ತನುವಿದು ನಿತ್ಯವಲ್ಲ ಮನವು ನಿಶ್ಚಲ ಅಲ್ಲ ಪ
ಕನಸಿನಂತೆ ಜೀವಿತವೆಲ್ಲ ಇನಿತು ಶಾಂತಿಯ ತಾಣ ಅಲ್ಲ ಅ.ಪ
ಜಲಚರಂಗಳು ವನಚರಂಗಳು
ಅಲೆವ ಪಕ್ಷಿಕೀಟಕ್ರಿಮಿಗಳು
ಕಲುಷ ವಿಮಲವೆಂಬುದನರಿಯವು
ಮಾನವ ಜನ್ಮಕೆ 1
ಜನುಮಗಳೊಳು ಹಿರಿಯದೆನಿಪ
ಮನುಜ ಜನ್ಮವನಾಂತ ಮೇಲೆ
ವಿನಯ ನಯ ವಿಧೇಯತೆಯಿಂದ
ವನಜನಾಭನ ನೆನೆಯದಿರ್ದೊಡೆ 2
ಭಜಿಪ ಭಕ್ತರ ಕೂಗಿಗೊಲಿದು
ಗಜವ ಪಾಲಿಸಿದಂತೆ ಬಂದು
ನಿಜಪದಂಗಳ ತೋರ್ಪ ಮಾಂಗಿರಿ
ವಿಜಯರಂಗನ ಸನ್ನುತಿ ಗೈಯದ 3