ಒಟ್ಟು 4 ಕಡೆಗಳಲ್ಲಿ , 1 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೂಸನು ಕಂಡಿರಾ-ಮುಖ್ಯಪ್ರಾಣನ ಕಂಡಿರಾ ಪಅಂಜನೆಯುದರದಲಿ ಹುಟ್ಟಿತು ಕೂಸುರಾಮರ ಪಾದಕ್ಕೆರಗಿತು ಕೂಸು ||ಸೀತೆಗೆ ಉಂಗುರ ಕೊಟ್ಟಿತು ಕೂಸುಲಂಕಾಪುರವನು ಸುಟ್ಟಿತು ಕೂಸು 1ಬಂಡಿಯನ್ನವನುಂಡಿತು ಕೂಸು |ಬಕನ ಪ್ರಾಣವ ಕೊಂಡಿತು ಕೂಸು ||ವಿಷದ ಲಡ್ಡುಗೆಯ ಮೆದ್ದಿತು ಕೂಸು |ಮುಡದಿಗೆ ಪುಷ್ಪವ ತಂದಿತು ಕೂಸು 2ಮಾಯಾವಾದಿಗಳ ಗೆದ್ದಿತು ಕೂಸು |ಮಧ್ವಮತವನ್ನುದ್ಧರಿಸಿತು ಕೂಸು ||ಮುದ್ದು ಶ್ರೀಪುರಂದರವಿಠಲನ ದಯದಿಂದ |ಉಡುಪಿಯಲ್ಲಿ ಬಂದು ನಿಂತಿತು ಕೂಸು 3
--------------
ಪುರಂದರದಾಸರು
ಜಯಮಂಗಳಂನಿತ್ಯಶುಭಮಂಗಳಂಪಮಂಗಳವು ಆನಂದ ತೀರ್ಥ ಗುರುರಾಯರಿಗೆಮಂಗಳವು ಮಧುರವಾಕ್ಯ ಸುಭಾಷ್ಯಗೆ ಅಪಅಂಜನೆಯ ಗರ್ಭಸಂಜಾತ ವಿಖ್ಯಾತನಿಗೆಸಂಜೀವಿನಿಯ ತಂದ ಹನುಮಂತಗೆ ||ಸಂಜೆಯಲಿ ಲಂಕಿಣಿಯನಂಜಿಸಿ ಪೊಕ್ಕ ಪ್ರಭಂಜನನ ಕುವರ ಮಂಜುಳ ವಾಕ್ಯಗೆ 1ದ್ವಾಪರದಿ ಕುಂತಿಯೊಳ್ ಪರ್ವತದಿ ಜನಿಸಿದಗೆಪಾಪಿ ಜರಾಸಂಧನನು ಸೀಳ್ದವಗೆ ||ದ್ರೌಪತಿಯ ಸೌಗಂಧಿ ಕುಸುಮವನು ತಂದವಗೆಶ್ರೀಪತಿಯ ದಾಸ ಶ್ರೀ ಭೀಮಸೇನನಿಗೆ 2ಕಲಿಯುಗದಿ ಶಂಕರನ ದುರ್ಮತವ ತರೆದವಗೆಖಳ ಬೌದ್ಧ ಚಾರ್ವಾಕ ಮತವ ಗೆಲಿದವಗೆ ||ಒಲಿದು ಸಚ್ಛಾಸ್ತ್ರವನು ಸಾಧುಗಳಿಗೊರೆದವಗೆಸು¯ಭ ಪುರಂದರವಿಠಲನ ದಾಸಗೆ 3
--------------
ಪುರಂದರದಾಸರು
ರಾಯನ ನೋಡಿರೋ - ಮಧ್ವ - ರಾಯನ ಪಾಡಿರೊ ಪಅಂಜನೆಯಲಿ ಹುಟ್ಟಿ ಅಂಬರಕಡರಿದಹರಿಯೋ - ಸಿಂಹದ - ಮರಿಯೋ |ಕಂಜಾಕ್ಷಿಯ ಸುದ್ದಿಗೆ ಶರಧಿಯ ಲಂಘಿಸಿದ-ಪುರ- ಸಂಧಿಸಿದಅಂಜದೆ ವನವನು ಕಿತ್ತಿದ ಪುರವನುಸುಟ್ಟ - ತಾ ಬಲು - ದಿಟ್ಟಾ |ಸಂಜೀವನ ಗಿರಿ ತಂದು ವಾನರರಪೊರೆದಾ - ರಾಮನ - ಬೆರೆದಾ 1ಕುಂತಿ ಕುಮಾರನು ಶೀಮೆಗೆ ಹರುಷದಿಬೆಳೆದ - ಖಳರನು - ತುಳಿದ |ಅಂತ ಕೌರವ - ದುಶ್ಯಾಸನರಾ ಶಿರತರೆದಾ - ಚಲವನು - ಮೆರೆದ |ಸಂತಾಪವ ಪಡಿಸಿದ ಕುಜನಕೆ ಭೀಮ -ನಾದ -ಸನ್ನುತ- ನಾದ |ಕಂತುಜನಕಶ್ರೀ ಕೃಷ್ಣನ ಪಾದದಿಬಿದ್ದ - ಮದಗಜ - ಗೆದ್ದ 2ಮುನಿಕುಲದಲಿ ಉದಿಸಿದ ಗುರುಮಧ್ವ ತಾನಾದ - ಧರೆಯಲಿ - ಮೆರೆದ |ಅನಿಮಿಷರೊಡೆಯ ಶ್ರೀವೇದವ್ಯಾಸರಚರಣ-ಅನುದಿನ- ಸ್ಮರಣ |ಕನಸೊಳು ಕಾಣದ ಅದ್ವೈತಂಗಳಮುರಿದ - ತತ್ತ್ವ - ತೋರಿದ |ಘನಮಹಿಮ ಶ್ರೀಪುರಂದರವಿಠಲನದಾಸ - ಪಡೆದ - ಸನ್ಯಾಸ 3
--------------
ಪುರಂದರದಾಸರು
ಹನುಮಂತ ದೇವ ನಮೋ ಪವನಧಿಯನು ದಾಟಿ ರಾವಣನ ದಂಡಿಸಿದೆ ಅ.ಪಅಂಜನೆಯ ಆತ್ಮದಿಂದುದಿಸಿ ನೀ ಮೆರೆದೆಯೋಕಂಜಸಖಮಂಡಲಕೆ ಕೈ ದುಡುಕಿದೆ ||ಭುಂಜಿಸೀರೇಳು ಜಗಂಗಳನು ಉಳುಹಿದೆ ಪ್ರ-ಭಂಜನಾತ್ಮಜ ಗುರುವೆ ಸರಿಗಾಣೆ ನಿನಗೆ 1ಹೇಮಕುಂಡಲಹೇಮಯಜೊÕೀಪವೀತಖಿಳಹೇಮಕಟಿಸೂತ್ರಕೌಪೀನಧಾರೀ ||ರೋಮ ಕೋಟಿ ಲಿಂಗ ಸರ್ವಶ್ಯಾಮಲ ವರ್ಣರಾಮಭೃತ್ಯನೆ ನಿನಗೆ ಸರಿಗಾಣೆ ಗುರುವೆ 2ರಾಮ-ಲಕ್ಷನರ ಕಂಡಾಳಾಗಿ ನೀ ಮೆರೆದೆ |ಭೂಮಿಜೆಗೆ ಮುದ್ರೆಯುಂಗುರವನಿತ್ತೆ ||ಆ ಮಹಾ ಲಂಕಾ ನಗರವೆಲ್ಲವನು ಸುಟ್ಟುಧೂಮ ಧಾಮವ ಮಾಡಿ ಆಳಿದೆಯೊ ಮಹಾತ್ಮ 3ಆಕ್ಷಯ ಕುಮಾರಕನ ನಿಟ್ಟೊರಸಿ ಬಿಸುಟು ನೀರಾಕ್ಷಸಾಧಿಪ ರಾವಣನು ರಣದಲಿ ||ವಕ್ಷಸ್ಥಳದಲ್ಲಿ ಶಿಕ್ಷಿಸಲು ಮೂರ್ಛೆಯ ಬಗೆಯರಕ್ಷಿಸಿದೆ, ರಕ್ಷಿಸಿದೆ ರಾಯ ಬಲವಂತ 4ಶ್ರೀಮದಾಚಾರ್ಯ ಕುಲದವನೆಂದೆನಿಸಿದೆಯೈಶ್ರೀ ಮಹಾಲಕುಮಿ ನಾರಾಯಣಾಖ್ಯ ||ಶ್ರೀ ಮನೋಹರಪುರಂದರವಿಠಲ ರಾಯನಸೌಮ್ಯಮನದಾಳು ಹನುಮಂತ ಬಲವಂತ 5
--------------
ಪುರಂದರದಾಸರು