ನಿತ್ಯ ಶುಭ ಮಂಗಳಂ ಪ.
ಸರಸೀರುಹಾಕ್ಷಾಯ ದುರುಳಮದಶಿಕ್ಷಾಯ
ಸುರಮೌನಿ ಪಕ್ಷಾಯಾಧೋಕ್ಷಜಾಯ
ಶರಣನ ರಕ್ಷಾಯ ಕರುಣಾಕಟಾಕ್ಷಾಯ
ಧರಣಿಜಾರಮಣಾಯ ರಾಮಭದ್ರಾಯ 1
ಕ್ರತು ಪಾಲಕಗೆ
ಶಶಿವದನೆ ಜಾನಕಿಯ ಕೈಪಿಡಿದವಂಗೆ
ಶಶಿಮೌಳಿಚಾಪಮಂ ಮುರಿದ ಅಸಮಬಲನಿಗೆ
ದಶಕಂಠಕಾಲಂಗೆ ರಾಘವೇಂದ್ರನಿಗೇ 2
ಕಾಕುತ್ಸ್ಥಕುಲಮಂಡನಗೆ ಕಮಲಾಪ್ತ ಕುಲದೀಪಂಗೆ
ಸಾಕೇತನಗರಾಧಿಪಗೆ ಲೋಕೇಶನಿಗೆ
ಪಾಕಶಾಸನಮುಖ್ಯ ನಾಕಪೂಜಿತಚರಣ
ವೈಕುಂಠನಾಯಕ ಶ್ರೀ ಶೇಷಗಿರಿವರಗೆ 3