ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಲ್ಲೇ ನಿಲ್ಲೇನು | ಯೋಗಿಗೆ | ಅಲ್ಲೇ ನಿಲ್ಲೇನು ಪ ಎಲ್ಲಿ ನೋಡಿದರಲ್ಲಿ ಘುಲ್ಲನಾಭನೇ ಇಹ | ಅಲ್ಲೇ ನೀಲ್ಲೇನು | ನಿಲ್ಲದ ಮನಸಿನ ಕಾಲಾಟ ಒದಗಿತು | ಅಲ್ಲೇ ನಿಲ್ಲೇನು 1 ನೀರೊಳಗಾನಂದಲ್ಯಾಡುವ ಮೀನಕ | ಅಲ್ಲೇ ನಿಲ್ಲೇನು | ಕಾನನ ತಿರುಗವ ಎರಳೆಗೆ | ಅಲ್ಲೇ ನಿಲ್ಲೇನು 2 ತಳಿತಿಹ ಬನದೊಳು ತಿರುಗುವ ಪಕ್ಷಿಗೆ | ಅಲ್ಲೇ ನಿಲ್ಲೇನು | ನೆನೆನುಡಿ ಸಾರಿದ ಮಹಿಪತಿ ನಂದನ | ಅಲ್ಲೇ ನಿಲ್ಲೇನು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಯಾತಕೀಹಂಕಾರವು ಸರ್ವವು ಜಗನ್ನಾಥನ ಪರಿವಾರವು ಪ. ಸ್ವಾತಿಯ ಮಳೆಯೊಳು ಸುರಿವಂಥ ನೀರನು ಜಾತಕ ಪಕ್ಷಿಗೆ ದೊರಕುವ ತೆರದೊಳಿಂನ್ಯಾತಕೀ ಅ.ಪ. ಈಶ ಪ್ರೇರಣೆಯಿಲ್ಲದೇಸು ಮಿಡುಕಿದರು ಶ್ವಾಸ ಬಿಡಲು ಸಲ್ಲದು ಘಾಸಿಗೊಂಡರೆ ನುಂಗಲೋಸುಗ ಮನುಜಗಿ- ನ್ನೇಸು ನಂಬಿಕೆ ಇಹದು ಮೂರ್ಖತ್ವ ಸರಿದು ಘಾಸಿಗೊಳದೆ ರಮೇಶನಿತ್ತದೆ ಲೇಸೆನುತ ಅವನಂಘ್ರಿಕಮಲದ ದಾಸಜನರೊಡನಾಡಿಕೊಳದೆ ದುರಾಸೆ ಕಡಲೊಳಗೀಸಲಾರದೆ 1 ತಾನೆಂಬ ಹಂಕೃತಿ ತಾಳ್ವ ಮನುಜಗಿಂತ ಹೀನರ ಕಾಣೆನಿನ್ನು ಯಾ- ಕೆನಲನ್ನಪಾನದೊಳಿಚ್ಛೆಯನು ತಡೆಯಲನು- ಮಾನಗೊಳುವನಾತನ ಸ್ವಾತಂತ್ರ್ಯವೇನು ಶ್ರೀನಿಕೇತನ ಮನದೊಳನುಸಂಧಾನಗೊಳಿಸುವ ತೆರವಹುದು ಪವ ಮಹಿಮೆಯರಿಯದೆ 2 ವಾರುಧಿಯೊಳಗೆ ಸಂಚಾರಮಾಡುತ ಪರಿ- ವಾರವ ಸೇರಿರುವ ಯೋಚಿಸುವ ನಿತ್ಯದಿ. . . . ಶ್ರೀ ರಮಣ ಚರಣಾರವಿಂಧಾಧರವೆ ಗತಿಯೆಂದು ನಂಬು ಖ- ತನ್ನಿರವ ಮನದಲಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ಯಾವಪರಾಧ ಮಾಡಿದೆನೋ ರಂಗ ಈ ವಸುಧೆಯೊಳಿನ್ನು ಬಳಲುವೆನೋ ರಂಗ ಪ ಯಾವ ಪಕ್ಷಿಗೆ ಬಲೆ ಬೀಸಿದೆನೋ ರಂಗ ಯಾವ ಜೀವಿಗೆ ಗಾಳ ಹಾಕಿದೆನೋ ರಂಗ ಅ.ಪ ಯಾವ ಎಳಗೂಸನು ಬಾವಿಗೆ ತಳ್ಳಿದೆ ಯಾವ ತಪಸಿಗೆ ಭಂಗವಗೈದೆ ಯಾವ ದಂಪತಿಗಳ ಬೇರೆಗೈದೆನೊ ರಂಗ ಜೀವನು ನಾನೇನ ವಂಚನೆಗೈದೆನೊ 1 ಅಪರಾಧಂಗಳು ವಿಪರೀತವಾದರೂ ವಿಪುಲ ಕೃಪಾಕರ ನೀನಹುದಯ್ಯ ಅಪಕೃತಿಗೈದರೂ ಉಪಕೃತಿಗೈವೆ ನೀ ಕುಪಿತನಾಗದೆ ಕಾಯೋ ಮಾಂಗಿರಿರಂಗ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್