ಮುಖ್ಯ ಪ್ರಾಣನೆ ನಮ್ಮ ಮೂಲ ಗುರುವು |ರಕ್ಕಸಾಂತಕ ಶ್ರೀ ಭಾರತಿಯ ರಮಣನೆಂಬ ಪಅಂಜನಾ ಸುತನಾಗಿ ದಶರಥ ಸುತನಂಘ್ರಿ |ಕಂಜಭಜಿಸಿ ರಾವಣಾದಿ ಖಳರಾ ||ಅಂಜಿಸಿ ಕಪಿಗಳು ಚೇತನ ಕೆಡಲಾಗ |ಸಂಜೀವನವ ತಂದು ಪ್ರಾಣವನುಳುಹಿದ 1ಹರಿಗೆ ದ್ವೇಷಿಗಳಾದ ಮಗಧಾದಿ ಕ್ಷಿತಿಪರ |ತರಿದು ದ್ರೌಪದಿಯಳಕರವಪಿಡಿದು ||ದುರುಳಕೌರವರನ್ನು ಅಳಿದು ದ್ವಾಪರ ಕೊಟ್ಟಾ |ಗರಳಭೋಜನ ಮಾಡಿ ವೃಕೋದರನೆನಿಸಿದಾ2ವಿಷಯಂಗಳ ತೊರೆದು ಕಾಷಾಯಾಂಬರ ಧರಿಸಿ |ವಸುಧೆಯೊಳಗೆ ದುರ್ಮತವ ಸೋಲಿಸಿ ||ಅಸಮ ಶ್ರೀ ಪ್ರಾಣೇಶ ವಿಠ್ಠಲ ಪರದೈವವೆಂದು |ಹಸನಾಗಿ ತಿಳಿಸಿದ ಶ್ರೀ ಮಧ್ವಮುನಿಯೆಂಬ 3