ಒಟ್ಟು 7 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗೃಹಸಮರ್ಪಣೆ ಪುರುಷಾರ್ಥದಾಯಿ ಶ್ರೀವರ ನೀ ನಿಲಯದಿ ಸ್ಥಿರವಾಗು ಕರುಣಾನಿಧೆ ವರದೇಶ ನಿಜಪಾದ ಸರಸೀಜ ಮಕರಂದ ನಿತ್ಯ ಪ. ಆವ ಕಾಲಕು ಸಿರಿದೇವಿಯರಸ ನೀನೆ ಕಾವಲಾಗಿರುವಿ ಎಂದು ಭಾವಶುದ್ಧದಿ ನಿನ್ನ ಸೇವಾರತಿಯನಿತ್ತು ಪಾವನಗೊಳಿಪ ಬಂಧು ಕಾರುಣ್ಯಸಿಂಧು ವಿರಿಂಚಿ ಭವಾಹಿ ವಿಪತಿ ಸು- ರಾವಳೀಶಯವೆಂದು ರವಿಮುಖ ದೇವ ಋಷಿಗಣ ದೇವ್ಯ ನಿನ್ನ ಕ- ನಿತ್ಯ ಬಯಸುವೆ 1 ನಿನ್ನ ಕಟಾಕ್ಷ ಸಂಪೂರ್ಣವಾಗಿರಲೆನ- ಗನ್ಯರ ಭಯವಿಲ್ಲವು ಪರಮ ಸುಗು- ಣಾರ್ಣವ ನಿನಗೆಲ್ಲವು ತಾ ಸೇರಿರುವವು ಪನ್ನಗಾರಿ ಧ್ವಜ ಪರೇಶ ಮ- ಹೋನ್ನತಿ ಪ್ರದ ಮೂಜಗದ್ಭವ ನಿನ್ನ ದಾಸರದಾಸನೆಂದರಿ- ದೆನ್ನ ಮೇಲ್ಕಡೆಗಂಣನಿರಿಸುತ 2 ಪಂಕಜಾಲಯ ಭೂವರ ಕಿಂಕರಾಧಾರನಿ:- ಶಂಕ ಕೃಪಾಕರ ಅಂಕಿತ ಕೊಡು ಸಾದರ ಬಲಭದ್ರ ಸೋದರ ಶಂಕರನೆ ಶುಭಕರ ಕಮಲವನು ಶಂಕಿಸಿದೆ ಶಿರದಲ್ಲಿ ಕಲ್ಪಿಸಿ ಅಂಕುರಿತ ಭಯ ಬಿಡಿಸು ಸಕಲಾ- ಶಂಕವಾರಣ ವೆಂಕಟೇಶ್ವರ 3
--------------
ತುಪಾಕಿ ವೆಂಕಟರಮಣಾಚಾರ್ಯ
ನಮೋಸ್ತುತೇ ಕಮಲಾಪತೇ ಪ ನಮೋಸ್ತುತೇ ಶತಧೃತಿ ಶಂಕರ ಮುಖ ವಿಮಾನಚರಗಣ ವಂದಿತ ಚರಣ ಅ.ಪ ವಾರಣಭೀತಿನಿವಾರಣ ಭವಜಲ ತಾರಣ ದೈತ್ಯವಿದಾರಣ ಶುಭಗುಣ 1 ಪಂಕಜಲೋಚನ ಪಂಕವಿಮೋಚನ ಪಂಕಜಾಲಯಾಲಂಕೃತಗಾತ್ರ 2 ಶರಣಾಗತಜನ ಭರಣಾಧೃತರಥ ಚರಣಾ ಫಣಿಗಿರಿ ವರದವಿಠಲ 3
--------------
ವೆಂಕಟವರದಾರ್ಯರು
ಪಂಗು ಪುರವಾಸ ಶ್ರೀ ವೆಂಕಟೇಶ ನಿನ್ನ ಪಂಕಜಂಘ್ರಿಗಳಲ್ಲಿ ಸತತ ಶರಣಾದೆ ಪಂಕಜಾಲಯ ಪತಿಯೆ ಪಂಕಜೋದ್ಭವ ಪಿತ ವೃಷಾಂಕ ಸಂಕ್ರದಾದಿ ಸುಠವಿನುತ ಈಶ ಪ ಏಳು ತಗ್ಗಿದ ಗುಡ್ಡ ದಾಟಿ ನಿನ್ನಯ ಕ್ಷೇತ್ರ ಹೇಳುವರು ಮೊಂಡಿಪಾಳಯ ಎಂದು ಅಲ್ಲಿ ಮಾಲೋಲ ನಿನ್ನಾನುಗ್ರಹದಿ ಕಂಡೆ ನಿನ್ನ ಚೆಲುವ ಲಿಂಗಾಕಾರ ಶ್ರೀ ವೆಂಕಟೇಶ1 ಸರ್ವ ವೈದಿಕ ನಾಮಲಿಂಗಾತ್ಮಕ ಶಬ್ದ ಸರ್ವೋತ್ತಮ ವಿಷ್ಣುವಿಗೇವೇ ಮುಖ್ಯದಲಿ ಅನ್ವಯವು ಎಂಬುದನ್ನು ಸೂಚಿಸುವ ತೆರದಲ್ಲಿ ದಿವ್ಯ ಲಿಂಗರೂಪ ತೋರಿಸುತಿ 2 ಉತ್ಸವ ಮೂರ್ತಿಗಳೋಳ್ ಶ್ರೀ ಭೂ ಸಮೇತನೀ ಜ್ಯೋರ್ತಿಮಯ ಜ್ವಲಿಸುತಿ ಅಪ್ರತಿಮಾಂತಸ್ಥ ವೇಧ ಪಿತ ಶ್ರೀ ಪ್ರಸನ್ನ ಶ್ರೀನಿವಾಸನೇ ನಮೋ ವಿಧಿ ಶೇಷ ದೂರ್ವಾಸ ಇಂದ್ರಾದಿ ವಂದ್ಯ 3
--------------
ಪ್ರಸನ್ನ ಶ್ರೀನಿವಾಸದಾಸರು
ಪರಮದಯಾಕರೆ ಪೊರೆಯೆನ್ನನು ಜನನಿ ಪ. ಪಂಕಜಾಕ್ಷಿ ಪಂಕಜಾಸ್ಯೆ ಪಂಕಜಾಶ್ರಯೆ ಪಂಕಜೋದ್ಭವಾದಿಜನನಿ ಪಂಕಜಾಲಯೇ 1 ಪಾಕಶಾಸನಾದಿವಿನುತೆ ಲೋಕವಿಶ್ರುತೇ ಶೋಕಹರಣೆ ಸಾಕುಯೆಮ್ಮ ಕೋಕಿಲರವೇ 2 ಇಂದು ಸೋದರಿ ಮಂದಹಾಸಿನಿ ಕುಂದರದನೆ ವಂದಿಸುವೆನು ಮಂದಗಾಮಿನೀ 3 ಪೊಡವಿಯಣುಗಿ ಪೊಡಮಡುವೆ ನಿನ್ನಡಿಯೊಳೀಪರಿ ಕಡುನೇಹದೆ ಪಿಡಿದುಕರವ ಬಿಡದಿರೌ ಸಿರಿ4 ದೋಷರಹಿತ ಶೇಷಗಿರಿಯ ವಾಸನರಸಿಯೆ ಶೇಷಭೂಷಣ ನಮಿತಚರಣೆ ಪೋಷಿಸೌ ಜಯೆ5
--------------
ನಂಜನಗೂಡು ತಿರುಮಲಾಂಬಾ
ಮಾಮವದೇವ ಮಹಾನುಭಾವ ಶ್ರೀಮನೋಹರ ನಿ ರಾಮಯ ಚಿನ್ಮಯರಾಮ ರಮ್ಯಗುಣಧಾಮ ತಾವಕಂ ಪ ಪಂಕಜನೇತ್ರ ಪರಮಪವಿತ್ರ ಶಂಖಚಕ್ರಧರ ಕಿಂಕರಾರ್ತಿಹರ ಪಂಕಜಾಲಯಾಲಂಕೃತಗಾತ್ರ 1 ನೀಲಾಂಬುದಾಭ ನೀರಜನಾಭ ಬಾಲಭಕ್ತ ಪರಿ ಪಾಲ ಹೇಮಮಯಚೇಲ ನವ್ಯ ವನಮಾಲ ಸುಶೋಭsÀ 2 ಕರುಣಾಲವಾಲ ಖಳಕುಲಕಾಲ ಹರಿಣಹರಣ ಧರ ವರಶಿಖರಾಲಯ ವರದವಿಠಲ ಸುಖಕರಕಮಲಾಲಯ 3
--------------
ವೆಂಕಟವರದಾರ್ಯರು
ವೆಂಕಟಾಚಲ ನಿಲಯ ಪಿಡಿಯೆನ್ನ ಕೈಯ ಪಂಕಜಾಲಯ ಸುಪ್ರೀಯ ಪ ಅಹಿ ಕಂಕಣನುತ ಪದ- ಪಂಕಜ ತೋರೊ ಮೀನಾಂಕನ ಜನಕ ಅ.ಪ. ಪತಿತ ಪಾವನ ಮೋಹನ, ಪಾಲಿಸೊ ಎನ್ನ ಸತತ ಬಿಡದೆ ನೋಡೆನ್ನ ಹಿತರಹಿತರಾದವರನ್ನ ಪೊರೆದಳಿದೆ ಘನ್ನ ನತಜನರಿಗೆ ಪ್ರಸನ್ನ ದಿತಿಸುತ ತತಿಸಂಗತಿಯಲಿ ಮಥಿಸಲು ವನಧಿಯ ಅತಿ ಸಮ್ಮತಿಯಲಿ ಚತುರ ಧರಿಸಿ ಪರ್ವತ ಸುರತತಿಗ- ಮೃತ ವುಣಿಸಿದ ಶಾಶ್ವತಗತಿನಾಥ 1 ಸತಿಯ ಕಾಯಿದ ವಿನೋದ ಸಾಮಜವರದ ಚತುರದಶ ಲೋಕಾಧಿನಾಥ ಗತಿ ನೀನೆ ಮಹಾಪ್ರಸಾದ ಪರಮಮೋದ ಅತಿಶಯದಿ ಪೊಳೆವ ಪಾದ ಶತಪತ್ರವು ಹೃದ್ಗತವಾಗಲಿ ಉ- ನ್ನತ ಮಹಿಮನೆ ಕೀರುತಿವಂತನೆ ಅ- ಪ್ರತಿಭಾರತಮಲ್ಲ ಮೂರವತಾರಗೆ ಅತಿಪ್ರಿಯನೆನಿಪ ಮೂರತಿ ಚತುರದೇವ 2 ಸ್ಥಿತ ಮನ ಮಾಡೋ ಭವಭಂಗ ಸಂಗ ನಿಸ್ಸಂಗ ಚ್ಯುತಿ ದೂರ ಶೌರೀ ಕಾಳಿಂಗ- ದುರಿತ ಮಾತಂಗ-ಮರಿಗೆ ಸಿಂಗ ತುತಿಪೆ ಕರುಣಾಂತರಂಗ ಕ್ಷಿತಿಯೊಳಗಹಿ ಪರ್ವತನಿವಾಸನೆ ಖರೆಗೊಳಿಸುವ ದುರ್ಮತಿಯನು ತೊಲಗಿಸಿ ತ್ವತು ಪಾದದಲಿಡು ಮತಿಯಲ್ಲದೆ ತಿರು - ಪತಿ ವಿಜಯವಿಠ್ಠಲ ಇತರವನರಿಯೆ 3
--------------
ವಿಜಯದಾಸ
ಶಂಕರಾವ ಮಾಂ ಶಂಕರಾವ ಮಾಂ ಶಂಕರಾವ ಮಾಂ ಕಿಂಕರಂ ತವ ಪಶಂಕರಾವ ಮಾಂ ಪಂಕಜಾಲಯಾ ಲಂಕೃತಾಂಘ್ರಿಣಾ ನಿರತ ಪೂಜಿತ ಅ.ಪ ಫಾಲಲೋಚನ ಫಣಿವಿಭೂಷಣ ಕಾಲಖಂಡನ ಕಲುಷಭಂಜನಲೋಲಕಂಕಣಾಲಿಪ್ತಚಂದನ ಮೂಲಕರಣ ಮೃದುಸುಭಾಷಣ 1ಭಕ್ತಪಾಲಕ ಮುಕ್ತಿದಾಯಕ ಶಕ್ತಿಪ್ರೇರಕ ಯುಕ್ತಿಬೋಧಕತ್ಯಕ್ತಲೌಕಿಕ ಮುಕ್ತಬಂಧಕ ದಿಕ್ತಟಾದಿಕ ವ್ಯಕ್ತರೂಪಕ 2ಭೂತಭಾವನ ಭೂರಿಲೋಚನ ಭೀತಿಭೇದನ ನೀತಿವರ್ಧನವೀತಬಹುಜನ ವಿತತಸದ್ಗುಣ ಪಾತಕೀಜನ ಪಾಪ ಶೋಧನ 3ಶಿವ ಮಹೇಶ್ವರ ಶಿವಗುಶೇಖರ ಭವ ಪರಾತ್ಪರ ಭುವನಮಂದಿರಧ್ರುವ ದಿಗಂಬರ ಧೂರ್ತಪುರಹರ ದಿವಪ ಭಾಸುರ ಶ್ರೀ ಉಮಾವರ 4ತಿರುಪತೀತಿಭೂಧರ ವರೇಸದಾ ವರದ ವೆಂಕಟೇಶ್ವರ ಇತಿಸ್ಥಿತವರ ಕಕುದ್ಗಿರೀಶ್ವರ ಗಂಗಾಧರ ಚರಣಸೇವಕಂ ಮಾಂ ಕುರು ಪ್ರಭೂ 5ಓಂ ಪರಮ ಪುರುಷಾಯ ನಮಃ
--------------
ತಿಮ್ಮಪ್ಪದಾಸರು