ನೀರಜದಳನಯನಾ
ಅನ್ಯನಲ್ಲ ನಾ ನಿನ್ನ ದಾಸನುಯಂದು
ಚಿನ್ಮಯ ಮೂರುತಿ ಶ್ರೀನಿವಾಸಹರೆ ಪ
ಪಂಕಜೋದ್ಭವನಾ ಪಡೆದಂಥಾ
ವೆಂಕಟಗಿರಿನಿಲಯ ವೇಣುನಾದಪ್ರೀಯಾ
ಬಿಂಕಾದಿ ಶರಣರ ಪೊರೆದಂಥಾ
ಚಕ್ರಧರ ಶೌರಿ ಮಹಾನುಭಾವ
ಬಿಂಕದಾನವರಳಿದ ಬಲವಂತಾ
ಶಂಕೆಯಿಲ್ಲದೆ ನಿಮ್ಮ ಸ್ಮರಿಸುವ ದಾಸರ
ಕಿಂಕರ ಕಿಂಕರ ಕಿಂಕರನೆಂದು ಇನ್ನು 1
ವಾಸುಕಿಶಯನ ಶ್ರೀ ವಸುದೇವನಂದನ
ಭೂಸರವಂದ್ಯ ಪುರಾಣ ಪುರುಷ
ಈಶ ಜಗತ್ರಯ -----ರಾಜವರದಾ
ಭೂಸುತೋನಾಯಕ ಭೂರಮಣಾ
ಸಾಸಿರನಾಮದ ಸರ್ವೇಶನೆ ಕೃಷ್ಣಾ
ಭೂಸೂರ ಕೀರ್ತಿ ಪ್ರಕಾಶನಾದ
ಕೇಶವ ಗೋವಿಂದ ಕರುಣಿಸಿ ಕಾಯೋ ಎನ್ನ
ಪಾದ ವೈಕುಂಠಾಧೀಶ 2
ಅಂಡಜಗಮನ ಭೂಮಂಡಲ ನಾಯಕ
ಪುಂಡರೀಕಾ ವರದ ಪರಮಾತ್ಮನೆ
ಚಂಡ ಪ್ರಚಂಡ ವೇದಾಂತ ರಹಸ್ಯನಾದ
ಉದ್ದಂಡ ದೇವಾ
ಕೊಂಡಾಡುವರ ನಿಮ್ಮ ಕರುಣಿಸಿ ಕೈಹಿಡಿದು
ಕಾಯ್ವ ಭಾರವುಳ್ಳ ಘನನು ನೀನೂ
ಪತಿ ` ಹೆನ್ನ ವಿಠ್ಠಲ'
ನಿನ್ನಂದು ಸೇರಿದ ಅವರ ಹರುಷದಿ ಸಲಹೋ ಇನ್ನೂ 3