ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿತ್ಯ ನಿತ್ಯದಲಿ ಧೂಪ ಪ ನಾನದಾರಿಹೆನೆಂದು ತಿಳಿದವಗೆ ಧೂಪನಾನು ಆತ್ಮವು ಎಂದು ಕಂಡವಗೆ ಧೂಪನಾನಾ ಜೀವ ಭ್ರಾಂತಿಯಳಿದವಗೆ ಧೂಪತಾನೆ ತಾನಾಗಿಹೆನೆಂದವಗೆ ಧೂಪ 1 ಸಂಸಾರದೊಳು ಇದ್ದು ಇಲ್ಲದವನಿಗೆ ಧೂಪಸಂಸಾರ ಸಂತೆಂದು ಕಂಡವಗೆ ಧೂಪಸಂಸಾರ ಲೇಪ ಅಂಟದವನಿಗೆ ಧೂಪಸಂಸಾರದೊಳು ಮುಕ್ತನಾದವಗೆ ಧೂಪ2 ಸೂರ್ಯ ಚಂದ್ರ ಸ್ವರದಿ ನಡೆದವಗೆ ಧೂಪಆರು ಚಕ್ರದಿ ನಡೆದವಗೆ ಧೂಪಭೋರೆನಿಪ ಓಂಕಾರ ಕೇಳ್ದವಗೆ ಧೂಪಧೀರ ಚಿದಾನಂದ ಗುರುವಾದವಗೆ ಧೂಪ 3
--------------
ಚಿದಾನಂದ ಅವಧೂತರು
ಗುರುವಿನ ಒಲುಮೆಯು ಆಗುವ ತನಕ |ದೊರೆಯದಣ್ಣ ಮುಕುತಿ ಪ.ಪರಿಪರಿ ಶಾಸ್ತ್ರವನೇಕವನೋದಿ |ವ್ಯರ್ಥವಾಯಿತು ಭಕುತಿ ಅಪಆರು ಶಾಸ್ತ್ರಗಳನೋದಿದರೇನು |ಮೂರಾರು ಪುರಾಣವ ಮುಗಿಸಿದರೇನು ||ಸಾರಿ ಸಜ್ಜನರ ಸಂಗವ ಮಾಡದೆ |ಧೀರನಾಗಿ ತಾ ಮೆರೆದರೇನು ? 1ಕೊರಳೊಳು ಮಾಲೆಯ ಧರಿಸಿದರೇನು |ಕರದಲಿ ಜಪಮಣಿ ಎಣಿಸಿದರೇನು ||ಮರುಳನಂತೆ ತಾ ಶರೀರಕೆ ಬೂದಿಯ |ಒರಸಿಕೊಂಡು ತಾ ತಿರುಗಿದರೇನು 2ನಾರಿಯರ ಸಂಗವ ಅಳಿದರೇನು|ಶರೀರಕೆ ದುಃಖವ ಪಡಿಸಿದರೇನು|ಮಾರಯ್ಯ ಶ್ರೀ ಪುರಂದರವಿಠಲನ |ಮರೆಯದೆ ಮನದೊಳು ಬೆರೆಯುವ ತನಕ 3
--------------
ಪುರಂದರದಾಸರು
ತೇರನು ನೀವು ನೋಡಿಲ್ಲ ತಿಳಿಪುವೆ ಸಡಗರವೆಲ್ಲಚಾರುಯೋಗಿಯು ನೋಡಿಲಿದು ಚಲನೆ ಮನುಜರಿಗೆ ಸಲ್ಲದುಪಆರು ಚಕ್ರದ ಆರುನೆಲೆ ಮೂರು ಅವಸ್ಥೆಗಳ ಮೂರುಗಾಲಿಕುಂಡಲಿಎಂಬುದುಕೀಲುಚದುರಿನ ದಳಪಟ್ಟಿ ಮೇಲು1ಸಹಸ್ರಾರವೇ ಕೊನೆಯ ಸ್ಥಾನ ಸ್ವಾಮಿಯ ಸಿಂಹಾಸನಸೋಹಂ ಎಂದೆನಿಸುವ ಶಿಖರ ಸೊಗಸಿಂದಲಿಹುದು ಸುಪ್ರಕಾರ2ಸ್ಥಾನ ಸ್ಥಾನಕೆ ಒಂದು ಬೊಂಬೆ ಸಡಗರ ಏನೆಂಬೆಅನುರಾಗವೇ ಎಂಬ ಫಲವು ಆಶ್ಚರ್ಯ ತೇರಿನ ನಿಲುವು3ಹೇಷೆ ಎಂಬುವೆ ಕೋಟಿ ಚಂದ್ರ ಹೊಡೆವ ನಾದವೆ ವಾದ್ಯಸಾಂದ್ರಬಲುಹು ಆನಂದ ಸಲ್ಲಲಿ ಭಾಪು ಎನಲಿ ಸುಖದಲಿ4ಇಡಾಪಿಂಗಳ ಮಿಣಿಗಳಿಂದ ಎಳೆವುದು ಗುರುದಯದಿಂದಮೂಡಲಿಂದ ಪಶ್ಚಿಮಕ್ಕೆಗುರುಚಿದಾನಂದನ ಸ್ಥಾನಕ್ಕೆ5
--------------
ಚಿದಾನಂದ ಅವಧೂತರು
ಬಂದದೆಲ್ಲವೊ ಬರಲಿ - ಗೋ -ವಿಂದನ ದಯೆ ನಮಗಿರಲಿ ಪಮಂದರಧರ ಗೋವಿಂದ ಮುಕುಂದನಸಂದರುಶನ ನಮಗೊಂದೇ ಸಾಲದೆ ? ಅ.ಪಆರು ಅರಿಯದಿರಲೆನ್ನ - ಮುರಾರಿಯು ವರದ ಪ್ರಸನ್ನತೋರುವ ದುರಿತದ ಬೆನ್ನ -ಭವಹಾರಿ ಕೃಪಾಂಬುಧಿ ಚೆನ್ನ ||ಶ್ರೀರಮಣನ ಶ್ರೀಚರಣ ಸೇವಕರಿಗೆಘೋರಯಮನು ಶರಣಾಗತನಲ್ಲವೆ ? 1ಅರಗಿನ ಮನೆಯೊಳಗಂದು ಪಾಂಡುವರನು ಕೊಲಬೇಕೆಂದುದುರುಳ ಕುರುಪ ಕಪಟದಲಿ ಹಾಕಿರುತಿರೆ ಆ ಕ್ಷಣದಲಿ ||ಹರಿಕೃಪೆಯವರಲ್ಲಿದ್ದ ಕಾರಣದುರಿತವೆಲ್ಲ ಬಯಲಾದುದಲ್ಲವೆ ? 2ಸಿಂಗನ ಪೆಗಲೇರಿದಗೆ - ಕರಿಭಂಗವೇಕೆ ಮತ್ತವಗೆ |ರಂಗನ ದಯವುಳ್ಳವಗೆ - ಭವಭಂಗದ ಭೀತಿಯ ಹಂಗೆ ||ವiಂಗಳ ಮಹಿಮ ಶ್ರೀಪುರಂದರ ವಿಠಲನಹಿಂಗದ ದಯೆವೊಂದಿದ್ದರೆ ಸಾಲದೆ ? 3
--------------
ಪುರಂದರದಾಸರು