ಜಯದೇವ ಜಯದೇವ ಜಯ ಚಿದಾನಂದಜಯ ಜಯತು ಜಯ ಜಯತು ಜಯ ನಿತ್ಯಾನಂದ ಪ
ದೃಶ್ಯಾ ದೃಶ್ಯವಿದೂರ ದೂರ ಪರತತ್ವಾಮಿಕ್ಕು ಮೀರಿಹ ತೇಜ ತೇಜ ಮಹತ್ವಾಪೊಕ್ಕು ನೋಡಿಯೆ ಕಂಡು ನಿನ್ನ ನಿಜತ್ವನಕ್ಕು ನಿಜದಲಿ ಮಾಳ್ವೆ ಪಂಚೋಪಚಾರತ್ವ 1
ತಾನೆ ತಾನಾದ ಸುವಸ್ತು ನಿರ್ಲೇಪಧ್ಯಾನ ಮೌನ ಸಮಾಧಿಗೆ ತೋರ್ವರೂಪಏನ ಬಣ್ಣಿಸುವೆನು ಈ ಜಗವ್ಯಾಪಾನಾನರ್ಪಿಸುವೆ ನಿನಗೆ ಗಂಧಾನುಲೇಪ 2
ದುರಿತ ಕುಠಾರ ನೀನೆನಿಪೆಭರ್ಗಾ ಶ್ರೀವತ್ಸ ವೀಥಿಗಳ ರಕ್ಷಿಸುವೆಸರ್ಗಾದಿ ಮಹಾಪುಷ್ಪ ನಿನಗೆ ನಾನರ್ಪಿಸುವೆ3
ವಾಸನಕ್ಷಯದ ನಿರ್ವಾಸನ ಸ್ಪೂರ್ತಿಭಾಸಮಾನದಿ ತೋರುತಿದೆ ನಿನ್ನ ವಾರ್ತೆಈಶ ತಾಪಸರುಗಳು ನಿನ್ನ ಮೂರ್ತಿದೇಶಿ ಕೋತ್ತಮ ನಿನಗರ್ಪಿಸುವೆ ಧೂಪಾರತಿ4
ವಿಶ್ವ ವಿಶ್ವ ಸೂತ್ರ ವಿಖ್ಯಾತವಿಶ್ವ ಪೂರಿತ ತಂತ್ರ ವಿಶ್ವಾತೀತವಿಶ್ವ ಜ್ಯೋತಿಯನರ್ಪಿಸುವೆ ಗುರುನಾಥ 5
ನಿತ್ಯ ಸಂತುಷ್ಟ ಶಿರೋಭಾಗಅತ್ಯಂತ ಆನಂದವಹ ಸದಾಭೋಗಪ್ರತ್ಯಗಾತುಮತರ ಪುಷ್ಪಪರಾಗಅರ್ಥಿಯಲಿ ಅರ್ಪಿಸುವೆ ನೈವೇದ್ಯ ನಾನೀಗ6
ಇಂತುಪಚಾರಪಂಚದ ಪೂಜೆಯನೀಗಅಂತರಂಗದಿ ಚಿದಾನಂದನಿಗೆ ಈಗ ಸಂತಸದಿಂದ ನಾ ಮಾಡುತಲಾಗಎಂತು ಎನಲಿ ತಾನೇ ತಾನಾದ ಬೇಗ7