ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂತು ಶೋಭಿಪ ನೋಡೀ ಶ್ರೀವ್ಯಾಸ ವಿಠ್ಠಲಸಂಪುಟನ ಮನೆ ಮಾಡೀ | ವಿಶ್ವಜ್ಞ ತೀರ್ಥರಶಾಂತ ಸೇವೆಯ ಗೂಡೀ | ಮೆರೆಯುತಿಹ ನೋಡಿ ಪ ಎಂತು ಶೋಭಿಪ ಕಂತುಪಿತ ಶಿರಿ | ಕಾಂತ ವಿಠ್ಠಲ ಶಾಂತಿ ಮೂರುತಿಸಂತ ಯುತಿವರ ರಂತರಂಗದಿ | ಚಿಂತಿಸುತಲೇಕಾಂತ ಪೂಜೆಗೆ ಅ.ಪ. ಶ್ರೀಮಧ್ವಮುನಿಗಳ ಕರಜ | ಶ್ರೀವಿಷ್ಣು ತೀರಥರಾ ಮಹಾಮುನಿ ಪೂಜಾ | ಗೊಂಡಿರುವ ಶ್ರೀರಾಮ ನರಹರಿ ಪೂಜಾ | ಶ್ರೀ ವ್ಯಾಸ ವಿಠ್ಠಲ ಪ್ರೇಮ ಗುರುಗಳ ಕರಜ | ಶ್ರೀವಿಶ್ವಜ್ಞ ತೀರ್ಥ ||ಪ್ರೇಮದಲಿ ಗೈವ ಸುನೇಮದಲಿ | ಸೀಮೆ ಸುಬ್ರಹ್ಮಣ್ಯದಲ್ಲಿ ಝಾವ ಝಾವಕೆ ಭಜಿಪ ಭಕ್ತರ | ಕಾಮಿತಾರ್ಥಗಳೀಯುತಿರೆ ಹರಿ 1 ವತ್ಸರ ಸುವಿಕ್ರಮದೀ | ಎರಡೊಂದು ಮಾಸದ ಸಿತ ಪಕ್ಷದಲಿ ಹರಿ ದಿನದೀ | ರವಿವಾರದೊಳು ಶ್ರೀಯತಿವರರು ಸ್ವಗೃಹದೀ | ಆಗಮಿಸಿ ಪೂಜೆಯ ಶೃತಿ ಉಕುತ ಮಾರ್ಗದೀ | ಗೈಯ್ಯೆ ಭಕುತರೂ ಕೃತಿಪತಿಯ ಚರಣಾಬ್ಜಗಳ ಸಂ | ಸ್ತುತಿಸುತ ಸುವೇದ ಘೋಷದಿ ಕೃತ ರಜತ ಪೀಠಸ್ಥ ನರಹರಿ |ಪ್ರತಿ ರಹಿತ ಮಹ ಅತುಳ ವಿಭವದಿ 2 ಪಾವನ್ನರಾದೆವು ನಾವು | ಸಂಯಮಿ ವರರ ಪಾವನ್ನ ಪದ ರಜಕಾವು | ದ್ವಾದಶಿಯ ದಿನಶ್ರೀವರನ ಮಹ ಅರ್ಚನವು ಗೈದ ವೈಭವವೂ ||ಕಾವ ಕರುಣೆಯ ಸ್ಮರಣೆ ತವಕದಿಂದಲಿ ಮಾಡ್ದತಾವಕನ ಪರಮಾಲ್ಪವೆನಿಪ | ಸೇವೆಯನೆ ಸ್ವೀಕರಿಸಿ ನರಹರಿ ದೇವ ಗುರು ಗೋವಿಂದ ವಿಠಲ | ಕಾವ ಕರುಣಾಳುಗಳ ಒಡೆಯ3
--------------
ಗುರುಗೋವಿಂದವಿಠಲರು
ಪುಷ್ಪಧರಿಸುವ ಉತ್ಸವಗೀತೆ ಪುಷ್ಪವನ್ನುಧರಿಸುವ ಉತ್ಸವ ನೋಡುವ ಬನ್ನಿ ಭಕ್ತವತ್ಸಲನರಾಣಿ ರಂಗನಾಯಕಿಗಿಂದು ಪ. ವೈಶಾಖಮಾಸದಲಿ ಕೃಷ್ಣಪಕ್ಷದಲಿ ಲಕ್ಷ್ಮೀಗೆ ಪುಷ್ಪವನ್ನು ಧರಿಸುವ ಅರ್ತಿಯ ನೋಡುವ ಬನ್ನಿ 1 ವಿಧವಿಧದ ಪುಷ್ಪವ ಮುಡಿಸಿ[ದರು] ಮದನನಮಾತೆಯ ಶಿರಸಿಗೆ 2 ಪಂಕಜನಾಭನರಾಣಿ ಪರಮಕಲ್ಯಾಣಿ ನೀಲವೇಣಿ ಪಂಕಜಪಾಣಿ ಕೀರವಾಣಿ ಸುಶೋಣೀ 3 ಸುರರು ಅಸುರರು ಕೂಡಿ ಶರಧಿಮಥನವ ಮಾಡೆ ಭರದಿಂದ ಉದಿಸಿಬಂದ ವರಲಕ್ಷ್ಮೀದೇವಿಗಿಂದು 4 ಜಯವಿಜಯರಿಗಾಗಿ ಜನಿಸಿ ತಾ ಭೂಮಿಯಲಿ [ಗೆದ್ದ] ಇಂದು 5 ಸೃಷ್ಟಿಭಾರವನಿಳುಹಲೆಂದು ಕೃಷ್ಣಮೂರುತಿ ಜನಿಸಿ [ಒಲಿದ] ಭೀಷ್ಮಕನುದರದಿ ಬಂದ ರುಕ್ಮಿಣೀದೇವಿಗೆ ಇಂದು6 ಮಲ್ಲೆ ಮಲ್ಲಿಗೆ ವಕುಳ ಮಂದಾರ ಪಾರಿಜಾತ[ವ] ಫುಲ್ಲನಾಭನರಾಣಿಗೆ ಲೋಲಾಕ್ಷಿಯರು ಮುಡಿಸಿದರು 7 ತಾಳೆ ಚಂಪಕ ಕಮಲಮಾಲೆ ಸುರಗಿ ಜಾಜಿಯ ನೀಲವರ್ಣನರಾಣಿಗೆ ಲೋಲಾಕ್ಷಿಯರು ಮುಡಿಸಿದರು 8 ಮರುಗ ದವನ ಪಚ್ಚೆತೆನೆಯು ಸುಗಂಧರಾಜವ ಪರಮ ಸುರರು ತಂದು ಮುಡಿಸುವರು 9 ವಸಂತೋತ್ಸವಕೆಂದು ವಸುಧೀಶನರಸಿ ತಾನು ಕುಶಲದಿಂದಲೆ ಬಂ[ದಳಾವ]ಸಂತಮಂಟಪಕಿಂದು 10 ರತ್ನದ ಕೆಂಪಿನ ಕಿರೀಟವಿಟ್ಟು ತಿದ್ದಿದ ಕಸ್ತೂರಿಬಟ್ಟು ಮುತ್ತುಸುತ್ತಿದ ಮೂಗಿನಬಟ್ಟು ಹರಿದ್ರಾವಸ್ತ್ರವನುಟ್ಟು 11 ಕರ್ಪೂರದ ಚೂರ್ಣದಿ ಮಿಂದು ಭಕ್ತರಿಟ್ಟ ನೈವೇದ್ಯವನುಂಡು [ತಾ]ಪೊರಟಳು ಮಿತ್ರೆಯರ ಕೋಲಾಟವ ನೋಡುತ್ತ ತನ್ನರಮನೆಗೆ 12 ಹುಟ್ಟಿದಮನೆ ಕ್ಷೀರಾಬ್ಧಿ ಹೊಕ್ಕಮನೆ ಶ್ರೀವೈಕುಂಠವ ಬಿಟ್ಟು ಭಕ್ತರ ಸಲಹುವೆನೆಂದು ಬಂದ ವೆಂಕಟರಂಗನರಸಿಗೆ 13
--------------
ಯದುಗಿರಿಯಮ್ಮ
ಶ್ರೀರಂಗನಾಥನ ಸೇವೆಯ ಮಾಡಿರೈ ಸದಾ ಪ ಅಡಿಗಳ ಭಜಿಪರ ಎಡರು ಕಳೆವುದಕೆ ವಡವಾಟಲಿ ತಾ ಬಿಡದೆ ನೆಲೆಸಿಹನ 1 ಶರಣುಪೊಕ್ಕವರ | ಕರುಣದಿಂದ ಲಘು | ಹರಣಗೈವ ರಥ | ಚರಣಧಾರಿ ಪದ 2 ಕಷ್ಟ ಕಳೆದು ಸುಖ | ಕೊಟ್ಟು ಪೊರೆವ ಹರಿ 3 ಪ್ರಥಮಮಾಸದಲಿ | ಶಿತ ಸುಪಕ್ಷದಲಿ ತಿಥಿ ದಶಮಿಯಲಿ | ರಥವೇರಿ ಬರುವಹರಿ 4 ನೇಮದಿ ತನ್ನಯ | ನಾಮಧ್ಯಾನಿಪರ ಕಾಮಿತಗರೆಯುವ | ಶಾಮಸುಂದರ 5
--------------
ಶಾಮಸುಂದರ ವಿಠಲ