ವಂದನೆಯ ಮಾಡುವೆ ಶ್ರೀಗುರುವಿಗೆ-
ವಂದನೆಯ ಮಾಡುವೆÀ ಪ
ವಂದನೆ ಮಾಡುವೆನಿಂದು ಯದುಶೈಲದೋಳ್
ಚಂದದೊಳಿರುತಿಹ ತಂದೆ ನಾರಾಯಣಗೆ ಅ.ಪ
ಹರುಷದಿಂದಲಿ ಇನ್ನು ಹರಸಿ ಸಜ್ಜನರಿಗೆ
ವರಗಳ ಕೊಡುತಿಹ ವರಲಕ್ಷ್ಮಿ ತಾಯಿಗೆ 1
ಹಿರಿದಾದ ದೈತ್ಯನ ಸೀಳಿ ಸಂತೋಷದಿ
ಮೊರೆಹೊಕ್ಕ ಕಂದನ ಪೊರೆದ ನರಸಿಂಹಗೆ 2
ಪಾವನತರಮಾದ ದೇವಸಮೂಹವ
ಕಾವ ಕೃಪಾನಿಧಿ ಕಲ್ಯಾಣಮ್ಮಗೆ 3
ವಿಸ್ಫುರಿತದಲ್ಲಿರ್ಪ ವೈರ್ಮುಡಿ ತಿರುಮಣ್ಣು
ಸರ್ಪಶಯನಗರ್ಪಿಸಿದಂತ ಗರುಡಗೆ 4
ಶ್ರೀಲೋಲನಡಿಗಳ ಲೀಲಾಮೃತಗಳ
ಶೀಲರಾಗಿ ಕುಡಿದ ಶ್ರೇಷ್ಠ ಆಳ್ವಾರ್ರಿಗೆ 5
ವರದವಿಠಲನ ಒಲಿದು ತಾ ಬಂದಿನ್ನು
ಗಿರಿಯೊಳು ನೆಲೆಸಿದ ವರ ಗುರುಪೀಠಕೆ 6
ಪಂಕಜಾಕ್ಷನಪಾದಪಂಕಜ ನಂಬಿಹ
ವೆಂಕಟಪುರದೊಳಗಿರುವ ವೈಷ್ಣವರಿಗೆ 7
ವಿಷ್ಣುವಿನಂಶದಿ ಪುಟ್ಟಿ ಸಂತೋಷದಿ
ಸೃಷ್ಟಿಯನಾಳ್ವ ಶ್ರೀ ಕೃಷ್ಣಭೂಪಾಲಗೆ8
ಮರೆಯದೆ ಭಕ್ತರ ಕರುಣದಿಂದಲಿ ಕಾಯ್ವ
ವರಮಹದೇವನ ಪುರದಶ್ರೀರಂಗಗೆ 9