ಮನುವಂಶ ಜಲಧಿಜಾತೆ ಸೀತೆ ಪೊರೆಯೆ ಜಾನಕಿ
ಘನ ಪುಣ್ಯವಿನಯೆ ದಿವ್ಯರೂಪೆ ಜನನಿ ಭಾಮಿನಿ ಪ
ರಾಮಚಂದ್ರ ಭಾಸಮಾನ ಹೃದಯ ಕುವಲಯೆ
ಕಾಮದಗ್ಧ ದನುಜನಯನ ಕಾಲರೂಪಿಣಿ 1
ಲಕ್ಷ್ಮಣಾದಿ ಭಕ್ತಪಾಲೆ ನಿತ್ಯರೂಪಿಣಿ
ಚಿತ್ತದಲ್ಲಿ ನೆಲಸು ದೇವಿ ತತ್ವಭೂಷಿಣೆ 2
ಆದಿಶಕ್ತಿ ಭೇದರಹಿತೆ ಮೋದದಾಯಕಿ
ಮಾಧವಾಂಘ್ರಿ ಯುಗಳ ಸೇವೆಯನ್ನು ಕರುಣಿಸು 3
ಭೂಮಿತನಯೆ ಭೂಮ ಮಹಿಮೆ ಕಾಮಿನೀ ರಮೆ
ಸಾಮಜಾಕರೋರು ಯುಗಳೆ ರಾಮ ಸುಂದರಿ4
ಪಂಕಜಾದಿ ಕುಸುಮಲೋಲೆ ಶಂಕರೀಪ್ರಿಯೆ
ಅಂಕದಲ್ಲಿ ಪೊರೆಯೆ ಮಾತೆ ಪಂಕಜಾನನೆÀ 5