೀರದಿ ಬೆಳೆದೆ ಪ್ರೇಮದಿ ಭಕ್ತರ ಕಾಮಿಸಿ ಪೊರೆದೆ 5 ತಾತನಪ್ಪಣೆಯಿಂದ ಮಾತೆಗೆ ಮುನಿದೆ ಜಾತಿಕ್ಷತ್ರಿಯರ ವಿಘಾತಿಸಿ ತರಿದೆ ನೂತನವಾಗಿಹ ನಾಮದಿ ಮೆರೆದೆ ಧಾತುಗೆಟ್ಟೆನು ಸ್ವಧೈರ್ಯಗಳಿರದೆ 6 ದಶರಥನುದರದಿ ಶಿಶುವಾಗಿ ಬಂದೆ ವಸುಮತಿ ತನುಜೆಯ ಕುಶಲದಿ ತಂದೆ ಅಸುರರ ಹೆಸರನುಳಿಸದೆ ನೀ ಕೊಂದೆ ಕುಸುಮನಾಭನೆ ಶೇಷಗಿರಿಯಲ್ಲಿ ನಿಂದೆ 7 ಮಧುರೆಯೊಳುದಿಸಿ ಗೋಕುಲದಲ್ಲಿ ಬೆಳೆದೆ ಉದಧಿಯ ಮಧ್ಯದಿ ದುರ್ಗವ ಬಲಿದೆ ಹದಿನಾರು ಸಾವಿರ ಸತಿಯರ ನೆರೆದೆ ಉದಯವಾದೆಯೊ ವೇದಗಿರಿಯೊಳು ನಲಿದೆ 8 ಶಶಿಮುಖಿಯರನು ಮೋಹಿಸುವಂಥ ಬಗೆಗೆ ವ್ಯಸನವ ಬಿಡುವುದುಚಿತವೇನೊ ನಿನಗೆ ವಸುಧೆಗುತ್ತಮವಾಗಿ ಎಸೆವಂಥ ಗಿರಿಯೊಳು ಹಸನಾಗಿ ನಿಂತಿಹ ಚರಣ ಸನ್ನಿಧಿಯೊಳು 9 ವಾಜಿಯನೇರಿಯೆ ನೇಜಿಯ ಪಿಡಿದೆ ಮಾಜುವ ಕಲಿಯನ್ನು ಕಡೆಯೊಳು ಕಡಿದೆ ಮೂಜಗದೊಡೆಯನ ಮನದೊಳು ಇಡುವೆ ಮಾಜ ಬೇಡೆಲೊ ವೇಂಕಟೇಶ ಎನ್ನೊಡವೆ 10 ಹತ್ತವತಾರದ ವಿಸ್ತಾರದಿಂದ ಕರ್ತು ವರಾಹತಿಮ್ಮಪ್ಪನು ನಿಂದ ಭೃತ್ಯವತ್ಸಲನಾಗಿ ಭೂಮಿಗೆ ಬಂದ ಅರ್ಥಿಯೋಳ್ಭಕ್ತರ ಸಲಹುವೆನೆಂದ 11
--------------
ವರಹತಿಮ್ಮಪ್ಪ
ಭಜನೆಯ ಪದ ಭಕ್ತ ವತ್ಸಲ ಸ್ವಾಮಿ ಭಯನಿವಾರಣ ದೇವ ಭರದಿಂದ ಬಂದುದ್ಯಾಕೆ ಪೇಳಯ್ಯಾ ಪ ಭಾರ ಹೊತ್ತು ಬಂದೆಯಾ ಕೋರೆದಾಡಿಗಳಿಂದ ಧಾರೂಣಿ ಎತ್ತೀ ತಂದು ಭಾರ ವಾಯಿತೆಂದು ಬಂದೆಯಾ 1 ಬಾಲಕಾನಾ ನುಡಿಯ ಕೇಳಿ | ಬೇಗದಿಂದಾ ಬಂದೆಯಾ ದುರುಳನ್ನ ಕೊಂದು ಕರುಳ ಮಾಲೆಯಧರಿಸಿ ನೀ ತರಳಗಭಯವಿತ್ತು ಬಂದೆಯಾ2 ಬಲಿಯ ದಾನಾಬೇಡಿ ನೀನು ಕೊಡಲಿ ಪಿಡಿದೂ ನಿಂತೆಯಾ ಮಡದಿಯಾ ಕದ್ದವನ ಬಿಡದೆ ಬೆನ್ನಟ್ಟಿಕೊಂಡು ಸಡಗರದಲಿ ನೀ ಬಂದೆಯಾ 3 ಮಧರೇಲಿ ಹುಟ್ಟಿ ಮಲ್ಲಾರ ಮಡುಹೀ ಮಾವ ಕಂಸನ ಕೊಂದು ಬಂದೆಯಾ ಆನಂದಿಂದಿಲ್ಲಿ ಬಂದೆಯಾ 4 ವಸನಾ ವಿಲ್ಲದೆ ನೀನು ಪಶುವನ್ನೇರಿಕೊಂಡು ವಸುಧೆಯ ಒಳಗೆಲ್ಲಾ ತಿರುಗೀದೆಯಾ ನೀ ಬಂದೆಯಾ5 ಕರಿಯಾ ಮೊರೆಕೇಳಿ ನೀ ತ್ವರಿತಾದಿಂದಾ ಬಂದೆಯಾ ಮ ಕರಿವರದನೆಂದೆನಿಸಿಕೊಂಡೆಯಾ 6 ಕಷ್ಟ ಪಡುವಾ ಜನರ ಕಂಡು ಕಡುದಯದಿಂ ಬಂದಿಯಾ ಪಕ್ಷಿವಾಹನನೇ | ಲಕ್ಷಮಿರಮಣನೆ | ಕಟಾಕ್ಷವನೇ ಬೀರುವಿಯಾ 7 ಹತ್ತವತಾರವ ಎತ್ತಿ ಬೇಸತ್ತು ನೀ ಮತ್ತೆ ನೀನಿಲ್ಲ ಬಂದಿಹೆಯಾ ಬರುವರು ಕಂಡೆಯಾ 8 ಲಕ್ಷ್ಮಿ ಇಲ್ಲದೆ ನಾನಿರೆನೆನುತಲಿ ವೈಕುಂಠ ಬಿಟ್ಟು ಬಂದೆಯಾ ಭಕ್ತಾರ ಸಲಹಲು ಬಂದಿಹೆಯಾ 9 ಹುಡುಕೀಕೊಂಡಿಲ್ಲೇ ಬಂದಿಹೆಯಾ 10 ಪಾಪನಾಶಿನಿ ಸ್ನಾನ ಮಾಡೋರು | ನಿನ್ನ ಧ್ಯಾನ ಬೇಡೋರು ಮನದಿಕ್ಷ್ಟಾರ್ಥಗಳ ಸಲಿಸಲು | ಆತೂರದಿಂದಲಿ ಬಂದೆಯಾ 11 ರೀತಿಗಳಿಂದ ಸೇವಿಸುವರು ನಿನ್ನ ಕೆರಂಡಾಡುವರು 12 ಬಳಿ ಬಂದಿಹರು ಬೇಡುತಾ ನಿಂದಿಹರೂ13 ಪಡುತಲಿ ಬಂದಿಹರು ಸಂತಯಿಸಬೇಕೆನುತ ಬಂದಿಹೆಯಾ14 ಬಳಿ ಬಂದಿಹರೂ ಬೀಸಾಡಲೂ ಬಂದಿರುವಿಯಾ 15 ಬಂದಿಹರೂ ನಿನಗೊಂದಿಸುವರೂ 16 ಹೆಜ್ಜೆಗೆ ನಿನ್ನ ವಂದಿಸುತಲೀ ಬಾಷ್ಟಗಳ ಸುರಿಸುವರೂ 17 ನಲಿಯುವರೂ ಕುಣಿ ದಾಡುವರೂ 18 ದೋಬಿಕೊಳ್ಳುತ ನೀ ನಿಂತಿರುವೇ ಯಲ್ಲಾನುಕಸಕೊಂಡು ಕಳುಹುವಿಯೇ 19 ತೀರೀತೆಂದು ತಿಳಿಯುತಲೀ ಧನ್ಯರಾದೇವೆನುತ ತೆರಳುತಿಹರೂ 20 ಮೇಲಾದ ಭಕ್ಷಗಳ ಬಡಿಸುವೋರು
--------------
ರಾಧಾಬಾಯಿ