ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೈ ಮುಗಿದು ಬೇಡುವೆನು ಕೈಲಾಸವಾಸಾ ||ವಹಿಲದಲಿ ಸಲಹೆನ್ನ ಈಶ ಗಿರಿಜೇಶಾ ಪಅಷ್ಟ ಭಾಗ್ಯವು ನೀನೆ | ಇಷ್ಟಮಿತ್ರನು ನೀನೆ |ಹುಟ್ಟಿಸಿದ ತಾಯ್ತಂದೆ |ವಿದ್ಯೆಗುರುನೀನೆ |ಸೃಷ್ಟಿ ಮೂರಕೆ ನೀನೆ ಅಧ್ಯಕ್ಷನೆನಿಸಿರುವೆ |ರಕ್ಷಿಸೆನ್ನನು ಜಟಾಜೂಟ ನಿಟಿಲಾಕ್ಷ 1ಮಾಯಾಪಾಶದಿ ಸಿಕ್ಕಿ |ಕಾಯಸುಖವನು ಬಯಸಿ |ಆಯತಪ್ಪಿದೆ ಮುಂದುಪಾಯವೇನಿದಕೆ |ಜೀಯನೀನೆಂದೆಂಬ | ನ್ಯಾಯವರಿಯದೆ ಕೆಟ್ಟೆ |ಕಾಯೊ ದಯದಲಿ ಮೃತ್ಯು | ಬಾಯಿಗೊಪ್ಪಿಸದೆ 2ಘೋರತರ ಸಂಸಾರ ಸಾಗರದಿ ಮುಳುಮುಳುಗಿ |ಕ್ರೂರ ನಕ್ರನ ಬಾಯಿಗಾಹಾರವಾದೆ |ದಾರಿಕಾಣದೆ ಬಳಲಿ ಮಾರಹರ ನಿನ್ನಂಘ್ರಿ |ಸೇರಿದೆನು ಗೋವಿಂದದಾಸನನು ಸಲಹೋ 3
--------------
ಗೋವಿಂದದಾಸ
ನೆಚ್ಚಿದಿರೋ ಪ್ರಾಣಿ ಸಂಸಾರ ಸ್ಥಿರವೆಂದುಹುಚ್ಚು ಬುದ್ದಿಯಲಿ ನೀ ಕೆಡಬೇಡ ಪ.ಎಚ್ಚರಿತುಕೊಂಡು ಧರ್ಮದಿ ನಡೆ ಕಣ್ಣನುಮುಚ್ಚಿದ ಮೇಲುಂಟೆ - ನರಜನ್ಮ ಸ್ಥಿರವಲ್ಲ ಅಪಅಷ್ಟಕಂಬವನಿಕ್ಕಿ ತಾಕದುಪ್ಪರಿಗೆಯಕಟ್ಟಿದ ಮನೆ ಇದ್ದಂತಿಹುದುಹೊಟ್ಟೆತುಂಬ ಉಣದೆ ಧನವ ಗಳಿಸಿ - ಬಚ್ಚಿಟ್ಟಲ್ಲಿರದೆ ಸಂಗಡ ಬಾಹೋದಲ್ಲ 1ಅತಿ ಪ್ರೀತಿಯಿಂದ ಮದುವೆಯಾದ ಮೋಹದಸತಿ ತನ್ನ ಮರಣದ ಕಾಲಕ್ಕೆಗತಿಯಾವುದೆನುತಲೆ ಮರುಗಿದಪ್ಪಳಲ್ಲದೆಜತೆಯಾಗಿ ನಿನ್ನ ಸಂಗಡ ಬಾಹಳಲ್ಲ 2ಒಂದೊಂದು ಪರಿಯ ಬುಧ್ಧಿಯ ಪೇಳಿ ಸಲುಹಿದಕಂದ ನಿನ್ನಾವಸಾನ ಕಾಲಕೆಮುಂದೇನು ಸಂಸಾರ ನಡೆಸಲುಪಾಯವೇನೆಂದು ಚಿಂತಿಸುವ ಸಂಗಡ ಬಾಹನಲ್ಲ 3ನಾಟರಿಷ್ಟರು ಬಂಧು - ಬಳಗವುಹರಿ ಕೊಟ್ಟುದುಂಟಾದರೆ ಬಂದು ಉಣ್ಣುವರುಕಂತಕ ಬಂದರೆ ಹೊತ್ತು ಕಾಷ್ಠದೊಳಿಟ್ಟುಕಂತಿಯ ತಂದೊಟ್ಟಿ ಸುಡುವರು ಕಾಣೊ 4ಇಂತಿದು ಒಂದು ಪ್ರಯೋಜನ ನಿನಗಿಲ್ಲಅಂತ್ಯಕಾಲಕ್ಕೆ ಸಂಗಡ ಬಾಹುದುಕಂತುಜನಕ ನಮ್ಮ ಪುರಂದರವಿಠಲನಸಂತತ ಧ್ಯಾನದೊಳಿರು ಕಾಣೋ ಮನುಜಾ 5
--------------
ಪುರಂದರದಾಸರು
ಯೋಗಿಯಹುದಹುದೋ ಚಿದಾನಂದಯೋಗಿಯಹುದುಹುದೋ ದಯಾಸಾಗರ ಕಾರಣ್ಯದಾಗರ ನಿತ್ಯಾತ್ಮಪಅಷ್ಟಮದಂಗಳನ್ನು ಸುಟ್ಟು ಭಸ್ಮವ ಮಾಡಿಹಅಷ್ಟ ಪ್ರಕೃತಿಯನ್ನು ಕಾರಿ ಕಾರಿ ಮಹದಷ್ಟ ಯೋಗವ ಸಾಧಿಸಿ ಶ್ರವಣವನ್ನುಕೊಟ್ಟುನಾದವ ಭೇದಿಸಿ ಆತ್ಮದಲ್ಲಿದೃಷ್ಟಿ ಎಂಬುದ ನಿರಿಸಿ ಸರ್ವಕಾಲಶಿಷ್ಟರೆಂದೆನಿಪ ಉತ್ಕøಷ್ಟಮಾರ್ಗದವಾಸಿ1ಆರು ಅರಿಯ ಮೀರಿದರು ಭ್ರಮೆಯ ವಿಕಾರವ ತರಿದುತರಿದು ಹೀರಿ ಆರು ಚಕ್ರದ ಮೇಲೆಏರಿ ಸಹಸ್ರಾರ ಸ್ಥಳದಿನಿಂದುಜ್ಯೋತಿರ್ಮಯಸಾರವ ಸೇವಿಸುತಲಂದು ನಿತ್ಯಾನಿತ್ಯಘೋರತಪದಿಯೋಗಿಶೂರ ಭಕ್ತರ ಬಂಧು2ಸಪ್ತವ್ಯಸನರೂಪಕೆಡಿಸಿ ಬಳಿಕ ದುಷ್ಟಸಪ್ತಾವರಣವನ್ನು ತುಳಿದು ಪಾದದಲೊದ್ದುಗುಪ್ತವಾಗಿಹ ಪ್ರಭೆಯ ಶೋಧಿಸಿಘನತೃಪ್ತ ಅಮೃತ ಸುಧೆಯ ಸುರಿದು ಮೇರುಕಾಂಚನ ಗಿರಿಯ ಸೇರಿಯೆ ಜ್ಯೋತಿವ್ಯಾಪಕಭಾಸ್ಕರದೀಪ್ಯಮಾನ ಪ್ರಭಾ3ಕರ್ಮಪಾಪವು ಪುಣ್ಯಹಮ್ಮುವಾಸನಕ್ಷಯದುರ್ಮತಿ ದುರ್ಗುಣವೆಲ್ಲ ದೊಡ್ಡಬ್ರಹ್ಮಾನಂದದ ಲಕ್ಷಣ ತಿಳಿದಾ ನಿತ್ಯಾನಿರ್ಮಳ ನಿರಾವರಣ ರೂಪಿತ ಆತ್ಮಸ್ವರ್ಮಣಿ ಸುಗುಣನಿರ್ಗುಣಪರಬ್ರಹ್ಮವೇ ತಾನಾಗಿ ಬೆಳಗುವ ಯತಿ ಜಾಣ4ಸಾಧನ ನಾಲ್ಕನು ಸಾಧಿಸಿನಾದವ ಭೇದಿಸಿ ಜ್ಯೋತಿ ಸಂಪಾದಿಸಿ ಆತ್ಮನಭೇದವೆಂಬುದನರಿತ ಬಳಿಕಘನಸಾಧನಗುಣಚರಿತಯೋಗಿ ತಾನೆನಿಸಿ ಕೈವಿಡಿಯೆನ್ನಬೋಧಸದ್ಗುರು ಚಿದಾನಂದಅವಧೂತ5
--------------
ಚಿದಾನಂದ ಅವಧೂತರು
ಶಿರಿರಮಣ ದಯದಿಂದ ಮಂತ್ರಾಘ್ರ್ಯ ಕೊಡುವ ಬಗೆ |ಪರಮೇಷ್ಠಿಗೊಲಿದು ಪೇಳಿದನು ಇಂತೂ ಪಅಷ್ಟಾಕ್ಷರದಿ ಮಂತ್ರಾಘ್ರ್ಯ ಸಾಲಗ್ರಾಮ |ವಿಟ್ಟು ಸದ್ ಭಕ್ತಿಯಲಿ ಶಂಖದಿಂದಾ ||ಕೊಟ್ಟವಗೆ ಸಂತುಷ್ಟನಾಗಿ ಎನ್ನಯ ಸದನದೋ- |ಳಿಟ್ಟು ಸಂತೈಸುವೆನು ಬ್ರಹ್ಮ ಕೇಳೂ 1ಸತ್ಯಭಾಮಾದಿ ಮಿಕ್ಕಾದ ಮಂತ್ರಾಘ್ರ್ಯವನು |ಮತ್ಪಾದ ಜಲದಿಂದ ಪಾತ್ರಿಯಲ್ಲೀ ||ಹಸ್ತದಿಂ ಕೊಡಬೇಕು ಎನ್ನ ಪ್ರೀತಿ ಎಲೊ ಇದು |ಸತ್ಯಲೋಕಾಧಿಪನೆ ಕೇಳು ಮುದದೀ 2ಎನ್ನ ಮಂತ್ರಾಘ್ರ್ಯ ಹಸ್ತದಲಿ ಪಾತ್ರಿಯೊಳೀಯೆ |ಅನ್ಯಾಯವೆಷ್ಟೆಂದು ಪೇಳಲೀಗಾ ||ವನ್ನಜಾಸನ ಎನಗರಕ್ತವೆರದಂತಹದೊ |ಮುನ್ನವರ ಕ್ಲೇಶಕ್ಕೆಎಣಿಕೆಇಲ್ಲಾ 3ಅದರಿಂದ ತಿಳಿದು ಸಾಲಗ್ರಾಮವಿಟ್ಟು ಶಂ- |ಖದಲಿ ಕೊಡಬೇಕು ಎನ್ನಘ್ರ್ನಗಳನೂ ||ವಿಧಿಕಾಷ್ಟಗತವಹ್ನಿಮಥಿಸೆ ತೋರ್ವಂತೆ ಸ- |ರ್ವದ ತೋರ್ವೆ ನಾನು ಸಾಲಗ್ರಾಮದೀ 4ಶ್ರೀ ನಾರಿ ಪ್ರಮುಖ ಮಂತ್ರಾಘ್ರ್ಯ ಶಂಖದಲಿ ಕೊಡೆ |ನಾನೊಪ್ಪೆನವರ ಭಂಗವ ಬಡಿಸುವೇ ||ವಾಣೀಶ ತಿಳಿಯಂದು ಸ್ಮಿತ ವದನದಿಂದ ಶ್ರೀ |ಪ್ರಾಣೇಶ ವಿಠಲ ನಿರೂಪಿಸಿದನೂ 5
--------------
ಪ್ರಾಣೇಶದಾಸರು