ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಕ್ಷತ್ರದಾರತಿ ಬೆಳಗೀರೇ ಜಗ ದ್ರಕ್ಷ ಕೃಪಾನಿಧೇ ಪಕ್ಷಿವಾಹನಗೆ ಪ ಪಕ್ಷಿಯು ತಾನಾಗಿ ಪ್ರಜ್ವಲಿಪಾ ಯಕ್ಷರಕ್ಷಕ ಸರ್ವಶಿಕ್ಷಾ ದಯಾಕರ ಲಕ್ಷ್ಮೀಪತಿಯಾದ ಮೋಕ್ಷದಾಯಕಗೇ 1 ಆದಿರೂಪನಿಗೆ ಆಧ್ಯಾತ್ಮನಾದವನಿಗೆ ಸಾಧುಶಿಖರನಾದ ಸರ್ವಸ್ವತಂತ್ರಗೆ ನಾದಬಿಂದು ಕಳೆಯೊಳಾಡುತಿರುವವಗೆ 2 ಅಖಿಳಾಂಡಕೋಟಿ ಬ್ರಹ್ಮಾಂಡನಾಯಕನಿಗೆ ಪ್ರಕಟಿತಮಾಗಿಹ ಪರತತ್ವಗೆ ಚಿಕಟಾಯಿಸಿದ ನಮ್ಮ ಗುರುವು ತುಲಸಿರಾಯಾ ಸಖನಾದ ಶಿವಗೆ ಶಂಕರಗೆ ಶ್ರೀಹರಿಗೆ 3
--------------
ಚನ್ನಪಟ್ಟಣದ ಅಹೋಬಲದಾಸರು
ಸಾಮಜ ವರದಗೆ ಮಾಮನೋಹರಗೆ ಕಾಮನ ಪಿತ ಶಾಮವರ್ಣ ಶ್ರೀಹರಿಗೆ ವಾಮದೇವನ ಸಖ ಸೋಮವದನ ಹರಿಗೆ ಕಾಮಿನಿ ಸತ್ಯಭಾಮ ಪತಿಗೆ ಹೊಸ ಹೇಮದಾರುತಿಯ ಬೆಳಗಿರೆ 1 ಲಕ್ಷ್ಮೀಯ ಅರಸಗೆ ಪಕ್ಷಿವಾಹನಗೆ ಮೋಕ್ಷದಾಯಕ ಪಾಂಡವ ಪಕ್ಷ ಶ್ರೀಹರಿಗೆ ವಕ್ಷಸ್ಥಳದಿ ಲಕ್ಷ್ಮೀಯ ಪೊರೆವ ಕುಕ್ಷಿವಳಗೆ ಜಗವ ರಕ್ಷಿಸುವ ಹರಿಗೆ ಲಕ್ಷದಾರತಿಯ ಬೆಳಗಿರೆ 2 ಭೋಗಿ ಶಯನಗೆ ಬೇಗದಿಂದಲಿ ಭಕ್ತರ ಪೊರೆವಗೆ ವಾಗೀಶವಂದ್ಯ ಶ್ರೀ ಗುರು ವಿಜಯವಿಠ್ಠಲ ಮಂಗಳ ಮಹಿಮ ತುಂಗ ಚರಿತ ಹರಿಗೆ ಮಂಗಳಾರುತಿಯ ಬೆಳಗಿರೆ 3
--------------
ವಿಜಯದಾಸ