ಒಟ್ಟು 6 ಕಡೆಗಳಲ್ಲಿ , 3 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

204ಏನು ಮರುಳಾದೆಯೇ ಎಲೆ ಭಾರತೀ ಪವಾನರಕುಲದೊಳಗೆ ಶ್ರೇಷ್ಠನಾದವಗೆಅ.ಪಕಣ್ಣಿಲ್ಲದವಳ ಗರ್ಭದಲಿ ಜನಿಸಿ ಬಂದುನಿನ್ನ ತೊರೆದು ಬ್ರಹ್ಮಚಾರಿಯಾದ ||ಹೆಣ್ಣಿಗಾಗಿ ಪೋಗಿ ವನವ ಕಿತ್ತಾಡಿ |ಉಣ್ಣ ಕರೆದರೆ ಎಂಜಲೆಡೆಯನೊಯ್ದವಗೆ 1ಹುಟ್ಟಿದನು ಗುರುತಲ್ವಗಾಮಿಯಾ ವಂಶದಲಿ |ನಟ್ಟಿರುಳೊಳೊಬ್ಬ ಅಸುರಿಯಕೂಡಿದ||ಹೊಟ್ಟೆಗೆಂತಲೆ ಹೋಗಿ ಭಿಕ್ಷದನ್ನವನುಂಡು |ಅಟ್ಟ ಹಾಕುವನಾಗಿ ದಿನವ ಕಳೆದವಗೆ 2ಮಂಡೆಬೋಳಾಗಿ ಭೂಮಂಡಲವ ತಿರುಗಿದ |ಕಂಡವರು ಯಾರು ಈತನ ಗುಣಗಳ ||ಪುಂಡರೀಕಾಕ್ಷಶ್ರೀ ಪುರಂದರವಿಠಲನ |ಕೊಂಡಾಡುತಲಿ ಬೋರೆ ಮರದ ಕೆಳಗಿದ್ದವಗೆ 3
--------------
ಪುರಂದರದಾಸರು
ಇಂಥಾ ದೂರುವುದೊಳಿತಲ್ಲವರೆಮ್ಮ ರಂಗಯ್ಯನು, ಹಾವಳಿ |ಅಂಥಾದು ಏನು ಮಾಡಿದನಮ್ಮ ಎಂದೆಂದಿಗು ನಮ್ಮ ||ಸಂತತಿಯೊಳು ಗುಣವಂತರೇ ಕೃಷ್ಣ ನಿ-ರಂತರ ಬಡವರನೆಂತು ದಣಿಸುವ ಪಕಣ್ಣೇ ಬಿಡುವನು ಬೆದರಿಸೆ ಮಾತರಿಯ ವನದೊಳಗಡಗಿಹ |ಮಣ್ಣು ತಿಂಬುವ ಬಾಯ್ದೆರೆವನಾರ್ಯ ಹಿತಕರ್ಮಗಳರಿಯ ||ಅನ್ನ ತಿನ್ನಲರಿಯ ಬೆಣ್ಣೆ ಮೆಲುವ ಬಲು |ಹೆಣ್ಣು ನೆರೆದು ಮತ್ತನ್ಯರೊಳು ಕಲಹೆ 1ಎಲ್ಲ್ಯಾಡೊದು ದುರ್ಗಂಧವು ಕಠಿಣಾಂಗ ನೆಲಗೆದರುವ ಶ್ರಿಂಗ |ರಿಲ್ಲದೆ ರಹದೆರೆವರ್ಭಕ ರಂಗ ಪಾಪವರಿಯ, ಮಂಗ- ||ರೊಲ್ಲಭ ಅಹಿಫಣೆಯಲ್ಲಿ ಕುಣಿದು ವಸ- |ನಿಲ್ಲದೆ ತಿರುಗುವಗೆಲ್ಲಿದೊ ವಾಚಿ2ಮೀನ ಕೂರ್ಮದಂತ್ಯುದಕದೊಳಗೆ ಆಡುವ ಕೆಸರೊಳಗೆ |ಶ್ರೀನಾರಸಿಂಹ ಸಣ್ಣವರೊಳಗೆ ಆಡುವ ತನ್ನೊಳಗೆ ||ತಾನೇ ಅಗ್ನಿಯ ನುಂಗಿ ನಭಕೇಶಗೆಮಾನವಕೊಟ್ಟಾನೆ ಪ್ರಾಣೇಶ ವಿಠಲನ 3
--------------
ಪ್ರಾಣೇಶದಾಸರು
ಏಕೆ ಗೋಪಾಲ ಕರೆಯುತಾನೆ - ಎಲೆ ಸಖಿಯೆ ಎನ್ನ |ಏಕೆ ಗೋಪಾಲ ಕರೆಯುತಾನೆ ? ಪಕಣ್ಣ ಸನ್ನೆ ಮಾಡುತಾನೆ - ಮತ್ತೆ ಬಗೆ ಬಗೆ |ಹಣ್ಣ ಕೈಯಲಿ ತೋರುತಾನೆ - ಎನ್ನ ಚೆಲುವಿಕೆ ||ಬಣ್ಣಿಸುತಲಿ ತಿರುಗುತಾನೆ - ಇವನೇನೆ |ಇನ್ನೂರು ವರಹಗಳ ಕೊಟ್ಟು ಮದುವೆಯಾದನೇನೆ ಎಲೆ ಸಖಿಯೆ 1ಹವಳ ಸರವ ತೋರುತಾನೆ - ದುಂಡು ಮುತ್ತಿನ - |ಧವಳಹಾರವ ನೀಡುತಾನೆ - ಹಾಸಿಗೆಯ ಮೇಲೆ ||ಪವಡಿಸಬೇಕೆನುತಾನೆ - ಇವನೊಡನಿರಲು ನ-|ಮ್ಮವರು ಸುಮ್ಮನೆ ಇಹರೇನೆ - ಎಲೆ ಸಖಿಯೆ 2ಬಟ್ಟಲ ಪಿಡಿದು ಬರುತಾನೆ - ಹಗಲೆ ಬಾ ಎಂದು -|ಬಟ್ಟ ಬಯಲೊಳು ಕರೆಯುತಾನೆ - ಎನ್ನ ಮನದೊಳು ||ದಟ್ಟು ಧಿಗಿಲು ಎನ್ನದೇನೆ - ಪುರಂದರವಿಠಲ - |ಇಟ್ಟು ಕೊರಳಾಣೆ ಈಗ ಬಾ ಎಂಬುವನೆ - ಎಲೆ ಸಖಿಯೆ 3
--------------
ಪುರಂದರದಾಸರು
ಬಲ್ಲವರಿಗರಿದಲ್ಲ ಪ್ರಮೇಯವಲ್ಲಬೆಳ್ಳಿ-ಭಂಗಾರಲ್ಲ ಮೆಲುವದಲ್ಲ ಪಕಣ್ಣೆವೆಯನಿಕ್ಕದು ಮತ್ಸ್ಯಾವತಾರನಲ್ಲ |ಘನ್ನ ಕಠಿಣವುಕೂರ್ಮರೂಪಿಯಲ್ಲ ||ಮಣ್ಣು ತಿಂಬುವದು ಇಟ್ಟಲ್ಲೆ ವರಹನೂ ಅಲ್ಲ |ಇನ್ನು ಬಾಯ್ದೆರೆದಿಹುದು ನರಸಿಂಹನಲ್ಲ 1ಮದುವೆಯಾಗಿಲ್ಲವು ವಾಮನಾವತಾರಲ್ಲ |ವದಗಿ ಛೇದಿಸುವದು ಭಾರ್ಗವಲ್ಲ ||ಮುದದಿಂದ ಅನ್ನವುಣ್ಣದು ದಾಶರಥಿಯಲ್ಲ |ತುದಿ ಮೊದಲು ಕಪ್ಪು ಶ್ರೀ ಕೃಷ್ಣನಲ್ಲ 2ಬತ್ತಲೆ ಇರುವದು ಬುದ್ಧಾವತಾರಲ್ಲ |ಕತ್ತರಿಸುವುದು ಬಿಡದೆ ಕಲ್ಕಿಯಲ್ಲ ||ಸತ್ಯಸಂಕಲ್ಪಶ್ರೀ ಪ್ರಾಣೇಶ ವಿಠಲನ |ಭೃತ್ಯರೇ ಬಲ್ಲರೀ ಗೋಪ್ಯ ಸೊಲ್ಲ 3
--------------
ಪ್ರಾಣೇಶದಾಸರು
ಮಂದರಧರ ದೇವ ಮೊರೆಹೊಕ್ಕವರ ಕಾಯ್ವಪಮಂದಾಕಿನಿಯ ಪಿತ ಮಾವ ಕಂಸನ ಹೃತ |ಸುಂದರ ಶಶಿವದನ ರಂಗಯ್ಯ ಅ.ಪಕಣ್ಣು ನೋಟದಿ ಚೆಲುವ, ಕಮಠರೂಪದಿ ನಲಿವ |ಹೆಣ್ಣ ಮೊರೆಯಕೇಳಿ ಹಿರಣ್ಯನುದರ ಸೀಳಿ ||ಮಣ್ಣು ಬೇಡಿ ಬೆಳೆದೆ - ಕೃಷ್ಣಯ್ಯ ||ಹೊನ್ನ ಕೊಡಲಿಯ ಪಿಡಿದು ಹತ್ತು ಗ್ರೀವನ ಕಡಿದು |ಚಿಣ್ಣರ ಒಡಗೂಡಿ ಚಪಲೆಯರ ವ್ರತಗೆಡಿಸಿ |ಚೆನ್ನರಾವುತನಾದೆಯೊ - ರಂಗಯ್ಯ 1ಗೋಚರನಂದದಲಿ - ಗಿರಿಯ ತಾಳಿದೆ ಬೆನ್ನಿನಲಿ |ಭೂಚೋರನ ಕೊಂದು ಬಾಲ ಕರೆಯಲು ಬಂದು |ಯಾಚಕ ನೀನಾದೆ - ರಂಗಯ್ಯ ||ಸೂಚತನ ಸುತಗೊಲಿದು ಶರಧಿಯಕಟ್ಟಿ ಮೆರೆದೆ |ಕೀಚಕಹತಪೋಷ ಖೇಚರಪುರವಾಸ |ನೀಚಜನರ ತರಿದೆ - ರಂಗಯ್ಯ 2ವನವನಲೆದು ಬಂದ - ವನಿತೆರತ್ನವ ತಂದ |ಘನಕಂಭದಿಂದ ಬಂದುಗರುವ ಮುರಿದು ಬಲಿಯ |ಜನನಿಯ ಶಿರವರಿದೆ - ರಂಗಯ್ಯ ||ಹನುಮವಂದಿತಪಾದ ಹರುಷ ಪಾಂಡುವವರದ |ಮನಸಿಜ ವೈರಿಗೊಲಿದು ಮಹಾಕಲಿಕಿಯಾದೆ |ಘನಪುರಂದರ ವಿಠಲ - ರಂಗಯ್ಯ 3
--------------
ಪುರಂದರದಾಸರು
ಶ್ರೀ ಮದುರೈ ಮೀನಾಕ್ಷಿ ಸ್ತೋತ್ರ81ಮೀನಲೋಚನೆ ಅಂಬಾ ದೀನಪಾಲಕೆನಿಂತಲ್ಲಿ ಶರಣೆಂದೆ ಎನ್ನ ಪೊರೆವಭಾರನಿನ್ನದೇ ಮಾತೆಪಕಣ್ಣು ಕಿವಿ ನಾಲ್ಕು ಕುದುರೆ ದೇಹವೆಂಬ ಹರಿಯರಥಕೆನಿನ್ನಧೀನ ಅಶ್ವಗತಿ ಸನ್ಮಾರ್ಗದಿ ನಡೆಸಿ ಕಾಯೆ 1ಕಂಡುಕೇಳಿನುಡಿವದೆಲ್ಲ ಉಂಡು ಉಟ್ಟು ಮಾಳ್ಪುದೆಲ್ಲಪುಂಡರೀಕನಯನ ಶ್ರೀಶ ರಥಿಕ ಪ್ರೀತಿ ಆಗೆ ಮಾಡೆ2ಮಂದಜಾಸನತಾತಪ್ರಸನ್ನ ಶ್ರೀನಿವಾಸನಿಗೆ ಪ್ರಿಯಇಂದುಧರÀ ಸತಿಯೇ ಶರಣು ಸ್ಕಂಧ ವಿಘ್ನರಾಜರ ಮಾತೆ 3
--------------
ಪ್ರಸನ್ನ ಶ್ರೀನಿವಾಸದಾಸರು