ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರೆದರೆ ಓ ಓ ಎನಬಾರದೆ ಮರೆತರು ಕೂಗಿನ ದನಿಕೇಳದೆ ರಂಗ ಪ ಶರಣಜನರು ಸಾಸಿರವಿದ್ದರೇನೋ ಮೊರೆಯಿಡುವವ ಕಂಡರರಿವಾಗದೇನೋ ಅ.ಪ ಲಕ್ಷಜೀವಿಗಳನ್ನು ರಕ್ಷಿಸುವವನೆಂದು ವಕ್ಷದೊಳಿರುವ ಶ್ರೀಲಕ್ಷ್ಮಿ ಹೇಳುವಳು ಪಕ್ಷಿರಾಜನ ಫಣಿಯಕ್ಷನಂಗನೆಯರು ಅಕ್ಷರ ಲೋಕಾಧ್ಯಕ್ಷನೆನುವರು 1 ಯೋಗವನರಿಯೆನು ಯಾಗವನರಿಯೆನು ತ್ಯಾಗ ಮಾಡುವ ಬುದ್ಧಿ ಎಳ್ಳನಿತಿಲ್ಲ ರಾಗ ರಚನೆಗಳ ಅರಿವೆನಗಿಲ್ಲ ನಾಗಶಯನ ಕಾಯೋ ಮಾಂಗಿರಿರಂಗ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಗರುಡದೇವನೇ ಪೊರೆಯೊ ಎನ್ನನು ಹರಿಯ ವಾಹನನಾಗಿ ಮೆರೆಯುವ ಗರುಡದೇವನೇ ಪ ಮಾತೆಯ ಮಾನವನುಳಿಸಲೋಸುಗ | ಸುಧೆಯ ಕಲಶವ ಪೊತ್ತು ತಂದೆಯೋ 1 ಹರಿಯು ನಿನ್ನೊಳು ಪೇಮದಿಂದಲೀ ಧರಣಿಯೊಳವತರಿಸಲೊಲ್ಲನು 2 ರಾಕ್ಷಸಾರಿ ರಾಜೇಶ ಹಯಮುಖ ಪಕ್ಷಿರಾಜನೊಳಿಪ್ಪ ಭಾಗ್ಯವು 3
--------------
ವಿಶ್ವೇಂದ್ರತೀರ್ಥ
ರಕ್ಷೀಸಬೇಕೆಮ್ಮನನುದಿನದಲ್ಲಿ |ಪಕ್ಷಿರಾಜನೆ ಹರೀಸ್ಯಂದನಾ ಸ್ವಾಮಿ ಪಇಂದ್ರಲೋಕಕ್ಕೆ ಪೋಗಿ ಕಲಹ ಮಾಡಿಪೀಯೂಷ|ತಂದನುಜರಿಗಿತ್ತ ಧೀರನೆ |ಸಿಂಧೂವಿನೊಳಗಿದ್ದಕೂರ್ಮಗಜಮಂದಿಯಾ |ತಿಂದು ದಕ್ಕಿಸಿಕೊಂಡ ವೀರನೇ 1ಪಾದಪ ಮುರಿದು ವಾಲಖಿಲ್ಲ್ಯೆರ ಪೋಷಿಸಿ |ಮೋದದಿಂದ ವರವು ಪಡಿಯೋ ||ಮಾಧವನಂಘ್ರಿ ಕಮಲದೊಳಗೆ ಇಟ್ಟ |ಹೇ ದಯಾಂಬುಧಿ ನಿನಗೆಣೆ ಯಾರೋ 2ಅರುಣಾನುಜ ಮಾತೆಯ ಬಯಕೆ ಪೂರೈಸೀದ |ಪರಮಸಮರ್ಥ ಭಕ್ತವತ್ಸಲಾ ||ಉರಗಾಶನನೆ ನಿನ್ನ ಪ್ರಾರ್ಥಿಸುವೆನುನಿತ್ಯ|ಹರಿಸೇವೆ ವಿನಹ ಮತ್ತೊಂದೊಲ್ಲೆನೊ 3ಪ್ಲವಗರ ಪಾಲಿಸಿದೆ ರಘುಜಾನ ಒಲಿಸಿದೆ |ತವಕಬಲಿವೈದ ಮುಕುಟ ತಂದೆ ||ದಿವಿಜರಿಗೆ ಸಹಾಯವಾದೆ ವಿಪ್ರರ ಕಾಯ್ದೆ |ಅವರಾರೇನರಿಯರೊ ನಿನ್ನ ಲೀಲೆ 4ಶ್ರೀನಾಥನ ಪಾದಾಬ್ಜದಲ್ಲಿನಿರತಮನ |ತಾನಿರುವಂತಾಗಲಿ ಖೇಚರಾ ||ಮೌನಿ ಕಶ್ಯಪ ಜಾತಾ ಲಾಲಿಸುವದೆನ್ನ ಮಾತಾ |ಪ್ರಾಣೇಶ ವಿಠಲನ ನಿಜದೂತ 5
--------------
ಪ್ರಾಣೇಶದಾಸರು
ರಂಗನಾಯಕಸ್ವಾಮಿ ರಾಜೀವಲೋಚನ ಬೆಳಗಾಯಿತೇಳೆನ್ನುತಅಂಗನೆ ಲಕುಮಿ ತಾ ಪತಿಯನೆಬ್ಬಿಸಿದಳುಶೃಂಗಾರದ ನಿದ್ರೆ ಸಾಕೆನ್ನುತಪ.ಪಕ್ಷಿರಾಜನು ಬಂದು ಬಾಗಿಲೊಳಗೆನಿಂದುಅಕ್ಷಿ ತೆರೆದು ಬೇಗ ಈಕ್ಷಿಸೆಂಬ ||ಪಕ್ಷಿಜಾತಿಗಳೆಲ್ಲ ಚಿಲಿಪಿಲಿಗುಟ್ಟುತಸೂಕ್ಷ್ಮದಲಿ ನಿನ್ನನು ಸ್ಮರಿಸುವುವೊ ಕೃಷ್ಣ 1ಸನಕ - ಸನಂದನ - ಸನತ್ಸುಜಾತರು ಬಂದುವಿನಯದಿ ಕೈಮುಗಿದು ಓಲೈಪರು ||ಘನಶುಕ - ಶೌನಕ - ವ್ಯಾಸ ವಾಲ್ಮೀಕರುನೆನೆದು ಕೊಂಡಾಡುವರೊ ಹರಿಯೇ 2ಸುರರು ಕಿನ್ನರರು ಕಿಂಪುರುಷರು ಉರಗರುಪರಿಪರಿಯಲಿ ನಿನ್ನ ಸ್ಮರಿಸುವರು ||ಅರುಣನು ಬಂದುದಯಾಚಲದಲ್ಲಿ ನಿಂದಕಿರಣ ತೋರುವ ಭಾಸ್ಕರನು ಶ್ರೀ ಹರಿಯೇ 3ಪದುಮನಾಭನೆ ನಿನ್ನ ನಾಮಾಮೃತವನುಪದುಮಾಕ್ಷಿಯರು ತಮ್ಮ ಮನೆಯೊಳಗೆ ||ಉದಯದೊಳೆದ್ದು ಸವಿದಾಡುತ ಪಾಡುತದಧಿಯ ಕಡೆವರೇಳು ಮಧುಸೂದನ ಕೃಷ್ಣ 4ಮುರುಮಢನನೆ ನಿನ್ನ ಚರಣದ ಸೇವೆಯಕರುಣಿಸಬೇಕೆಂದು ತರುಣಿಯರು ||ಪರಿಪರಿಯಿಂದಲಿ ಸ್ಮರಿಸಿ ಹಾರೈಪರುಪುರಂದರವಿಠಲ ನೀನೇಳೊ ಹರಿಯೇ 5
--------------
ಪುರಂದರದಾಸರು