ಭುವನೇಂದ್ರತೀರ್ಥರ ಸ್ತೋತ್ರ
ಭುವನೇಂದ್ರ ಯತಿ ರನ್ನ ಭುವನ ಪಾವನ್ನತವಕದಿಂ ವ್ಯಾಸರಾಯರ ಭಜಿಪ ಘನ್ನ ಪ
ಅದ್ವೈತ ಮತ ಕೋಲಾಹಲ ಸುಜ-ನಾಬ್ಧಿ ಸಮೃದ್ಧಿ ಎಂದೆನಿಪ ಮುನಿಪ ||ಸದ್ಧರ್ಮ ಸತ್ತಾಪಸ ಸಕಲ ವಿದ್ಯಾಲಾಪಅದ್ವೈತ ತ್ರಯ ವರ ಪ್ರವರ್ತಕನೇ1
ತಂತ್ರ ಸಾರಾಂತ ಆದ್ಯಂತಗಳ ಅರ್ಥವ ನಿ-ರಂತರದಲಿ ಪೇಳಿ ಹರುಷದಿಂ ||ಮಂತ್ರೋಪದೇಶವಂ ಮಾಡಿ ಮುದ್ರೆಯನಿತ್ತುಯಂತ್ರವಾಹಕನ ತೀರ್ಥವನೆರೆದ ಧೀರ 2
ಮುನಿ ಕುಲೋತ್ತಮ ಶ್ರೀ ವರದೇಂದ್ರ ತೀರ್ಥಕರಕಮಲ ಸಂಜಾತ ಭುವನ ವಿಖ್ಯಾತ ||ಅನಿಮಿತ್ತ ಬಂಧು ಗುರು ಮೋಹನ್ನ ವಿಠಲನ್ನಕ್ಷಣ ಬಿಡದೆ ಧೇನಿಸುವ ಗುರುವೇ ಸುರತರುವೇ 3