ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೈವ ಭಕ್ತಿ ಸಂಸಾರದೊಳಿಲ್ಲ ಪ ಜೀವಗಭಿಮಾನವು ಬಿಡದಲ್ಲ ಅ.ಪ ವನಜಲೋಚನನ ಅರ್ಚನೆಗೆ ಆಲಸ್ಯ 1 ದಾನಕ್ಕೆ ದಾರಿದ್ರ್ಯ ತನಗೋಸುಗ ಸಾಲ ಮಾನವ ಜನಕೆ 2 ಮಕ್ಕಳ ಮದುವೆಗೆ ರೊಕ್ಕಸಾವಿರ ಹೊನ್ನು ಪಕ್ಕಿವಾಹನಗೆ ದೊರೆಯದೊಂದು ಕಾಸು 3 ಮತ್ತೆ ತನ್ನ ಹೆಂಡತಿಗೆ ಹತ್ತುವರಹದ ಸೀರೆ ಮುತ್ತೈದೆಗೀವರೆ ಮೂರಾಣೆಯ ಕುಬಸ 4 ಮದುವೆ ಮುಂಜಿಗೆ ಸಾಲ ಮಾಡದಿದ್ದರೆ ಹ್ಯಾಂಗೆ ಬುಧರು ಯಾಚಿಸಿದರೆಯಿಲ್ಲ ಎಂಬುವುದೇ? 5 ಎಷ್ಟು ಬಂದರು ಸಂಸಾರಕ್ಕೆ ಸಾಲದು ಭ್ರಷ್ಟ ಯಾಚಕರಿಗೇತಕೆ ಕೊಡಬೇಕು 6 ಸತಿಸುತನು ನಾವು ಸಲಹಿದರೆ ಸಾಕು ಅತಿಶಯದಾನ ಧರ್ಮಂಗಳು ಬೇಡ 7 ದಾಕ್ಷಿಣ್ಯಗಾರರಿಗೆ ಭಕ್ಷ್ಯ ಭೋಜ್ಯಗಳ ಊಟ ಕುಕ್ಷಿಂಭರರು ಕೇಳೆ ಭಕ್ಷ್ಯವೂ ಇಲ್ಲ 8 ಶ್ರೀನಿಧಿ ಗುರುರಾಮ ವಿಠಲ ವಲಿವನೆ? 9
--------------
ಗುರುರಾಮವಿಠಲ