ಒಟ್ಟು 7 ಕಡೆಗಳಲ್ಲಿ , 2 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾಪಾತ್ಮ ನಾನಲ್ಲ ಪಾಪವೆನದಿನಿತಿಲ್ಲ ಪ ಶ್ರೀಪತಿಯೆ ನಿನಗೆ ನೀನೇ ಮಾಡಿಕೊಂಡೆ ಅ ವರದನು ಕರದಲಿ ಉಷ್ಣಜಲ ಮೃತ್ತಿಕೆಯತರಲು ಕೈ ಸುಟ್ಟಾಗ ಪಣೆಯ ಠೊಣೆದು ಬೈದೆಮರಳಿ ನಾಚಿಕೆ ಇರದೆ ಚರಣಕೆ ಪಾವುಗೆ ತಂ-ದಿರಿಸಿದಪರಾಧ ಎನ್ನದೊ ನಿನ್ನದೊ ದೇವ 1 ಬಂದ ಭೃಗು ಮುನಿ ಎದೆಯನೊದೆಯೆ ಆತಗೆ ಪಾಪಅಂದು ಮೂದಲಿಸಿ ಬೈದವರಿಗೆ ದೋಷನಿಂದುದೇ ಹಣೆಯೊಳಗೆಸೆಯೆ ಭೀಷ್ಮಂಗಘವುಹೊಂದಿದಾ ಪಾಂಡವರಿಗೆ ಕುಂದು ಬಂದಿತೆ ದೇವ2 ಕುರುಡನಿಗೆ ದಾರಿಯನು ತೋರದೆ ಆತಗೆ ಮುನಿದುದರಿಗೆ ನೂಕಿದಡೆ ಅವನು ಏನು ಮಾಡುವನುಶಿರಕೆ ತಪ್ಪಾಗಿ ಗುರಿಯಿಡಲದು ಸರಳ ತಪ್ಪೆಅರಸನಾಳ ಕೊಂದಡೆ ಆರೇನು ಮಾಡುವರು 3 ಕುಣಿಸಿದರೆ ಆಡುವುದು ಬೊಂಬೆ ಸೂತ್ರಮುಖದಿಇನಿತುಂಟೆ ಕಪಟನಾಟಕ ಸೂತ್ರಧಾರಿಇನಿತಾಡಿಸಿದರಾಡುವೆ ಪಾಪ ಪುಣ್ಯಂಗಳಿಂದಎಣಿಕೆಗಾನಲ್ಲ ನೀನಲ್ಲದಿಲ್ಲ 4 ತಂದೆತಾಯಿಗಳು ತಮ್ಮ ಕಂದಗೆ ಸರ್ಪಮುಖದಿಂದ ಕಚ್ಚಿಸಲು ಆ ತಪ್ಪು ಕಂದನದೆಮುಂದರಿಯದಜ್ಞಾನಿಯೆಂದು ಕ್ಷಮಿಸೆಲ್ಲವನು ತಂದೆ ವೇಲಾಪುರದ ಆದಿಕೇಶವನೆ5
--------------
ಕನಕದಾಸ
ಅಂದೆ ನಿರ್ಣಯಸಿದರು ಕಾಣೋ |ಇಂದಿರಾಪತಿ ಪರದೈವತವೆಂಬುದ ಪಅಂದು ಚತುರ್ಮುಖ ನಾರದನಿಗೆ ತನ್ನ |ತಂದೆ ಶ್ರೀಹರಿ ಪರದೈವವೆಂದು ||ಸಂದೇಹಗಳ ಪರಿಹರಿಸಿಹ ದ್ವಿತೀಯದಸ್ಕಂಧದೊಳಯ್ದನೆಯ ಅಧ್ಯಾಯದಲಿ 1ಅಂದು ಕಪಿಲದೇವ ದೇವಹೊಲೆಗೆ ತಾನು |ಚೆಂದದ ತತ್ತ್ವವನೆಲ್ಲ ಬೋಧಿಸಿದ ||ಅಂದದಲರ್ಜುನ - ಉದ್ದವರಿಗೆ ಅಂದಾ - |ನಂದದಿ ಗೀತಾಶಾಸ್ತ್ರವನೊರೆದನೆಂದು 2ವೇದೈಶ್ಚ ಸರ್ವೋರಹಮೇವ ವೇದ್ಯಃ |ವೇದವಿಧಾಯಕ ನಾಮದವನು ||ವೇದಾಕ್ಷರಗಳು ಹರಿನಾಮಗಳೆಂದು |ವೇದಾಂತ ಸಿದ್ಧಾಂತಗಳಲಿ ಪೇಳಿದರೆಂದು 3ರಾಜಸ -ತಾಮಸ ಪೌರಾಣಗಳಿವು |ರಾಜಸ -ತಾಮಸ ಜೀವರಿಗೆ ||ರಾಜಸ -ತಾಮಸ ಗತಿಗೋಸ್ಕರ ಮುನಿ - |ರಾಜ ವ್ಯಾಸನು ಮೋಹಕವೆಂದು ಪೇಳಿದ 4ಬಿಡು ಪಾಷಂಡಮತದ ದುರ್ಬುದ್ಧಿಯ |ಬಿಡದೆಮಾಡು ವೈಷ್ಣವಸಂಗವ ||ಧೃಡಭಕ್ತಿಯಿಂದ ಶ್ರೀಹರಿಯ ಪೂಜಿಸಿದರೆ |ಮೃಡಪ್ರಿಯ ಪುರಂದರವಿಠಲನೊಲಿವನೆಂದು 5
--------------
ಪುರಂದರದಾಸರು
ಕಂಡೆನಾ ಕನಸಿನಲಿ ಗೋವಿಂದನ ಪಕಂಡೆನಾ ಕನಸಿನಲಿ ಕನಕರತ್ನದ ಮಣಿಯ |ನಂದನ ಕಂದ ಮುಕುಂದನ ಚರಣವ ಅ.ಪಅಂದುಗೆಕಿರುಗೆಜ್ಜೆ ಘಲಿರೆಂಬ ನಾದದಿಬಂದು ಕಾಳಿಂಗನ ಹೆಡೆಯನೇರಿ ||ಧಿಂಧಿಮಿ ಧಿಮಿಕೆಂದು ತಾಳಗಳಿಂದಾನಂದದಿ ಕುಣಿವ ಮುಕುಂದನ ಚರಣವ 1ಉಟ್ಟ ಪೀತಾಂಬರ ಉಡಿಯ ಕಾಂಚಿಯದಾಮತೊಟ್ಟ ಮುತ್ತಿನ ಹಾರ ಕೌಸ್ತುಭವು ||ಕಟ್ಟಿದವೈಜಯಂತಿತುಲಸಿಯ ವನಮಾಲೆಇಟ್ಟ ದ್ವಾದಶನಾಮ ನಿಗಮಗೋಚರನ 2ಕಿರುಬೆರಳಿನ ಮುದ್ರೆಯುಂಗುರ ಮುಂಗಡೆಕರದಲಿ ಕಂಕಣ ನಳಿತೋಳುಗಳ ||ವರಚತುರ್ಭುಜ ಶಂಖಚಕ್ರದಿ ಮೆರೆವನನಿರುತದಿ ಒಪ್ಪುವ ಕರುಣಾ ಮೂರುತಿಯ 3ಬಣ್ಣದ ತುಟಿ ಭಾವರಚನೆಯ ಸುಲಿಪಲ್ಲಸಣ್ಣ ನಗೆಯ ನುಡಿ ಸವಿಮಾತಿನ ||ಪುಣ್ಯ ಚರಿತ್ರನ ಪೊಳೆವ ಕಿರೀಟನಕಣ್ಣು ಮನ ತಣಿಯದಕಂಸಾರಿಕೃಷ್ಣನ4ಮಂಗಳ ವರತುಂಗಭದ್ರದಿ ಮೆರೆವನಅಂಗಜಪಿತಶ್ರೀ ಲಕ್ಷ್ಮೀಪತಿಯ ||ಶೃಂಗಾರ ಮೂರುತಿಪುರಂದರವಿಠಲನಕಂಗಳಿಂದಲಿ ಕಂಡೆ ಹಿಂಗಿತು ಭವಭಯ 5
--------------
ಪುರಂದರದಾಸರು
ಚೆಂದವ ನೋಡಿರೆ-ಗೋಕುಲಾ-|ನಂದನ ಮೂರುತಿಯ ಪಅಂದುಗೆಪಾಡಗ ಗೆಜ್ಜೆಯ ಧರಿಸಿ |ಧಿಂ ಧಿಂ ಧಿಮಿಕೆಂದು ಕುಣಿವ ಕೃಷ್ಣನ ಅ.ಪಕೊರಳ ಪದಕಹಾರ ಬಿಗಿದು |ತರಳರೆಲ್ಲರ ಕೂಡಿಕೊಂಡು ||ಕುರುಳುಗೂದಲ ಅರಳೆಲೆತಿಯು |ಮಿರು-ಮಿರುಗುತ ಮೆರೆವ ಕೃಷ್ಣನ 1ಉಡೆಯ ಗಂಟೆ ಘಣಘಣೆನುತ |ನುಡಿಯೆ ಮೆಲ್ಲನೆ ಪಿಡಿದುಕೊಂಡು ||ನಡೆದಾಡುತ ಸಡಗರದಲಿ |ಬೆಡಗ ಮಾಡಿ ಆಡುವ ರಂಗನ 2ಬಲುಬಲು ಆಶ್ಚರ್ಯದಿಂದ |ನಲಿವ ಪುರಂದರವಿಠಲರಾಯ ||ಹಲವು ಸುಖವ ನಮಗೆ ಇತ್ತ |ಜಲಜಲೋಚನಬಾಲಕೃಷ್ಣನ3
--------------
ಪುರಂದರದಾಸರು
ಪರಮಪದವಿಯ ನೀವ ಗುರುಮುಖ್ಯ ಪ್ರಾಣನಧರೆಯೊಳಗುಳ್ಳ ಮಾನವರೆಲ್ಲ ಭಜಿಸಿರೊ ಪಅಂದು ತ್ರೇತೆಯಲಿ ಹನುಮನಾಗಿ ಅವತರಿಸಿಬಂದು ದಾಶರಥಿಯ ಪಾದಕೆರಗಿ ||ಸಿಂಧುವನೆ ದಾಟಿ ಮುದ್ರಿಕೆಯಿಕ್ತು ದಾನವರವೃಂದಪುರ ದಹಿಸಿ ಚೂಡಾಮಣಿಯ ತಂದವನ 1ದ್ಪಾಪರಯುಗದಲಿ ಭೀಮಸೇನ ನೆನಿಸಿಶ್ರೀಪತಿಯಪಾದಕಡು ಭಜಕನಾಗಿಕೋಪಾವೇಶದಲಿ ದುಃಶಾಸನನನು ಸೀಳಿಭೂಪರ ಬಲದೊಳಗೆ ಜರೆಜರೆದು ಕರೆದವನ 2ಕಲಿಯುಗದಲಿ ತುರೀಯಾಶ್ರಮವನೆ ಧರಿಸಿಕಲುಷದ ಮಾಯಿಗಳನು ಸೋಲಿಸಿಖಿಲವಾದ ಮಧ್ವಮತವನೆ ನಿಲಿಸಿ ಕಾಗೆ-ನೆಲೆಯಾದಿ ಕೇಶವನ ಪರದೈವನೆಂದೆನಿಸುವನ * 3
--------------
ಪುರಂದರದಾಸರು
ಮಧ್ವಮುನಿಯೆ -ಗುರು- ಮಧ್ವಮುನಿಯೆಪಮಧ್ವಮುನಿ ನಮ್ಮೆಲ್ಲರ | ಉದ್ಧರಿಸುವ ಕಾಣಿರೊ ಅ.ಪಅಂದು ಹನುಮಂತನಾಗಿ | ಬಂದ ರಾಮಪದಾರ-ವಿಂದದಿ ನೆರೆದು ತುಂಬಿಯಂದದಿ ಶೋಭಿಸಿದ 1ಏಣಾಂಕವಂಶದಿ ಪುಟ್ಟಿ | ಕ್ಷೋಣಿಪಾಲಕ ಶಿರೋಮಾಣಿಕ್ಯವಾಗಿ ಹರಿಗೆ | ಪ್ರಾಣನೆಂದೆನಿಸಿಕೊಂಬ 2ಕಟ್ಟಕಡೆಯಲ್ಲಿ ಯೋಗ | ದಿಟ್ಟನಾಗಿಪುರಂದರ|ವಿಠಲಗಾವಾಸವಾದ | ಪೆಟ್ಟಿಗೆಯೊಲೊಪ್ಪುವಂಥ 3
--------------
ಪುರಂದರದಾಸರು
ಹರಿಯೆಂಬ ನಾಮಮೃತ ರುಚಿಕರವೆಲ್ಲಪರಮಭಕ್ತರಿಗಲ್ಲದೆ - ಮಿಕ್ಕ -|ಅರಿಯದ ಕಡುಮೂರ್ಖ ಮನುಜರಿಗೆಲ್ಲತಾಹರುಷವಾಗಬಲ್ಲದೆ? ಪಅಂದುಗೆಅರಳೆಲೆಯಿಟ್ಟರೆಕೋಡಗಕಂದನಾಗಬಲ್ಲದೆ? |ಹಂದಿಗೆ ತುಪ್ಪ-ಸಕ್ಕರೆ ತಿನ್ನಿಸಲು ಗ-ಜೇಂದ್ರನಾಗಬಲ್ಲದೆ? ||ಇಂದುಪೂರ್ಣಕಳೆಯೊಳು ತಾನು ತೋರಲುಪರಿಪರಿ ಬಂಗಾರವಿಟ್ಟರೆ ದಾಸಿ ತಾಅರಸಿಯಾಗಬಲ್ಲಳೆ? |ಭರದಿಂದ ಶ್ವಾನನ ಬಾಲವ ತಿದ್ದಲುಸರಳವಾಗಬಲ್ಲದೆ? ||ಉರಗಗೆ ಕ್ಷೀರವನೆರೆಯಲು ಅದು ತನ್ನಗರಳವ ಬಿಡಬಲ್ಲದೆ? ||ಭರದಿಂದ ನೀಲಿಯ ಕರದಿಂದ ತೊಳೆಯಲುಕರಿದು ಹೋಗಬಲ್ಲದೆ? | 2ಮೋಡಕೆ ಮಯೂರ ಕುಣಿವಂತೆ ಕುಕ್ಕುಟನೋಡಿ ಕುಣಿಯಬಲ್ಲದೆ? |ಗೋಡೆಗೆ ಎದುರಾಗಿ ನಾಟ್ಯವಾಡಲುನೋಡಿ ಸುಖಿಸಬಲ್ಲದೆ? ||ಹಾಡಿನ ಕುಶಲತೆ ಬಧಿರನು ತಾ ಸವಿ-ಮಾಡಿ ಕೇಳಬಲ್ಲನೆ? |ರೂಢಿಗೊಡೆಯ ನಮ್ಮಪುರಂದರವಿಠಲಮೂಢಜಾÕನಿ ಬಲ್ಲನೆ3
--------------
ಪುರಂದರದಾಸರು