ಕಂಡೆನಮ್ಮಾ ಕೌತುಕದಾ ಗಾರುಡಿಗನಾ |
ಕೊಂಡಾಡಲಳವಲ್ಲ ಹೇಳಲೇ ನಾ ಪ
ಬೋಧದನಾಗರ ನೂದುವನಾ 1
ಭಕ್ತರುದ್ದೇಶಕ ಬಂದ ಜವದಿ 2
ಸಕಲ ತೇಜದ ಬಬ್ಬುಳಿಯೋ ರೂಪ ನೆಲಿಯಾ |
ಪ್ರಕಟ ತಿಳಿಯದು ನಿಜ ಕಳಿಯನಾ 3
ಅರಿಶಿಕ್ಷಾ ಭಕುತರ ಪಕ್ಷಾವೆಂಬ ನಾನಾ |
ಬಿರುದು ಕಟ್ಟಿಹ ಮಹಿಮನಾ 4
ಕಾಳ ಸರ್ಪದ ನಿಜ ಮುಖ ಬಂಧವನ ಮಾಡಿ |
ಜಾಳಿಸಿದನು ಭಯ ಈಡ್ಯಾಡಿ 5
ಹಮ್ಮಿನ ಗಾವ ಗುಂಡ ಗಜದಂತ ಶರಣರಿಗೆ |
ವಮ್ಮಿಲೆ ಕಲೆಗಳ ದೋರುದೀಗನಾ 6
ತಂದೆ ಮಹಿಪತಿ ಸುತ ಸ್ವಾಂಮಿ ದುರ್ಲಭದಾ |
ನಂದವ ತೋರಿದಾ ದಯದಿಂದಾ 7