ಒಟ್ಟು 7 ಕಡೆಗಳಲ್ಲಿ , 4 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನ್ನವನುಣಿಸಿದರತಿ ಹರುಷದಿಂದನಂದಗೋಪನ ಕಂದನಿಗೆ ಪ ವೃಂದಾವನದಲ್ಲಿ ನಲಿನಲಿದಾಡಿದಗೋಪಿಯ ಕಂದನಿಗೆಮಂದರೋದ್ಧರ ಅರವಿಂದ ಮೂರುತಿಗೆಇಂದಿರೆ ಅರಸ ಶ್ರೀಹರಿ ಗೋವಿಂದನಿಗೆ1 ಪಂಚಭಕ್ಷ್ಯವೆ ಪರಮಾನ್ನ ಶಾಲ್ಯಾನ್ನವೆಚಿತ್ರಾನ್ನಗಳ ಬಡಿಸಿಚಂಚಲಾಕ್ಷಿಯರು ಚಿನ್ನದ ತಟ್ಟೇಲಿಕಂಜಲೋಚನ ಕೃಷ್ಣಗಾರತಿ ಬೆಳಗುತ್ತ 2 ದಧಿಘೃತಬಾಂಡವನೊಡೆದು ಬ್ರಹ್ಮಾಂಡಬಾಯಲಿ ತೋರಿದ ಹರಿಗೆಹದಿನಾರು ಸಾವಿರ ಗೋಪೇರನೊಡಗೂಡಿಕೊಳಲನೂದುವ ಹಯವದನ ಮೂರುತಿಗೆ 3
--------------
ವಾದಿರಾಜ
ಆರೋಗಣೆಯ ಮಾಡು ಸಾರಸುಖದೊಡೆಯ ಪ. ಸತ್ಯವಾದ ಜಗಕೆ ಕರ್ತುಕಾರಣ ನೀನೆ ಮುಕ್ತಿದಾಯಕ ನಿತ್ಯತೃಪ್ತನಹುದೈ ಸತ್ಯವಾದವತಾರ ಸಕಲಗುಣ ಪರಿಪೂರ್ಣ ಸಿರಿ ಪರಮ ದಯಾಳು1 ಅಣುರೋಮಕೂಪದಲಿ ಅಂಡಜಾಂಡಗಳಿರಲು ಘನಕೃಪಾಂಬುಧಿ ನಿಮ್ಮ ಪೊಗಳಲಳವೆ ಫಣಿಶಾಯಿಯಾಗಿದ್ದ ಭುವನವ್ಯಾಪಕ ಹರಿಯ ಘನಭಕುತಿಲ್ಯಜಭವರು ಪೂಜೆಮಾಡುವರು 2 ಗಂಗೆಗೋದಾವರಿ ತುಂಗಭದ್ರೆ ಯಮುನೆ ರÀಂಗಸನ್ನಿಧಿಯಾದ ಕಾವೇರಿಯು ಮಂಗಳ ಭೀಮರಥಿ ನಿಮಗೆ ಮಜ್ಜನಕೆ ಅಣಿಮಾಡಿ ಅಂಗಜನಯ್ಯ ಭಾಪೆಂದು ಪೊಗಳೆ 3 ರನ್ನಮಯವಾಗಿರ್ದ ಹೊನ್ನಮಂಟಪದೊಳಗೆ ಸ್ವರ್ಣಪಾತ್ರೆಗಳಲ್ಲಿ ಸ್ವಯಂಪಾಕವು ನಿನ್ನ ಸೊಸೆ ವಾಣಿ ಭಾರತಿದೇವಿ ಕಡುಜಾಣೆ ಚೆನ್ನಾಗಿ ನೈವೇದ್ಯವನ್ನೆ ಮಾಡುವರು 4 ಗಂಧ ಕಸ್ತೂರಿ ಪುನುಗು[ಚಂದನ] ಜವ್ವಾಜಿ ಮುಂದೆ ಕುಂಕುಮದ ಕೇಸರಿಯ ಲೇಪ ಚೆಂದದ ಕೇದಿಗೆ ಮುಡಿವಾಳ ಸಂಪಿಗೆ ಕಂದರ್ಪನಯ್ಯಗೊಪ್ಪಿತು ಮಲ್ಲಿಗೆ 5 ದೆಸೆದೆಸೆಗೆ ಪರಿಮಳಿಪ ಕುಶಲದ ಚಿತ್ರಾನ್ನ ಬಿಸಿದೋಸೆಗೆ ಬೆಣ್ಣೆ ಲೇಹ್ಯಪೇಯ ಬಸಿರೊಳಗೆ ಈರೇಳು ಜಗವನಿಂಬಿಟ್ಟವಗೆ ನಸುನಗುತ ಇಂದಿರಾದೇವಿ ಬಡಿಸೆ 6 ನೂರು ಯೋಜನದಗಲ ಸರಸಿಜ ಬ್ರಹ್ಮಾಂಡ ಹದಿ ನಾರು ಬಣ್ಣದ ಚಿನ್ನದ್ಹರಿವಾಣವು ಸಾರೆಯಲಿ ಪೊಂಬಟ್ಟಲೆಂಬ ಸಾಗರದೊಳಗೆ ಮೇರುಗಿರಿಯೆಂಬೊ ದೀಪಗಳು ಬೆಳಗೆ 7 ಘೃತ ಸೂಪ ಲೋಕಪತಿಗನುವಾದ ದಿವ್ಯಾನ್ನವು ಬೇಕಾದ ಪಂಚಭಕ್ಷ್ಯ ರಸಾಯನವ ಏಕಾಂತದಲ್ಲಿ ನಿಮ್ಮ ದೇವಿ ಬಡಿಸೆ 8 ಖಳರಕುಲವೈರಿಗೆ ತಿಳಿನೀರುಮಜ್ಜಿಗೆ ಎಳನೀರು ಪಾನಕ ಸೀತಳುದಕ ಬಳಲಿದಿರಿ ಬಳಲಿದಿರಿ ಎನುತ ಹಯವದನಗೆ ನಳಿನಾಕ್ಷಿ ಕರ್ಪೂರವೀಳ್ಯವನೆ ಕೊಡಲು 9
--------------
ವಾದಿರಾಜ
ನಿತ್ಯ ಶುಭಮಂಗಳಂ ಪ. ಹೃದಯವೆಂಬೀ ದಿವ್ಯ ಪದ್ಮಪೀಠದ ಮೇಲೆ ಪದ್ಮಾಕ್ಷಿ ಪದ್ಮೆಯನು ಕುಳ್ಳಿರಿಸಿ ಸದಮಲ ಭಾವದಿಂ ಮಧುಕೈಟಭಾಂತಕನ ಹೃದಯೇಶ್ವರಿಯ ಸೇವೆಗೈವೆ 1 ಜ್ಞಾನವೆಂಬುವ ದಿವ್ಯ ಜ್ಯೋತಿಯಂ ಮುಂದಿರಿಸಿ ಧ್ಯಾನವೆಂಬುವ ನಿಲುವುಗನ್ನಡಿಯ ನಿಲಿಸಿ ದಾನÀವಾಂತಕ ರಾಮಚಂದ್ರಮನ ಧ್ಯಾನಿಸುತ ಜಾನಕಿಯ ಬಲಗೊಂಬೆ ಭರದಿ 2 ನೇಮನಿಷ್ಠೆಯ ಶುದ್ಧ ಹೇಮಕಲಶದಿ ಮತ್ತೆ ಭಕ್ತಿರಸದ ಪನ್ನೀರ ತುಂಬಿ ನಾಮಸಂಕೀರ್ತನೆಯ ನಾರಿಕೇಳವ ಬೆರಸಿ ಶ್ರೀನಾರಿಗಭಿಷೇಕವ ಗೈವೆ 3 ಚಿತ್ತಶುದ್ಧಿಯ ಶುಭ್ರವಸ್ತ್ರದಿ ನೇವರಿಸಿ ಸತ್ವಗುಣದ ಪೀತಾಂಬರವನುಡಿಸಿ ಕಂಚುಕ ತೊಡಿಸಿ ಚಿತ್ತಜನ ಜನನಿಯರ ನೋಡಿ ನಲಿವೆ 4 ಅಂತಃಕರಣ ಶುದ್ಧಿಯ ಅರಿಸಿನವನು ಪೂಸಿ ಶಾಂತಗುಣದ ತಿಲಕ ತಿದ್ದಿ ನಂದಮಲ್ಲಿಗೆಯ ದಂಡೆಯನು ಮುಡಿಸುತ್ತ ಇಂದ್ರಿಯ ನಿಗ್ರಹದ ಗಂಧ ಹಚ್ಚುವೆನು 5 ಪಂಚಭೂತಾತ್ಮಕದ ಛತ್ರಿಯನು ಪಿಡಿದೆತ್ತಿ ಪಂಚನಾದಗಳೆಂಬ ವಾದ್ಯಗಳ ನುಡಿಸಿ ಪಂಚೇಂದ್ರಿಯಂಗಳೇ ಪಂಚಭಕ್ಷ್ಯಗಳಾಗಿನಿ ರ್ವಂಚನೆಯಿಂದಾರೋಗಿಸೆಂಬೆ 6 ರೇಚಕವೆಂಬ ವ್ಯಜನದಿಂ ಬೀಸಿ ತಾರಕ ಚಾಮರವ ಪಿಡಿದು ಕುಂಭಕವೆಂಬ ಪನ್ನೀರಿನಿಂ ತೋಯ್ಸಿ ತಾರಕ ಬ್ರಹ್ಮನರಸಿಯಂ ಸೇವಿಸುವೆ 7 ಭೋಗಭಾಗ್ಯವನೀವ ಭಾಗ್ಯಲಕ್ಷ್ಮಿಗೆ ವೈರಾಗ್ಯದ ತಟ್ಟೆಯನು ಪಿಡಿದು ಭಾವದೀವಿಗೆಯ ಕರ್ಪೂರದಾರಿತಯೆತ್ತಿ ಬಾಗಿವಂದಿಪೆ ತಾಯೆ ಕರುಣಿಸೆಂದು 8 ವರದಾತೆ ಭೂಜಾತೆ ಸುವಿನೀತೆ ಸುವ್ರತೆ ವರಶೇಷಗಿರಿವಾಸದಯಿತೆ ಮಹಿತೇ ಸೆರಗೊಡ್ಡಿ ಬೇಡುವೆನು ಕರಪಿಡಿದು ಸಲಹೆಂದು ನೆರೆನಂಬಿ ನೆನೆನೆನೆದು ನಲಿವೆನಿಂದು 9
--------------
ನಂಜನಗೂಡು ತಿರುಮಲಾಂಬಾ
ಶ್ರೀ ಗಣೇಶ ಕಂಡೆ ನಿನ್ನ ಕಮಲದಂಘ್ರಿಯ ಈಗ ಪಾಲಿಸೆನಗೆ ನೀನೆ ಮನದಭೀಷ್ಟ ಸಿದ್ದಿಯ ಫ ಕಾಯ ಸುಂಡಲಿಂದ ಮೆಲುವ ಪಂಚಭಕ್ಷ್ಯರಾಶಿಯ ಖಂಡಿಸಿರ್ದ ಇಕ್ಷು ಕಡಲೆ ಮೋದಕ ಪ್ರಿಯ 1 ಭಾರಿಪುರುಷ ಇಲಿಯನೇರಿ ನಿಖಿಲ ಕೈದುವ ತೋರಕರದಿ ಪಿಡಿದು ಬರುವ ಭಕ್ತ ವಿಘ್ನವಾ ಚಾರಿವರಿತು ತರಿದು ತರಿದು ಓರೆ ಮಾಡುವ ಧೀರ ವಿಘ್ನರಾಜಗೆಣೆಯ ಕಾಣಿಪೋಲುವ 2 ಗಂಧ ಚಂದನಾಗರು ಸರ್ವಾಂಗ ಲೇಪನ ಚಂದ್ರ ಶೇಖರ ನರಸಿಯ ಮುದ್ದು ಕಂದನ ಜನರು ಬಂದು ನೋಡಿರೆಲ್ಲ ಮಂಡಲಮನೆಯ ಬೆನಕನ 3
--------------
ಕವಿ ಪರಮದೇವದಾಸರು
ತಪ್ಪುಗಳನೆಲ್ಲ ನೀನೊಪ್ಪಿಕೊಳ್ಳೊ - ನ-|ಮ್ಮಪ್ಪ ಕಾಯಬೇಕುತಿಮ್ಮಪ್ಪನೀನೆಪಸತಿ-ಸುತ ಸಂಸಾರಗಳಿಗೆ |ಮತಿ ಹೀನನಾದೆನು ವ್ಯರ್ಥ ||ಮಿತಿಗಾಣೆನಯ್ಯ ಎನ್ನ ಪಾಪಗಳಿಗೆ |ಗತಿಯದಾವುದು ಪೇಳೊ ಮುಂದೆನಗೆ 1ಬಿಸಿಲು ಬಿರುಮಳೆ ಗಾಳಿಯೊಳಗೆ-ಬಲು-|ದೆಸೆಗೆಟ್ಟು ದೇವ ತಿರುಗಿದೆ ||ಹಸಿವು-ತೃಷೆಗಳು ಬಹು ಬಾಧಿಸಲು |ಹುಸಿಯಾಡಿದೆನಯ್ಯ ಹುಟ್ಟು ಮೊದಲು 2ಸ್ನಾನ-ಸಂಧ್ಯಾವಂದನವರಿಯೆ-ನಾನಾ-|ದಾನ-ಧರ್ಮದ ಗುರುತುಗಳಿಯೆ ||ಹೀನಜನರ ಸಂಗವ ಮರೆಯೆ-ಸು-|ಙ್ಞÕನಿಗಳನು ಬಾಯೆಂದು ಕರೆಯೆ 3ಗಂಗೆ ಅಗ್ರೋದಕಗಳ ತಂದು - ನಾ-|ಮಂಗಳಮಜ್ಜನಮಾಡಲಿಲ್ಲವೆಂದೂ ||ಹೊಂಗೇದಗೆ ಪುಷ್ಪವನೊಂದು ಶ್ರೀ-|ರಂಗಗರ್ಪಿಸಲಿಲ್ಲ ಕಾಯೊ ಬಂದು 4ಪೀತಾಂಬರದಿ ವಸ್ತ್ರಗಳಿಂದ -ದಿವ್ಯ-|ನೂತನವಾದ ಆಭರಣದಿಂದ ||ಪ್ರೀತಿಪಡಿಸಲಿಲ್ಲಾದರದಿಂದ-ಹೇ-|ಸೀತಾಪತೆ ಕೃಷ್ಣ ಹರಿಮುಕುಂದ 5ಗಂಧಾಕ್ಷತೆ ಪುಷ್ಪಗಳಿಂದ -ಬರಿ-|ಒಂದುದಳಶ್ರೀ ತುಳಸಿಯಿಂದ ||ಇಂದಿರೇಶನ ಅರ್ಚಿಸದರಿಂದ -ಬಹು-|ನೊಂದು ದೂರಾದೆ ಸದ್ಗತಿಯಿಂದ 6ಏಕಾರತಿ ದೂಪಾರತಿಯ -ಎಂದು-|ಶ್ರೀಕಾಂತ ನಿನಗೆ ನಾ ಮಾಡಲಿಲ್ಲ ||ವ್ಯಾಕುಲದಲಿ ಹೋಯಿತು ಹೊತ್ತು -ಬಂದು-|ನೀ ಕರುಣಿಸು ಲಕ್ಷ್ಮೀರಮಣ 7ಪಾಯಸ ಪಂಚಭಕ್ಷ್ಯಗಳಿಂದ -ಬಲು-|ಆಯತವಾದ ಶಾಕಗಳಿಂದ ||ತೋಯೆ ಶಾಲ್ಯನ್ನ ಸದ್ಘøತದಿಂದ -ಶ್ರೀ-|ಮಾಯಾಪತಿಗೆ ಅರ್ಪಿಸಲಿಲ್ಲ 8ಮಂಗಳಾರತಿಯ ನಾ ಮಾಡಲಿಲ್ಲ-ಜಯ-|ಮಂಗಳವೆನ್ನುತ ಪಾಡಲಿಲ್ಲ ||ಕಂಗಳ ನೋಟದಿ ನೋಡಲಿಲ್ಲ -ನರ-|ಸಿಂಗನೀ ಬಾಯೆಂದು ಕರೆಯಲಿಲ್ಲ9ಹರಿಯ ಪಾದಕೆ ಬಿದ್ದವನಲ್ಲ -ನರ-|ಹರಿಗೆ ಪ್ರದಕ್ಷಿಣೆ ಮಾಡಲಿಲ್ಲ ||ಹರಿದಿನದುಪವಾಸ ವ್ರತವು ಇಲ್ಲ -ಬಲು-|ಹರಿಯ ದಾಸರ ಸಂಗ ಎನಗಿಲ್ಲ 10ಹೋಮಾರ್ಚನೆ ಔಪಾಸನವೆಲ್ಲ |ನೇಮದಿಂದಲಿ ನಾ ಮಾಡಲಿಲ್ಲ ||ಕಾಮಾತುರನಾಗಿ ಕಂಡಕಂಡ ಕಡೆ |ಸ್ವಾಮಿಯ ಕಾಣದೆ ತಿರುಗಿದೆನೊ 11ಅತಿಥಿಗಳ್ ಬಂದರೆ ಮನೆಗೆ -ಅಂದೆ-|ಗತಿಯಿಲ್ಲವಯ್ಯ ಕೊಡುವುದಕೆ ||ಯತಿಯ ಕಂಡರೆ ನಿಂದಿಸಿದೆ-ಶ್ರೀ-|ರತಿಪತಿ ಪಿತ ನೀ ದಯ ಮಾಡೊ 12ಎಷ್ಟು ಹೇಳಲಿ ಎನ್ನವಗುಣವ -ಅವು-|ಅಷ್ಟು ಇಷ್ಟೆಂದು ಎಣಿಕೆಯಿಲ್ಲ ||ದೃಷ್ಟಿಯಿಂದ ನೋಡಿ ದಯ ಮಾಡೊ -ಶ್ರೀ-|ಬೆಟ್ಟದ ವೆಂಕಟ ಪುರಂದರವಿಠಲ 13
--------------
ಪುರಂದರದಾಸರು
ನೈವೇದ್ಯವ ಕೊಳ್ಳೊ ನಾರಾಯಣಸ್ವಾಮಿದಿವ್ಯ ಷಡುರಸಾನ್ನವನಿಟ್ಟೆನೊ ಪ.ಘಮಘಮಿಸುವ ಶಾಲ್ಯನ್ನ ಪಂಚಭಕ್ಷ್ಯಅಮೃತಕೂಡಿದ ದಿವ್ಯ ಪರಮಾನ್ನವು ||ರಮಾದೇವಿಯು ಸ್ವಹಸ್ತದಿ ಮಾಡಿದ ಪಾಕಭೂಮಿ ಮೊದಲಾದ ದೇವಿಯರ ಸಹಿತ ತಾನು 1ಅರವತ್ತು ಶಾಕ ಲವಣ ಶಾಕ ಮೊದಲಾದಸರಸ ಮೊಸರುಬುತ್ತಿ ಚಿತ್ರಾನ್ನವಪರಮ ಮಂಗಳ ಅಪ್ಪಾಲು ಅತಿರಸಗಳಹರುಷದಿಂದಲಿ ಇಟ್ಟ ಹೊಸ ತುಪ್ಪವ 2ವಡೆಯಂಬೋಡಿಯು ದಧಿವಡೆಯ ತಿಂಢಿಣಿಒಡೆಯಸೆ ಬಡಿಸಿದೆ ಅಧಿಕವಾಗಿ ||ದೃಢವಾದ ಪಡಿಪದಾರ್ಥವನೆಲ್ಲ ಇಡಿಸಿದೆಒಡೆಯ ಶ್ರೀ ಪುರಂದರವಿಠಲ ನೀನುಣ್ಣೊ 3
--------------
ಪುರಂದರದಾಸರು
ವ್ಯರ್ಥವಲ್ಲವೆ - ಜನುಮ ವ್ಯರ್ಥವಲ್ಲವೆ ಪ.ತೀರ್ಥಪದನ ಭಜಿಸಿ ತಾ ಕೃ - |ತಾರ್ಥನಾಗದವನ ಜನುಮ ಅಪಒಂದು ಶಂಖವುದಕದಿಂದ |ಚೆಂದದಲಭಿಷೇಕ ಮಾಡಿ ||ಗಂಧ - ಪುಷ್ಪ ಹರಿಗೆ ಅರ್ಪಿಸಿ |ವಂದನೆ ಮಾಡದವನ ಜನುಮ 1ಮುಗುಳುದೆನೆಯ ಎಳೆ ತುಳಸಿ ದ - |ಳಗಳ ತಂದು ಪ್ರೇಮದಿಂದ ||ಜಗನ್ಮೋಹನ ಪೂಜೆಯ ಮಾಡಿ |ಚರಣಕೆರಗದವನ ಜನುಮ 2ಕಮಲ ಮಲ್ಲಿಗೆ ಸಂಪಿಗೆ ಜಾಜಿ |ವಿಮಲ ಕೇದಗೆ ಪ್ರೇಮದಿಂದ ||ಕಮಲನಾಭನ ಅರ್ಚನೆ ಮಾಡಿ |ಕರವ ಮುಗಿಯದವನ ಜನುಮ 3ಪಂಚಭಕ್ಷ್ಯ ಪಾಯಸಘೃತ |ಪಂಚಾಮೃತ ಹರಿಗರ್ಪಿಸದೆ ||ಮುಂಚೆ ಉಂಡು ಹೊರಗೆ ತಾ ಪ್ರ - |ಪಂಚಮಾಡುವವನ ಜನುಮ 4ಸಜ್ಜನಸಂಗ ಮಾಡದವನ |ದುರ್ಜನ ಸಂಗವ ಬಿಡದವನಅರ್ಜುನಸಖಪುರಂದರ |ವಿಠಲನನ್ನು ಭಜಿಸಿದವನ 5
--------------
ಪುರಂದರದಾಸರು