ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾಲಿಸು ಪಾಲಿಸು ಪಾಲಿಸು ಸುಮನಾ ಪಾರ್ವತಿ ತಾಯೇ ಪ. ಪಾಲಿಸು ಶ್ರೀ ರಜತಾದ್ರಿನಿವಾಸಿ ಶೀಲಮೂರುತಿ ಶಿವಶಂಕರಿ ದೇಹಿಮೆ ಅ.ಪ. ಮನಕಭಿಮಾನಿ ಮಾನುನಿರನ್ನೆ ಸರ್ವ ತನುಮನನಿನಗರ್ಪಿಸಿಹೆನೆ ತಾಯೆ ಕಾಯೆ ಅನುದಿನ ನಿನ್ನಯ ಚರಣವ ಪೂಜಿಪ ಮನವಿತ್ತು ಕರುಣದಿ ನಿನ್ನ ತನುಜರಿಗೇ ನೀಡೆ 1 ಪಂಕಜಗಂಧಿನಿ ಪಂಕಜಾಕ್ಷಿಯೆ ಶಿವ ನಂಕದಿ ಅಲಂಕೃತ ಮಾತೆ ಸುಗೀತೆ ತಾಯೆ ಅಂಕುರವಾಗುವ ತೆರ ನಿನನಾಮವ ಕಿಂಕರರಿಗೆ ನೀಡಿ ದಯಮಾಡೆ ತಾಯೆ 2 ಶ್ರೀಶ ಶ್ರೀ ಶ್ರೀನಿವಾಸ ಸಹೋದರಿ ಈಶನೈಯ್ಯನೈಯ್ಯನೊಲಿಸುವ ಮರೆಯ ಶಂಕರಿ ಶುಭಕರಿ 3
--------------
ಸರಸ್ವತಿ ಬಾಯಿ