ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗೋಪಿಯ ಭಾಗ್ಯವಿದು |ಆ ಪರಮಾತ್ಮನ ಅಪ್ಪಿ ಮುದ್ದಿಡುವುದು ಪಅಂಬೆಗಾಲಿಡು ಹರಿಕುಣಿದಾಡೈ ತೋ-|ಳಂಬಲಿ ತಾ ಹೊಂಗುಬ್ಬಿಯನು ||ಅಂಬುಜನಾಭ ನೀನಾನೆಯನಾಡೆಂದು |ಸಂಭ್ರಮದಿಂದ ಮುದ್ದಾಡುವಳೊ 1ನಿತ್ಯನಿರ್ಮಲನಿಗೆ ನೀರನೆರೆದು ತಂದು |ಎತ್ತಿ ತೊಡೆಯೊಳಿಟ್ಟು ಮುದ್ದಿಸುತಾ ||ಸತ್ಯಲೋಕವನಾಳುವ ವಿಧಿಜನಕನ |ಪುತ್ರನೆಂದರಿತು ತಕ್ಕೈಸುವಳೊ 2ಪಾಲುಗಡಲು ಮನೆಯಾಗಿ ಮೂಲೋಕವ |ಪಾಲಿಸುತಿಪ್ಪ ನಾರಾಯಣನ ||ಕಾಲಮೇಲೆ ಮಲಗಿಸಿ ಬಟ್ಟಲ ತುಂಬ |ಹಾಲು ಕುಡಿಸಿ ಸಂತೈಸುವಳೊ 3ಹರಿನಿತ್ಯತೃಪ್ತನೆಂದರಿಯದೆ ಹೊನ್ನಿನ |ಹರಿವಾಣದೊಳಗೆ ಮೃಷ್ಟಾನ್ನವನು ||ನೊರೆಹಾಲು ಘೃತ-ಸಕ್ಕರೆ ಕೂಡಿಸಿ ಕರೆ-|ಕರೆದು ಉಣಿಸಿ ತೃಪ್ತಿ ಬಡಿಸುವಳೊ 4ಅಂಗಜಪಿತನಿಗೆ ಮೋಹದಿಂದ ಹೊಸ |ಅಂಗಿಯ ತೊಡಿಸಿ ಟೊಪ್ಪಿಗೆ ಇರಿಸಿ ||ಬಂಗಾರದರಳೆಲೆ ಬಿಂದುಲಿಗಳನಿಟ್ಟು |ಸಿಂಗರವನು ಮಾಡಿ ನೋಡುವಳೊ 5
--------------
ಪುರಂದರದಾಸರು