ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮನುವಂಶ ಜಲಧಿಜಾತೆ ಸೀತೆ ಪೊರೆಯೆ ಜಾನಕಿ ಘನ ಪುಣ್ಯವಿನಯೆ ದಿವ್ಯರೂಪೆ ಜನನಿ ಭಾಮಿನಿ ಪ ರಾಮಚಂದ್ರ ಭಾಸಮಾನ ಹೃದಯ ಕುವಲಯೆ ಕಾಮದಗ್ಧ ದನುಜನಯನ ಕಾಲರೂಪಿಣಿ 1 ಲಕ್ಷ್ಮಣಾದಿ ಭಕ್ತಪಾಲೆ ನಿತ್ಯರೂಪಿಣಿ ಚಿತ್ತದಲ್ಲಿ ನೆಲಸು ದೇವಿ ತತ್ವಭೂಷಿಣೆ 2 ಆದಿಶಕ್ತಿ ಭೇದರಹಿತೆ ಮೋದದಾಯಕಿ ಮಾಧವಾಂಘ್ರಿ ಯುಗಳ ಸೇವೆಯನ್ನು ಕರುಣಿಸು 3 ಭೂಮಿತನಯೆ ಭೂಮ ಮಹಿಮೆ ಕಾಮಿನೀ ರಮೆ ಸಾಮಜಾಕರೋರು ಯುಗಳೆ ರಾಮ ಸುಂದರಿ4 ಪಂಕಜಾದಿ ಕುಸುಮಲೋಲೆ ಶಂಕರೀಪ್ರಿಯೆ ಅಂಕದಲ್ಲಿ ಪೊರೆಯೆ ಮಾತೆ ಪಂಕಜಾನನೆÀ 5
--------------
ಬೇಟೆರಾಯ ದೀಕ್ಷಿತರು
ಯಾದವೇಂದ್ರ ಪಾಲಿಸೆನ್ನ ಓ ದಯಾನಿಧೇ ಪ ಶಂಕರಾದಿ ದಿವಿಜರು ಪಂಕಜಾದಿ ಪೊಗಳಿಂ ಪಾದ ಪೂಜೆಗೈವರು 1 ಶಾರಧೇಂದು ಭಾಸಮಾನ ಹಾರರಾಜೆ ಶೋಭಿತ ನಾರದಾದಿ ಗಾನ ಲೋಲ ವಾರಿಜಾಸ್ಯನ 2 ನಾಮರೂಪ ರಹಿತನೆ ಸಾಮಜಾದಿ ಪಾಲಕ ಧೇನು ನಗರಾಭಿವಂದ್ಯ ನಾಮಲೋಲನೆ 3
--------------
ಬೇಟೆರಾಯ ದೀಕ್ಷಿತರು
ರಾಧೆ ಗೋಪಾಲ ಕೃಷ್ಣ ರಾಧೆಗೋಪಾಲ ರಾಧೆ ಗೋಪಾಲ ಕೃಷ್ಣ ರಾಧೆಗೋಪಾಲ ಪ ನಂದನಕಂದ ಮುಕುಂದಮುರಾರೆ ಇಂದಿವರಾಕ್ಷ ಗೋವರ್ದನಧಾರೆ ವೃಂದಾವನ ಸಂಚಾರ ವಿಹಾರೇ ಸಿಂಧುಶಯನ ಕ್ಷೀರಾಬ್ಧಿವಿಹಾರ 1 ಚಕ್ರಧರ ವೇಣುವಿನೋದ ಶಂಕರಾದಿ ವಂದಿತ ದಿವ್ಯಪಾದ ಬಿಂಕದಿಂದ ಕೊಳಲೂದುವನಾದ ಪಂಕಜಾದಿಗಳು ನಲಿವ ಸುಸ್ವಾದ 2 ಮಂದರಧರÀ ಗೋವರ್ಧನ ಧಾರಿ ಮಂದೆ ಗೋವತ್ಸವ ಕಾಯ್ವ ಶೌರಿ ಇಂದಿರೆಯರಸ ಶ್ರೀಹರಿಯೆ ಮುರಾರಿ ನಂದಯಶೋದೆಯ ಮೋಹದ ಶೌರಿ3 ವೃಂದಾವನದೊಳು ನಿಂದ ಗೋವಿಂದ ಮಂದಹಾಸ ಮುಖನಗೆ ಮೊಗದಿಂದ ಸುಂದರ ಗೋಪಿಯರೊಡಗೂಡಿ ಬಂದ ಮಂದರಧರ ಆನಂದ ಮುಕುಂದ 4 ಕಾಮನಪಿತ ಶ್ರೀ ಕಂಜಜನಾಭ ಕಾಮಿತ ಫಲಗಳ ಕರುಣಿಪ ಶ್ರೀಧ ಕಮಲನಾಭ ವಿಠಲ ನಿಮ್ಮ ಪಾದ ಕರುಣದಿ ನೆನೆವರ ಸಲಹುವಮೋದ 5
--------------
ನಿಡಗುರುಕಿ ಜೀವೂಬಾಯಿ