ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿತ್ಯ ಶುಭಮಂಗಳ ಪ ಶ್ರೀರಂಗನಾಥನಿಗೆ ಮೂರಂಗವೇಷನಿಗೆ ಮಾರಾರಿಸಖನೆಂಬ ಮದನಪಿತಗೆ ನೂರೆಂಟುತಿರುಪತಿಗೆ ಕಾರಣನು ನಿಜದಿವ್ಯ ವೀರವೈಷ್ಣವನೆಂಬೊ ಮಹಾರಾಜಗೆ 1 ನೀಲಕಂಠನಪ್ರಿಯಗೆ ಮೇಲುಕೋಟೆಯ ಧೊರೆಗೆ ಏಳುಸುತ್ತಿನ ಕೋಟೆಯೊಳಗಿರುವಗೇ ಕಾಳೆಕೊಂಬುಧ್ವನಿಯ ಕೇಳುವಾನಂದನಿಗೆ ವಾಲಿಯನು ಕೊಂದಂತ ವೋಂಕಾರಗೆ 2 ಶಂಕರಪ್ರಿಯನಿಗೆ ಶ್ರೀಪಂಕಜಾಕ್ಷನಿಗೆ ಕುಂಕುಮಾಂಕಿತ ಪಕ್ಷಿವಾಹನನಿಗೆ ಕಂಕಣವು ಕರದೊಳಗೆ ಕಟ್ಟಿ ವೊ ಶ್ರೀಗುರು [ವಂಕ]ತುಲಸಿರಾಮದಾಸ ಪೋಷಿತನಿಗೆ 3
--------------
ಚನ್ನಪಟ್ಟಣದ ಅಹೋಬಲದಾಸರು
ನಿತ್ಯ ಶುಭಮಂಗಳಂ ಪ. ವಸುದೇವತನಯನಿಗೆ ವೈಕುಂಠನಿಲಯನಿಗೆಕುಸುಮನಾಭನಿಗೆ ಕೋಮಲರೂಪಗೆಯಶೋದೆನಂದನಗೆ ವಸುಧೆಯ ರಮಣನಿಗೆನಸುನಗೆಯೊಳೊಪ್ಪುವ ನರಸಿಂಹಗೆ1 ಕೌಸ್ತುಭ ಹಾರಗೆಕನಕಾಂಬರಧರನಿಗೆ ಕಾರುಣ್ಯರೂಪನಿಗೆಸನಕಾದಿ ಮುನಿವಂದ್ಯ ನರಸಿಂಹಗೆ2 ಪಂಕಜನಾಭನಿಗೆ ಪಾಂಚಾಲಿರಕ್ಷÀಕಗೆಲಂಕೆಯನು ವಿಭೀಷಣನಿಗಿತ್ತವಗೆಕುಂಕುಮಾಂಕಿತನಿಗೆ ಕುವಲಯನೇತ್ರನಿಗೆಬಿಂಕದಿಂದಲಿ ಮೆರೆವ ನರಸಿಂಹಗೆ 3 ಪಕ್ಷಿವಾಹನನಿಗೆ ಪರಮಪಾವನನಿಗೆಕುಕ್ಷಿಯೊಳು ಜಗವನಿಂಬಿಟ್ಟವನಿಗೆಲಕ್ಷುಮೀಕಾಂತನಿಗೆ ಲಕ್ಷಣವಂತನಿಗೆಲಕ್ಷಣದೊಳೊಪ್ಪುವ ನರಸಿಂಹಗೆ4 ಭಕ್ತವತ್ಸಲನಿಗೆ ಭವದುಃಖದೂರನಿಗೆಮುಕ್ತಿದಾಯಕಗೆ ಚಿನ್ಮಯರೂಪಗೆಮಿತ್ರೆರುಕ್ಮಿಣಿ ಸತ್ಯಭಾಮೆಯರರಸನಿಗೆನಿತ್ಯಕಲ್ಯಾಣ ಶ್ರೀಹಯವದನಗೆ 5
--------------
ವಾದಿರಾಜ