ಒಟ್ಟು 6 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಹೇಳಲಿ ಕೂಸಿನ ಚರ್ಯಮಾನಿನಿ ಉಳಿದದ್ದ ಆಶ್ಚರ್ಯ ಪ ಪುಟ್ಟಿದೇಳನೆಯ ದಿನವೆ ಬಾಲಗ್ರಹ ಬಂದುಎಷ್ಟು ಕಾಡಿದಳು ನಮ್ಮಪ್ಪನಸೃಷ್ಟಿಪಾಲಕ ಸಿರಿವಿಷ್ಣು ದಯದಿಂದಕಷ್ಟ ಕಳೆದು ನಮ್ಮ ಕೂಸು ಉಳಿದಿತೇ 1 ಒಂದು ಮಾಸದ ಕೂಸು ಅಂದು ಬಂಡಿಯ ಕೆಳಗೆಹೊಂದಿಸಿ ಮಲಗಿಸಿದ್ದೆನೇ ನಾನುಅಂದು ಹಸಿದು ಮುಖದಿಂದ ಬೆರಳನೆ ಚೀಪಿಬಂಧ ಕಳೆದು ಹೀಂಗೆ ಬದುಕಿತೇ 2 ದುಷ್ಟತನವು ಬಹಳ ಎಂದು ಒರಳಿಗೆಕಟ್ಟಿಹಾಕಿದೆ ಇವನ ಒಂದಿನಾಬೆಟ್ಟದಂತೆರಡು ಮರಗಳು ಬೀಳಲು ಮಧ್ಯ ಪುಟ್ಟ ನಮ್ಮಪ್ಪ ಹ್ಯಾಂಗೆ ಬದುಕಿತೆ 3 ಅಂಗಳದೊಳಗೆ ಆಡುತ ಕುಳಿತಿದ್ದ ಕೂಸಿನಾ-ಮಂಗಳಾ ಘಾಳಿ ಬಂದೊಯಿತೆಅಂಗನೇರೆಲ್ಲರೂ ಅಳುತ ಕೂತೇವಲ್ಲೆ ನರ-ಸಿಂಗನಾ ಕರುಣದಿಂದುಳಿದಿತೆ 4 ನೀರು ಕುಡಿದು ಯಮುನೆ ಮೇಲೆ ಆಡಲು ಕೂಸುಘೋರ ಪಕ್ಷಿಯು ಬಂದು ನುಂಗಿತೆಪೋರರೆಲ್ಲರು ನೋಡಿ ಗಾಬರಿಯಾಗಲು ಮತ್ತೆಕಾರಿತವನ ಬಕ ಸೋಜಿಗವೆ 5 ಕತ್ತೆಗಳನು ಕೊಂದು ತಾಳಫಲವು ಗೋಪ-ಪುತ್ರರಿಗೆ ಉಣ್ಣ ಕೊಟ್ಟಿಹನಂತೆಚಿತ್ರಚರಿತನ ನಂದಬಾಲನ ಚರಿತೆ ಏಕಾವೃತದಿಂದಲಿ ಪೇಳಲಳವೇನೆ 6 ಕರುಗಳ ಕಾಯುತಿರಲು ವತ್ಸವೇಷದಿದುರುಳನೊಬ್ಬನು ಬಂದಿಹನಂತೆಅರಿಯದಾ ಕೂಸಿನಾ ಕಾಲ್ಪಿಡಿದುಬೆರಳ ಮರದ ಮೇಲಕ್ಕೆ ತೂರಿದನಂತೆ 7 ಏಳೇ ವರ್ಷದವ ಕೇಳೆ ಗೋವರ್ಧನಏಳು ದಿವಸ ಎತ್ತಿದನಂತೆಬಾಳುವ ಗೋಪಿಯರ ಪಾಲನೆ ಮಾಡಿದನೀಲವರ್ಣನ ಎಷ್ಟು ವರ್ಣಿಸಲೆ 8 ಬಾಲನಾದರು ನಿನ್ನ ಹಾಳು ದೈತ್ಯನ ಕೊಂದು ಬ-ಹಳ ಕುತ್ತುಗಳಿವೆ ಕೇಳಿದೇನೆಬಾಲಕರಿಬ್ಬರು ಲೋಲರಿಬ್ಬರು ನಮ್ಮ ಬಾಲಕರೇನೇ ಸ್ವರ್ಗಪಾಲನು ಇಳೆಯೊಳು ಉದಯಿಸಿದನೇ 9 ಮಂದಗಮನೆ ಎನ್ನ ಕಂದನಾಟಗಳನ್ನುಮಂದಿಯ ದೃಷ್ಟಿಯ ಭಯದಿಂದ ನಾನುಒಂದೂ ಹೇಳದೆ ಹೀಗಾನಂದ ಬಡುವೆನು ನಾನುಚಂದ್ರವದನೆ ರೋಹಿಣಿ ಕೇಳೆ 10 ಗೋಪಿ ಸುಖಿಸುತಿಹಳು 11
--------------
ಇಂದಿರೇಶರು
ನಕ್ಷತ್ರದಾರತಿ ಬೆಳಗೀರೇ ಜಗ ದ್ರಕ್ಷ ಕೃಪಾನಿಧೇ ಪಕ್ಷಿವಾಹನಗೆ ಪ ಪಕ್ಷಿಯು ತಾನಾಗಿ ಪ್ರಜ್ವಲಿಪಾ ಯಕ್ಷರಕ್ಷಕ ಸರ್ವಶಿಕ್ಷಾ ದಯಾಕರ ಲಕ್ಷ್ಮೀಪತಿಯಾದ ಮೋಕ್ಷದಾಯಕಗೇ 1 ಆದಿರೂಪನಿಗೆ ಆಧ್ಯಾತ್ಮನಾದವನಿಗೆ ಸಾಧುಶಿಖರನಾದ ಸರ್ವಸ್ವತಂತ್ರಗೆ ನಾದಬಿಂದು ಕಳೆಯೊಳಾಡುತಿರುವವಗೆ 2 ಅಖಿಳಾಂಡಕೋಟಿ ಬ್ರಹ್ಮಾಂಡನಾಯಕನಿಗೆ ಪ್ರಕಟಿತಮಾಗಿಹ ಪರತತ್ವಗೆ ಚಿಕಟಾಯಿಸಿದ ನಮ್ಮ ಗುರುವು ತುಲಸಿರಾಯಾ ಸಖನಾದ ಶಿವಗೆ ಶಂಕರಗೆ ಶ್ರೀಹರಿಗೆ 3
--------------
ಚನ್ನಪಟ್ಟಣದ ಅಹೋಬಲದಾಸರು
ನಿನಗೆ ನೀನೆ ಕೃಷ್ಣ ದಯಮಾಡಿ ಸಲಹಯ್ಯಎನಗೊಂದು ಸಾಧನ ಲೇಸುಕಾಣಬಾರದು ಪ. ಸ್ನಾನಮಾಡಿಯೆ ನಿನ್ನ ಸಂಪಾದಿಸೇನೆಂದರೆಸ್ನಾನಮಾಡದೇ ಕಪ್ಪೆ ಸರ್ವಕಾಲದಲಿಧ್ಯಾನ ಮಾಡಿಯೇ ನಿನ್ನ ಸಂಪಾದಿಸೇನೆಂದರೆಧ್ಯಾನ ಮಾಡದೇ ಬಕಪಕ್ಷಿಯು ಸರ್ವದಾ 1 ಜಪವ ಮಾಡಿಯೆ ನಿನ್ನ ಕೃಪೆಗೊಳಗಾಗುವೆನೆನೆಜಪದಲ್ಲಿ ಮನಸ್ಸೆನ್ನಾಧೀನವಿಲ್ಲಉಪವಾಸವೇ ಉಚಿತ ಸಾಧನವೆಂಬೆನೆಉಪವಾಸವೇ ಇರದೆ ಉರಗನು ತಾ ಸರ್ವದಾ 2 ಸನ್ನ್ಯಾಸ ಸುಖಸಾಧನವು ಎಂತೆಂಬೆನೆಸನ್ನ್ಯಾಸಿಯಾಗಿರನೆ ರಾವಣನುಕನ್ಯಾದಾನವೆ ಮುಖ್ಯ ಸಾಧನವೆಂಬೆನೆಕನ್ಯಾದಾನವ ಕೊಡನೆ ಕಂಸಗೆ ಜರಾಸಂಧ 3 ದುರುಳ ದುರ್ಯೋಧನ 4 ಬಂಧುತ್ವವೇ ಗತಿ ಸಾಧವವೆಂಬೆನೆಬಂಧುತ್ವವಿರದೆ ಶಿಶುಪಾಲನಿಗೆಒಂದರಿಂದುಚಿತ ಕಾಣೆ ಹಯವದನರಾಯನೆಎಂದೆಂದಿಗೂ ದಾಸನೆಂದೆನಿಸೊ5
--------------
ವಾದಿರಾಜ
ರಾಮಾ ನಿನ್ನಯ ದಿವ್ಯ ನಾಮಾ ನೆನೆವೆನು ರಾಮಾ ನಿನ್ನಯ ದಿವ್ಯ ನಾಮಾ ಪ್ರೇಮವ ಕೊಟ್ಟನ್ನಾ ನೇಮದೊಳಿರಿಸೊ ನೀ ಕರುಣದಿ ಪ ಚಿತ್ತ ಶುದ್ಧವ ಮಾಡಿ ಮತ್ತೆ ನಿನ್ನಯ ಪಾದ ನಿತ್ಯದಿ ನೆನೆವಂತೆ ಭಕ್ತಿಯೊಳಿರಿಸೊ ನೀ ಎನ್ನನು 1 ದಶರಥನುದರದಿ ಶಿಶುವಾಗಿ ಜನಿಸಿದೆ ಹೊಸ ಆಭರಣವಿಟ್ಟು ಕುಶಲಮಾತೆಯನು ನೋಡುವ 2 ಛಂದದಿಂದಲಿ ಆನಂದದೊಳಿಹ ರಾಮಾ ಚಂದ್ರನ ಮೊಗ ಅತಿ ಸುಂದರವಾಗಿರುವವನೇ 3 ಬಿಲ್ಲ ಬಾಣವಪಿಡಿದು ಎಲ್ಲಾ ದೈತ್ಯರ ಕೊಂದು ಅಲ್ಲೇ ಕೌಶಿಕಯಾಗ ಎಲ್ಲ ಸಲಹಿದೆ ಧೀರನೇ 4 ವಿಥುಳಾಪುರದಿ ಬಂದು ಅತುಳ ಧನುವ ಮುರಿದು ಸತಿ ಸೀತಾ ಸಹಗೂಡಿ ಪಿತನಾ ಪಟ್ಟಣವನು ಸೇರಿದೆ 5 ಮಾತೆಯ ವರ ಕೇಳಿ ನೀತಿಯಿಂದಲಿ ಅನು ಜಾತನ ಒಡಗೂಡಿ ಖ್ಯಾತಿಯಿಂದಲಿ ಪೋದಂತಹ 6 ಸರಯು ತೀರದಿ ಬಂದು ಪುರದ ಜನರ ಬಿಟ್ಟು ಭರದಿ ನಾವೆಯನೇರಿ ತ್ವರಿತದಿಂ ದಾಟಿ ನೀ ಪೋದೆ 7 ಭಕ್ತಿಯಿಂದಲಿ ಆ ಸಕ್ತ ಭರತನ ಕಂಡು ಯುಕ್ತಿಯಿಂದಲಿ ತೇಜೋಯುಕ್ತಪಾದುಕವನು ಕೊಟ್ಟೆನೀ 8 ಪುಸಿಯತಿಯಾಗಿ ಶೀತೆಯ ಅಸುರ ಕೊಂಡೊಯ್ದನೆಂದು ವ್ಯಸನದಿಂದಲಿ ಪೋಗಿ ಪಕ್ಷಿಯುದ್ಧರಿಸಿದೆ ಘಮ್ಮನೆ 9 ಶಾಂತಮೂರುತಿ ಹನುಮಂತರೆಲ್ಲರು ಕೂಡಿ ಅಂತರದಲಿ ಸೇತು ನಿಂತು ನೋಡುವೆ ನೀ ಛಂದದಿ 10 ಶರಣ ಬಂದ್ವಿಭೀಷಣನ ಕರುಣದಿಂದಲಿ ಕಾಯ್ದೆ ಸ್ಥಿರದಾಪಟ್ಟವಗಟ್ಟಿ ಹರುಷದೋಳ್ ನಿಲಿಸಿದೆ ಅವನನು 11 ವಾನರರೊಡಗೊಂಡು ಸೇನೆ ಸಹಿತಲೇ ದಶಾ ನನ ರಾವಣನಕೊಂದು ಮಾನಿನೀ ಸಹಿತನೀ ಬಂದಿಹೆ 12 ಪುಷ್ಪಕವನೆ ಏರಿ ಅಕಸ್ಮಾತದಲಿ ಬಂದು ಆಕ್ಷಣದಲಿ ಭರತ ರಕ್ಷಣ ಮಾಡಿದ ದೇವನೇ 13 ಪಟ್ಟಣದಲಿ ಮಾಹಾ ಪಟ್ಟವನೇರಿಸಿ ಶಿಷ್ಟ ಅಯೋಧ್ಯೆಯ ಪಟ್ಟಣವಾಳಿದೆ ರಾಮನೆ 14 ಬ್ರಹ್ಮಮೂರುತಿ ರಾಮಾಗಮನ ಚರಣದಿ ಸುಮ್ಮಾನದಲಿ ಶಾಂತಿ ತನ್ಮಯಗೊಳಿಸಾನಂದದಿ 15
--------------
ಶಾಂತಿಬಾಯಿ
ಸುಲಭದ ಮಾತಿದು ತಿಳಿದು ಪೇಳಿ ಹೊಲಬುದಪ್ಪಲು ಬೇಡ ಸುಲಿಗೆಯಾಹುದು ಮುಂದೆ ಪ ಅಂತರಿಕ್ಷದಲೊಂದು ನಿಂತಿಹ ವೃಕ್ಷವಾ- ನಂತಾನಂತವಾದೆಲೆಗಳುಂಟು ನಿಂತಿಹ ಎಲೆಗಳು ಬೀಳುವುದನು ನೋಡಿ ಮಂತ್ರಿಯೊಬ್ಬನು ಕುಳಿತು ಎಣಿಸುವನಯ್ಯ 1 ಭೂಮಿಯ ಮೇಲೊಂದು ಭೂಮಿಯು ಜನಿಸಲು ತಾ ಮನಸೋತನು ದೊರೆಯೊಬ್ಬನು ಪ್ರೇಮದಿ ರಾಜ್ಯವನಾಳುವ ಸಮಯಕ್ಕೆ ಸೀಮೆಯ ಮೇಲೆಲ್ಲ ಗುಡಿಗಟ್ಟಿತಯ್ಯ 2 ಕಡಗೋಲು ಮಿಡುಕಿತು ಒಡೆಯಿತು ಪಾತ್ರವು ಪಿಡಿದ ಬೆಣ್ಣೆಯೊಳೊಂದು ಗಿಡ ಹುಟ್ಟಿತು ಅಡವಿಯ ಮಧ್ಯದಿ ಹುಟ್ಟಿದ ಗಿಡವಿನ ಎಡೆಯೊಳು ಗಿಣಿ ಬಂದು ಮರಿಯಿಕ್ಕಿತಯ್ಯ 3 ಬಿಲ್ಲುಗಾರನು ಬಂದು ಬಲ್ಲಿದ ಪಕ್ಷಿಯ ಮೆಲ್ಲನೆ ಕೆಡೆಯಲು ಬೇಕೆನುತ ನೆಲ್ಲಿಯ ಎಲೆಯನ್ನು ಎಣಿಸಿ ಬೀಸಾಡುವ ನಲ್ಲನೊಬ್ಬನು ಕಂಡು ಹೊರಗಿಟ್ಟನಯ್ಯ 4 ಗುಡಿಯ ಬಾಗಿಲ ಮುಂದೆ ವೃಕ್ಷದ ಗಿಣಿಯನ್ನು ಮಡದಿಯೋರ್ವಳು ಕಂಡು ಒಳಗಿಟ್ಟಳು ಗಿಡುಗನ ಹಾವಸೆ ಒಡೆಯನು ಕಾಣುತ್ತ ಒಡಲಾಳು ಸುರಭಿಯ ಕಟ್ಟಿದನಯ್ಯ 5 ಮೂಗನು ಕಾಣುತ್ತ ಕೂಗ್ಯಾಡಿ ಕರೆಯಲು ಆಗಲೇ ಕಿವುಡನು ಧ್ವನಿಯ ಕೇಳಿ ಬೇಗದಿ ಕುರುಡನು ಬಂದು ಹಾಲೆರೆಯಲು ಆಗಲೆ ಪಕ್ಷಿಯು ಉಂಡು ಹಾರಿತಯ್ಯ6 ಬುದ್ದಿಹೀನನು ಕಂಡು ಶುದ್ಧ ಸ್ವಾಮಿಯೊಳು ತಿದ್ದಿದ ಗುಡಿಗಳು ಬಿದ್ದಮೇಲೆ ಎದ್ದು ಪಕ್ಷಿಯು ಹೋಗಿ ವರಾಹತಿಮ್ಮಪ್ಪನು ಇದ್ದಲ್ಲಿಗಾಗಿಯೆ ಹಾರಿಹೋಯಿತಯ್ಯ 7
--------------
ವರಹತಿಮ್ಮಪ್ಪ