ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬರಿದೆ ಹೋಯಿತು ಹೊತ್ತು - ಹರಿಯೆ |ಶರೀರವೆ ಸ್ಥಿರವೆಂದು ಮರೆತು ನಾನಿದ್ದೆನೆ ಪಆಸೆಯೆಂಬುದು ಎನ್ನ ಕ್ಲೇಶಪಡಿಸುತಿದೆ |ಗಾಸಿಯಾದೆನೊ ಹರಿಯೆ ||ಶೇಷಶಯನನು ನೀನು ನಿನ್ನ ನಂಬಿದೆ ನಾನು |ನಾಶವಾಯಿತು ದಿನ ಮೋಸ ಹೋದೆನಯ್ಯ 1ಸತಿಸುತರೆಂದೆಂಬ ಅತಿ ಭ್ರಾಂತಿಗೊಳಗಾದೆ |ಮತಿಹೀನ ನಾನಾದೆನೊ ||ಸತತ ನಿರಂತರ ಜಡದೇಹ ನಾನಾದೆ |ರತಿಗೆಳೆಯುತಿದೆ ಮನಸು ಹರಿಸರ್ವೋತ್ತಮನೆ 2ಪರರ ಸೇವೆಯ ಮಾಡಿ ಪರರನೆ ಕೊಂಡಾಡಿ |ಮರೆತೆನೊ ನಿನ್ನ ಧ್ಯಾನ |ಕರುಣದಿಂದಲಿ ಎನ್ನ ಕಾಯ್ದು ನೀ ಸಲಹಯ್ಯ |ಪುರಂದರವಿಠಲ ನಿನ್ನನೆ ನಂಬಿದೆ ನಾನು3
--------------
ಪುರಂದರದಾಸರು