ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆದದ್ದ ಮರೆತು ಶ್ರೀ ರಂಗನ ಭಜಿಸಿರಿ ಮೋದದಿ ಹರಿಯ ಸೇವೆಯ ಮಾಡಿರಿ ಪ ಮುಕುಟವೆ ವಂದಿಸು ಮತ್ಸ್ಯಾವತಾರನ ಮುಖವೆ ನೀ ಕೀರ್ತಿಸು ಮುದ್ದು ಕೂರ್ಮನ ಸೂಕರ ರೂಪನ ನಖವೆ ನೀನಪ್ಪಿಕೊ ನರಸಿಂಹತನ 1 ವಕ್ಷವೆ ಹೊರು ನೀನು ಗಿಡ್ಡ ವಾಮನನನ್ನು ಪಕ್ಷವೇ ಪಿಡಿದಾಡು ಭಾರ್ಗವನನ್ನು ಕಕ್ಷವೆ ಯೆತ್ತು ಶ್ರೀ ರಾಮಚಂದ್ರನನ್ನು ಕುಕ್ಷಿಯೆ ಬೇಡು ಶ್ರೀ ಕೃಷ್ಣಾಮೃತವ 2 ಹರುಷದಿ ತೊಡೆಯೆ ನೀ ಬುಧನ ಕೂಡ್ರಿಸಿಕೊಳ್ಳು ಚರಣವೆ ಕಲ್ಕ್ಯಾನ ಮನೆಗೆ ನೀ ಪೋಗು ನಿತ್ಯ ದಶನಾಮ ಸ್ಮರಿಸಿರಿ ಸರಿಚನ್ನಕೇಶವ ನೊಲಿದು ಪಾಲಿಸುವಾ 3
--------------
ಕರ್ಕಿ ಕೇಶವದಾಸ