ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿಯ ನೆನಸಿದ ದಿವಸ ಶುಭಮಂಗಳಾ ಪ ಹರಿಯ ನೆನಸಿದ ದಿವಸ ಅವಮಂಗಳಾ ಅ.ಪ ಹರಿಯ ನೆನಸಿದ ನಿಮಿಷ ಆವಾಗಲೂ ಹರುಷ | ಹರಿಯ ನೆನಸದ ದಿವಸ ದುರ್ಮಾಸನಾ || ಹರಿಯ ನೆನಸಿದ ಘಳಿಗೆ ಮುಕ್ತಿಗೆ ಬೆಳವಣಿಗೆ | ಹರಿಯ ನೆನಸದ ಘಳಿಗೆ ಯಮನ ಬಳಿಗೆ 1 ಹರಿಯ ನೆನಸಿದ ಪ್ರಹರ ಕುಲಕೋಟಿ ಉದ್ಧಾರ | ಹರಿಯ ನೆನಸದ ಪ್ರಹರ ಹೀನಾಚಾರ || ಹರಿಯ ನೆನಸಿದ ಹಗಲು ಮುಕ್ತಿಗೆ ಬಲು ಮಿಗಿಲು | ಹರಿಯ ನೆನಸದ ಹಗಲು ನರಕಕ್ಕೆ ತಗಲು 2 ಹರಿಯ ನೆನಸಿದ ಮಧ್ಯಾಹ್ನ ಸುಧಾಪಾನ | ಕಾನನ || ಹರಿಯ ನೆನಸಿದ ಸಾಯಂಕಾಲವೇ ಸುಕಾಲ | ಹರಿಯ ನೆನಸದ ಸಾಯಂಕಾಲವೇ ದುಷ್ಕಾಲ3 ಹರಿಯ ನೆನಸಿದ ದಿನವು ನರನಿಗೆ ಸಮ್ಮತವು | ಹರಿಯ ನೆನಸದ ದಿನವು ದುರ್ದಿನವು || ಹರಿಯ ನೆನಸಿದ ನರÀನು ಅವನೇ ಕೃತಕೃತ್ಯ | ಹರಿಯ ನೆನಸದ ನರಜನ್ಮ ವ್ಯರ್ಥಾ 4 ಹರಿಯ ನೆನಸಿದ ರಾತ್ರಿ ತೀರ್ಥಕ್ಷೇತ್ರದ ಯಾತ್ರೆ | ಹರಿಯ ನೆನಸದ ರಾತ್ರಿ ಪಂಚಪಾತ್ರಿ || ಸಿರಿ ವಿಜಯವಿಠ್ಠಲನಂಘ್ರಿ | ಮುರಿಯದೇ ಸದಾ ನೆನೆವವನೆ ಮುಕ್ತ 5
--------------
ವಿಜಯದಾಸ