ಒಟ್ಟು 5 ಕಡೆಗಳಲ್ಲಿ , 3 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಸೆವ ಸಮುದ್ರವ ಮಥನ ಮಾಡಿತಯ್ಯಾ ನಿನ್ನ ನಾಮ ಹರಿ ಶಶಿಧರ ಶಿವನಿಗೆ ಶಾಂತಿಮಂತ್ರಾಯ್ತಯ್ಯಾ ನಿನ್ನ ನಾಮ ಪ ಚೋರನೆನಿಸಿವನ ಸೇರಿಕೊಂಡವನಿಗೆ ನಿನ್ನ ನಾಮಾ ಪಾರ ಜ್ಞಾನವಿತ್ತು ಮುಂದಕ್ಹಾಕಿತಯ್ಯಾ ನಿನ್ನ ನಾಮ1 ಮೀರಿದ ನಿನ್ನ ಮಾಯೆಗೆ ಸಿಲ್ಕಿದ್ಯೆತಿವರಗೆ ನಿನ್ನ ನಾಮ ಭೂರಿಕರುಣದಿನೆರಗಿ ರಕ್ಷಿಸಿತಯ್ಯಾ ನಿನ್ನ ನಾಮ 2 ಅಮೃತ ಮಾಡುಣಿಸಿ ಪಾಲಿಸಿತಯ್ಯಾ ನಿನ್ನ ನಾಮ 3 ಕಡುರೋಷದೆಸೆದ ವಜ್ರಾಯುಧದೆಚ್ಚೆ ನಿನ್ನ ನಾಮ ಸಿಡಿ ಮುಳ್ಳಿಗಿಂತ ಕಡೆಮಾಡಿಬಿಟ್ಟಿತಯ್ಯಾ ನಿನ್ನ ನಾಮ 4 ನೂರುಯೋಜನದ ವಿಸ್ತೀರ್ಣದ್ವಾರಿಧಿಯ ನಿನ್ನ ನಾಮ ತೋರಿಸಿತೊಂದು ಕಿರಿ ಸರೋವರ ಸಮಮಾಡಿ ನಿನ್ನ ನಾಮ 5 ಮೀರಿದ ದೈತ್ಯರಪಾರಂಗರುವಮಂ ನಿನ್ನ ನಾಮ ಹೀರಿ ಕ್ಷಣದಿ ಸುರಲೋಕ ಸೇರಿಸಿತಯ್ಯಾ ನಿನ್ನ ನಾಮ 6 ತ್ರಿಣಯರ್ಹೊಗಳಲು ಶಕ್ತಿ ಸಾಲದ ಪಟ್ಟಣ ನಿನ್ನ ನಾಮ ಅಣುಗಿಂತ ಅಣುಮಾಡಿ ತೋರಿಸಿತ್ಹನುಮಂಗೆ ನಿನ್ನ ನಾಮ 7 ಅಸಮಪರಾಕ್ರಮ ಅಸುರಕುಲಾಳಿಯಂ ನಿನ್ನ ನಾಮ ನಶಿಸೆ ಶಿವಪುರ ಭಸ್ಮಮಾಡಿತಯ್ಯಾ ನಿನ್ನ ನಾಮ 8 ಪಕ್ಷಿಗಮನ ಪಾಂಡುಪಕ್ಷನೆನಿಸಿತಯ್ಯಾ ನಿನ್ನ ನಾಮ ಅಕ್ಷಯಾಂಬರವಿತ್ತು ಸತಿಯ ರಕ್ಷಿಸಿತಯ್ಯಾ ನಿನ್ನ ನಾಮ 9 ಕಾದು ದಳ್ಳುರಿಹತ್ತಿದೆಣ್ಣೆ ಕೊಪ್ಪರಿಗೆಯ ನಿನ್ನ ನಾಮ ಸುಧನ್ವಂಗನುಪಮ ಶೀತಲವೆನಿಸಿತು ನಿನ್ನ ನಾಮ 10 ಅರಿತು ಭಜಿಪರ ಭವರೋಗಕ್ವೈದ್ಯೆನಿಸಿತು ನಿನ್ನ ನಾಮ ಅರಿದು ಭಜಿಪೆ ನಿನ್ನವರ ಮುಕ್ತಿ ಕರುಣಿಸೋ ಸಿರಿರಾಮ 11
--------------
ರಾಮದಾಸರು
ತಿರುಪತಿ ಶೇಷಾದ್ರಿವಾಸ ಶ್ರೀನಿವಾಸ ಪ ಶೇಷಾದ್ರಿವಾಸ ವಾಸುಕಿಶಯನನೆ ಕೇಶಿಸಂಹಾರಕನೆ ಕ್ಲೇಶಭವದೂರನೆ ಅ.ಪ ಭಾಭರಣನೇ ಕರುಣಾಸಾಗರನೆ 1 ಪಾಂಡವಪಕ್ಷ ಶ್ರೀನಿವಾಸ ದೈತ್ಯಕುಲಶಿಕ್ಷ ಯಾದವರಕ್ಷ ಯದುಕುಲಪಕ್ಷನೆ ಸಜ್ಜನ ರಕ್ಷನೆ ಕರುಣಾಕಟಾಕ್ಷನೆ 2 ಭವಭಯಭಂಗ ಶ್ರೀನಿವಾಸ ಕರುಣಾಪಾಂಗ ಗರುಡತುರಂಗನೆ ನೀಲಮೇಘಾಂಗನೆ ಸುಗ್ರೀವಸಂಗನೆ ವಾಲಿ ವಿಭಂಗನೆ 3 ಕ್ಷೀರಾಬ್ಧಿಯಿಂದ ನಾರಾಯಣ ಭರದಿ ತಾ ಬಂದ ಕಮಲದೊಳಗೆ ಬಂದ ರಮಣೀಸಹಿತ ತಾ ನಿಂದ ಭಕ್ತರ ಪೊರೆಯುತ ನಿಂದ ಗೋವಿಂದ 4 ಗರುಡವಾಹನನೆ ಶ್ರೀನಿವಾಸ ಪರಮಪಾವನನೆ ಪಂಕಜನಯನನೆ ಪದ್ಮಿನೀ ಅರಸನೆ ಶ್ರೀನಿವಾಸನೆ ಎನ್ನ ರಕ್ಷಿಸೊ ನೀನು 5
--------------
ಯದುಗಿರಿಯಮ್ಮ
ರಕ್ಷಿಸು ಎನ್ನನು ಪಕ್ಷಿವಾಹನ ಪಾಂಡು ಪಕ್ಷನೆ ತವ ಭಕ್ತಿಯಗಲಿಸದೆ ಲಕ್ಷಿಸಿ ಧ್ರುವನೊರೆದೆ ಲಕ್ಷ್ಮೀಶ ಮರೆಹೋದೆ ಪ ಕ್ಷಿತಿಯೊಳು ನಾಂ ಬಲು ಚತುರನೆನಿಪದು ರ್ಮತಿಯಿಂದ ಕಷ್ಟಕ್ಕೆ ಗುರಿಯಾದೆ ರತಿಪತಿಪಿತ ಎನ್ನ ಅತಿತಪ್ಪು ಮನ್ನಿಸಿ ಗತಿಗಾಣಿಸಿತ್ವಾಕ್ಯ ಅಖಿಲೇಶ ಯತಿನುತ ಸುರಪೋಷ ಹತಭವ ಗುಣಕೋಶ 1 ಮಂದಮತಿಯತನದಿಂದ ನಾ ಮಾಡಿದ ಹಿಂದಿನ ಅವಗುಣವೆಣಿಸದೆ ಪಾದ ಎಂದೆಂದು ಮರೆಯದೆ ಬಂಧುರಭಕ್ತಿಯ ವರ ನೀಡೊ ಕಂದನೊಳ್ದಯಮಾಡೊ ತಂದೆ ನೀ ಕಾಪಾಡೊ 2 ದುರುಲನೆನಿಸಿ ಬಲು ಧರಣಿಯೊಳ್ತಿರುಗುವ ಮರುಳುಗುಣವನೆನ್ನದೀಡ್ಯಾಡೊ ಹರಿಯ ದಾಸರ ಸಂಗ ಕರುಣದಿ ದೊರಕಿಸಿ ಪರಿಶುದ್ಧ ಮಾಡೆನ್ನ ಹೇಯ ಜನುಮ ಶರಣಜನರ ಪ್ರೇಮ ಕರುಣಿಯೆ ಶ್ರೀರಾಮ 3
--------------
ರಾಮದಾಸರು
ಲಕ್ಷ್ಮೀರಮಣ ಮರೆಯ ಹೊಕ್ಕೆ ರಕ್ಷಿಸೈ ಪಾಂಡುಪಕ್ಷನೆ ಪ ಪಕ್ಷಿವಾಹನ ದುಷ್ಟಶಿಕ್ಷ ಮೋಕ್ಷದಾಯಕ ಶಿಷ್ಟರಕ್ಷ ಅ.ಪ ತರಳ ಧ್ರುವನ ಪೊರೆದೆಯೆಲೊ ಕರಿಮೊರೆಯ ಕಾಯ್ದಯ್ಯ ಕರುಣದಿ ಕುರುಪ ಸಭೆಯಲಿ ದ್ರೌಪದಿ ಮೊರೆಯನಿಡಲಾಕೆಮಾನವ ಕಾಯ್ದಿ 1 ನರಗೆ ಸಹಯನಾಗಿ ಸಾರ ಧರೆಯ ಗೆಲಿಸಿದಿ ನಿರುತದಿ ಕರವ ಪಿಡಿದಿ ಪರಮ ಪ್ರೇಮದಿ ಒರೆದೆಲೊ 2 ಇಂದು ಎನಗೆ ಸಂಧಿಸಿದ ಮಹ ಬಂಧನವ ನಿವಾರಿಸೈ ಪಾದ ನಂಬಿದೆ ಕಂದನನು ಪೊರೆ ಶ್ರೀರಾಮ3
--------------
ರಾಮದಾಸರು
ರÀಕ್ಷಿಸು ರಕ್ಷಿಸು ದೇವವಿಶ್ವಕುಕ್ಷನೆ ಭಕ್ತ ಸಂಜೀವಪಕ್ಷಿಗಮನ ಕಾಯೊದಾತಭೃತ್ಯಪಕ್ಷನೆ ಶ್ರೀ ಪ್ರಾಣನಾಥ ಪ.ಜಾರಿದ ಶ್ರ್ರುತಿಯ ತಂದವನೆ ಉದಾರಿವಿಕ್ರಮತಮಹರನೆವಾರಿಧಿಯೊಳುದಿಸಿದನೆ ಮಂದರಗಿರಿಯನೆತ್ತಿದನೆ1ರಂಭೆಗೆ ತತ್ವ ಹೇಳಿದನೆ ಹೇಮಾಂಬಕನ ಚುಚ್ಚಿದವನೆಕಂಬವ ಸೀಳಿ ನಿಂದವನೆ ಆದಂಭೋಳಿವೈರಿಬಾಲಪನೆ2ಪದ್ಮಜಾಂಡವನೊಡೆದವನೆಬಲಿಸದ್ಮವ ಬಿಡದೆ ಕಾಯ್ದವನೆಛದ್ಮಿ ಪಾರ್ಥಿವರ ಸಂಹರನೆಕರಪದ್ಮದಿ ಪರಶು ಪಿಡಿದವನÉ 3ಅಡವಿ ಪ್ರಾಣಿಗಳನಾಳುವನೆ ಹತ್ತುಹೆಡಕಿನವನ ತಲೆಕಡಿದವನೆಮಡದಿಗೆ ಗಿಡವನಿತ್ತವನೆ ಭೀಮಮಡದಿಯ ಲಜ್ಜೆ ಕಾಯ್ದವನೆ 4ಮಿಥ್ಯದಹೊಲಬುಹೇಳಿದನೆಖಳದೈತ್ಯರ ವಶವ ಮಾಡಿದನೆಮತ್ತಕಲಿವಪುಹರನೆ ನನ್ನಕರ್ತಪ್ರಸನ್ವೆಂಕಟ ನೀನೆ5
--------------
ಪ್ರಸನ್ನವೆಂಕಟದಾಸರು