ಕರುಣಾಕರ ಭಕ್ತ ಪಾರಾಯಣ ಸತ್ಯನಾರಾಯಣ ಪ
ಭಕ್ತಿ ಭಾವದೆ ನಿನ್ನ ಸೇರಿದೆನು ವ್ರತ ಮಾಡಿದೆನು ಸತ್ಯ ದೇವನೆ
ಕೃಪೆ ತೋರುವುದು ವರ ನೀಡುವುದು ಸತ್ಯ ದೇವೇಶನೆÀ
ಬೇಡುವೆನು ನುತಿ ಮಾಡುವೆನು 1
ಗಂಧ ಪುಷ್ಪಾಕ್ಷತೆ ದೀಪಗಳಿಂ ಪಂಚಫಲಂಗಳಿಂ ಇಂದಿರೇಶನೆ
ನಿತ್ಯ ಭಾವಿಸಿದೆ ವಂದಾರು ಮಂದಾರ
ಪಾಲಿಸೆನ್ನನು ಬೇಡಿಕೊಂಬೆನು 2
ಮೌನೀಶ ವಂದ್ಯನೆ ಸರ್ವೇಶನೆ ದೀನಪಾಲಕನೆ ಸುಜ್ಞಾನ
ಭಾವಿಪುದು ನಿಜತೋರುವುದು
ದಯೆಯಿಂದ ಬಹು ವಿಧದಿಂದ 3