ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಡ ಹೋಗಲು ಬೇಡವೊ-ರಂಗಯ್ಯ |ಬೇಡಿಕೊಂಬೆನು ನಿನ್ನನು ಪಆಡ ಹೋಗಲುಬೇಡ ಗಾಡಿಕಾರ್ತಿಯರೊಳು |ಕೂಡಿ ಕೆಡಲು ಬೇಡವೊ-ರಂಗಯ್ಯ ಅ.ಪನೀರೊಳು ಮುಳುಗೆಂಬರೊ-ನಿನ್ನನು ದೊಡ್ಡ |ಭಾರವ ಹೊರು ಎಂಬರೊ ||ಕೋರೆದಾಡೆಗಳಿಂದ ಸೀಳಿ ರಕ್ಕಸನೊಡಲ |ಹಾರವ ಹಾಕೆಂಬರೊ-ರಂಗಯ್ಯ 1ಪೊಡವಿಯನಳೆಯೆಂಬರೊ-ನಿನಗೆ ದೊಡ್ಡ |ಕೊಡಲಿಯ ಪಿಡಿಯೆಂಬರೊ ||ಕಿಡಿಗಣ್ಣ ರುದ್ರನ ವರದ ದಶಕಂಠನ |ಮಡುಹಿ ನೀ ಬಾರೆಂಬರೊ-ರಂಗಯ್ಯ 2ಬೆಟ್ಟವನೆತ್ತಂಬರೊ-ನಿನ್ನನು ಬರಿ-|ಬಟ್ಟಾಗಿ ತಿರುಗೆಂಬರೊ ||ಪುಟ್ಟ ತೇಜಿಯನೇರಿ ನಲಿನಲಿದಾಡುತ |ದಿಟ್ಟ ಪುರಂದರವಿಠಲ-ರಂಗಯ್ಯ3
--------------
ಪುರಂದರದಾಸರು
ಇವನ ಹಿಡಿದುಕೊಂಡು ಹೋಗಲೊ ಜೋಗಿ |ಇವ ನಮ್ಮ ಮಾತು ಕೇಳದೆ ಪುಂಡನಾದನು ಪಆಡುಲಾಡುತ ಬಂದು ಮಡುವಿನೊಳ್ ಮುಳುಗಿದ |ಬೇಡವೆಂದರೆ ಬೆಟ್ಟ ಬೆನ್ನಲಿ ನೆಗಹಿದ ||ಓಡುತೋಡುತ ಬಂದು ದಾಡೆಯಿಂದ ಸೀಳ್ವ |ನೋಡ ಹೋದರೆ ಕಣ್ಣ ತರೆದಂಜಿಸುವ 1ಹುಲ್ಲಲಿ ಬ್ರಾಹ್ಮಣನ ಕಣ್ಣು ಕುಕ್ಕಿದ ಬುದ್ಧಿ ||ಅಲ್ಲವೆಂದರೆ ಕೊಡಲಿಯ ಪಿಡಿದೆತ್ತಿದ ||ಬಿಲ್ಲನು ಎಡದ ಕೈಯಿಂದಲಿ ಎತ್ತಿದ |ಬಲ್ಲಿದಮಾವನ ಶಿರವನರಿದು ಬಂದ2ಬತ್ತಲೆ ಕುದುರೆಯ ಹತ್ತಬೇಡೆಂದರೆ |ಹತ್ತುವ ಶ್ರೀಕೃಷ್ಣ ಚೆಂದದಿಂದ ||ಭಕ್ತವತ್ಸಲ ನಮ್ಮ ಪುರಂದರವಿಠಲನ |ಅತ್ತ ಹಿಡಿದು ಕೊಂಡು ಹೋಗಯ್ಯ ಜೋಗಿ 3
--------------
ಪುರಂದರದಾಸರು