ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭೀಮ ಶಾಮ ಕಾಮಿನಿಯಾದನು ಪ ಭೀಮ ಶಾಮ ಕಾಮಿನಿಯಾಗಲು ಪತಿ ಪುಲೋಮ ಜಿತುವಿನ ಕಾಮಿನಿ ಸಕಲ ವಾಮ ಲೋಚನೆಯ- ರಾಮೌಳಿ ಕೂಗುತಲೊಮ್ಮನದಿ ಪಾಡೆಅ.ಪ ದಾಯವಾಡಿ ಸೋತು ರಾಯ ಪಾಂಡವರು ನ್ಯಾಯದಿಂದ ಸ್ವಾಮಿಯ ಸೇವೆಯೆಂದು ಕಾಯದೊಳಗೆ ಅಸೂಯೆಪಡದಲೆ ಮಾಯದಲ್ಲಿ ವನವಾಯಿತೆಂದು ರಾಯ ಮತ್ಸ್ಯನಾಲಯದೊಳು ತಮ್ಮ ಕಾಜು ವಡಗಿಸಿ ಅಯೋನಿಜೆ ದ್ರೌಪ- ದೀಯ ವಡಗೂಡಿ ಆಯಾಸವಿಲ್ಲದೆ ಅಯ್ವರು ಬಿಡದೆ ತಾವಿರಲು 1 ಬಾಚಿ ಹಿಕ್ಕುವ ಪರಿಚಾರತನದಲಾ ಪಾಂಚಾಲಿಗೆ ಮತ್ಸ್ಯನಾ ಚದುರೆಯಲ್ಲಿ ಆಚರಣೆಯಿಂದ ಯಾಚಕರಂದದಿ ವಾಚವಾಡಿ ಕಾಲೋಚಿತಕೆ ನೀಚರಲ್ಲಿಗೆ ಕೀಚಕನಲ್ಲಿಗೆ ಸೂಚಿಸಲು ಆಲೋಚನೆಯಿಂದಲಿ ನಾಚಿಕೆ ತೋರುತಲಾ ಚೆನ್ನೆ ಪೋಗಲು ಕರ ಚಾಚಿದನು 2 ಎಲೆಗೆ ಹೆಣ್ಣೆ ನಿನ್ನೊಲುಮೆಗೆ ಕಾಮನು ಕಳವಳಿಸಿದ ನಾ ಗೆಲಲಾರೆನಿಂದು ವಲಿಸಿಕೊ ಎನ್ನ ಲಲನೆಯ ಕರುಣಾ- ಜಲಧಿಯೆ ನಾರೀ ಕುಲಮಣಿಯೆ ಬಳಲಿಸದಲೆ ನೀ ಸಲಹಿದಡೇ ವೆ- ಗ್ಗಳೆಯಳ ಮಾಡಿಪೆನಿಳೆಯೊಳೆನ್ನೆ-ಆ- ಖಳನಾ ಮಾತಿಗೆ ತಲೆದೂಗುತಲಿ ಅ- ನಿಳಜನೆನ್ನ ನೀ ಸಲಹೆಂದ 3 ಮೌನಿ ದ್ರೌಪದಿ ಮೌನದಲ್ಲಿ ಹೀನನಾಡಿದಾ ಊನ ಪೂರ್ಣಗಳು ಮನೋಭಾವವ ಧೇನಿಸಿ ನೋಡುತ್ತ ಹೀನಕೆ ತಿಳಿದಳು ಮನದಲಿ ದೀನವತ್ಸಲ ಕರುಣವು ಮೀರಿತು ಕಾನನದೊಳ್ಕಣ್ಣು ಕಾಣದಂತಾಯಿತು ಏನು ಮಾಡಲೆಂದು ಜಾಣೆಯು ಚಿಂತಿಸಿ ಅನಿಲಗೆ ಬಂದು ಮ-ಣಿದಳು4 ಚೆಲ್ವೆ ಕಂಗಳೇ ನಿಲ್ಲೆ ನೀ ಘಳಿಗೆ ಸಲ್ಲದೆ ಆತನ ಹಲ್ಲನು ಮುರಿದು ಹಲ್ಲಣವ ಹಾಕಿ ಕೊಲ್ಲುವೆ ನಾನೀಗ ತಲ್ಲಣಿಸದಿರೇ ಗೆಲ್ಲುವೆನೆ ಪುಲ್ಲನಾಭ ಸಿರಿನಲ್ಲನ ದಯವಿ- ದ್ದಲ್ಲಿಗೆ ಬಂದಿತು ಎಲ್ಲ ಕಾರ್ಯಗಳ ಸಲ್ಲಿಸಿ ಕೊಡುವನು ಬಲ್ಲಿದ ನಮಗೆ ಮಲ್ಲಿಗೆ ಮುಡಿಯಾ ವಲ್ಲಭಳೆ 5 ಎಂದ ಮಾತಿಗಾನಂದ ಮಯಳಾಗಿ ಬಂದಳಾ ಖಳನ ಮಂದಿರದೊಳು ನೀ- ನೆಂದ ಮಾತಿಗೆ ನಾನೊಂದನು ಮೀರೆನು ಕಪಟ ಸೈರಂಧಿರಿಯೂ ಕುಂದಧಾಭರಣವ ತಂದು ಕೊಡಲು ಆ- ನಂದದಿಂ ಪತಿಯ ಮುಂದೆ ತಂದಿಟ್ಟಳು ಮಂದರೋದ್ಧರನ ಚಂದದಿ ಪೊಗಳುತ ಇಂದು ಸುದಿನವೆಂದ ಭೀಮ6 ಉಟ್ಟ ಪೀತಾಂಬರ ತೊಟ್ಟ ಕುಪ್ಪಸವು ಇಟ್ಟತಿ ಸಾದಿನ ಬಟ್ಟು ಫಣಿಯಲ್ಲಿ ಕಟ್ಟಿದ ಮುತ್ತಿನ ಪಟ್ಟಿಸ ಕಿವಿಯಲ್ಲಿ ಇಟ್ಟೋಲೆ ತೂಗಲು ಬಟ್ಟ ಕುಚ ಘಟ್ಟಿ ಕಂಕಣ ರ್ಯಾಗಟೆ ಚೌರಿ ಅ- ದಿಟ್ಟಂಥ ಈರೈದು ಬೆಟ್ಟುಗಳುಂಗರ ಮುಟ್ಟೆ ಮಾನೆರಿ ದಟ್ಟಡಿವೊಪ್ಪತಿ ಕಟ್ಟುಗ್ರದ ಜಗ ಜಟ್ಟಿಗನು 7 ತೋರ ಮೌಕ್ತಿಕದ ಹಾರ ಸರಿಗೆ ಕೇ ಯೂರ ಪದಕ ಭಂಗಾರ ಕಾಳಿಸರ ವೀರ ವಿದ್ರುಮದ ಭಾಪುರಿ ಉ- ತ್ತಾರಿಗೆ ವರ ಭುಜಕೀರುತಿಯು ಮೂರೇಖೆಯುಳ್ಳ ಉದಾರ ನಾಭಿವರ ನಾರಿ ನಡು ಉಡುಧಾರ ಕಿಂಕಿಣಿ ಕ- ಸ್ತೂರಿ ಬೆರಸಿದ ಗೀರುಗಂಧವು ಗಂ- ಬೂರ ಲೇಪ ಶೃಂಗಾರದಲಿ8 ವಂಕಿ ದೋರ್ಯವು ಕಂಕಣ ಒಮ್ಮೆಯೀ- ಚಾಪ ಭ್ರೂ ಅಲಂಕಾರ ಭಾವ ಪಂಕಜಮಾಲೆ ಕಳಂಕವಿಲ್ಲದಲೆ ಸಂಕಟ ಕಳೆವ ಪಂಕಜಾಂಘ್ರಿ ಝಂಕಾರಕೆ ಲೋಕ ಶಂಕಿಸೆ ನಾನಾ- ಅಂಕುರ ವೀರ- ಕಂಕಣ ಕಟ್ಟಿದ ಬಿಂಕದಿಂದಲಾ- ತಂಕವಿಲ್ಲದೆಲೆ ಕಂಕಾನುಜ 9 ಕಂಬು ಕೊರಳು ದಾಳಿಂಬ ಬೀಜ ದಂತ ದುಂಬಿಗುರುಳು ನೀಲಾಂಬುದ ಮಿಂಚೆಂ- ದೆಂಬ ತೆರದಲಾ ಅಂಬಕದ ನೋಟ ತುಂಬಿರೆ ಪವಳ ಬಿಂಬಾಧರ ಜಂಬೀರ ವರ್ಣದ ಬೊಂಬೆಯಂತೆಸೆವ ತಾಂಬೂಲ ಗಿಳಿಯೆಂಬ ಗಂಭೀರ ಪುರುಷನು ಹಂಬಲಿಸಿದ ತಾ ಸಂಭ್ರಮದಿ 10 ಸಂಧ್ಯಾದೇವಿಯೊ ಇಂದ್ರನ ರಾಣಿಯೊ ಚಂದ್ರನ ಸತಿಯೋ ಕಂದರ್ಪನಾಕರ- ದಿಂದ ಬಂದ ಅರವಿಂದದ ಮೊಗ್ಗೆಯೊ ಅಂದ ವರ್ಣಿಪರಾರಿಂದಿನಲಿ ಇಂದು ರಾತ್ರಿ ಇದೆ ಎಂದಮರಮುನಿ ಸಂದೋಹ ಕೊಂಡಾಡೆ ಇಂದುಮುಖಿಯೊಡ ನಂದು ತಾ ನಾಟ್ಯದ ಮಂದಿರಕೆ ನಗೆ- ಯಿಂದ ಬಂದ ಕುಂತಿನಂದನನು11 ಭಂಡ ಉಡಿಯಲಿ ಕೆಂಡವೊ ಪರರ ಹೆಂಡರ ಸಂಗ ಭೂಮಂಡಲದೊಳೆನ್ನ ಗಂಡರು ಬಲು ಉದ್ದಂಡರು ನಿನ್ನನು ಕಂಡರೆ ಬಿಡರೋ ಹಂಡಿಪರೋ ಲಂಡ ಬಾಯೆಂದು ಮುಕೊಂಡು ಕೈದುಡುಕಿ ಅಂಡಿಗೆಳೆದು ಅಖಂಡಲನ ಭಾಗ್ಯ ಮಂಡೆ ಮೊಗ ಗಲ್ಲ ಡುಂಡು ಕುಚ ಮುಟ್ಟಿ ಬೆಂಡಾದನು 12 ಸಾರಿಯಲ್ಲ ಮಕಮಾರಿಯಿದೆನುತ ಶ- ರೀರ ವತಿ ಕಠೋರವ ಕಂಡು ಜ- ಝಾರಿತನಾಗಿ ನೀನಾರು ಪೇಳೆಂದು ವಿ- ಕಾರದ್ಯಬ್ಬರಿಸಿ ಕೂರ್ರನಾಗಿ ತೋರು ಕೈಯೆಂದು ಸಮೀರನು ಎದ್ದು ವಿ ಚಾರಿಸಿಕೋ ಎನ್ನ ನಾರಿತನವೆಂದು ವೀರ ಮುಷ್ಟಿಯಿಂದ್ಹಾರಿ ಹೊಡೆಯಲು ಕ್ರೂರನು ರಕ್ತವ ಕಾರಿದನು 13 ಹಾರಿ ಹೊಯ್ಯತಲೆ ಮೋರೆಲಿದ್ದ ಕಳೆ- ಸೂರೆಯಾಯಿತು ಪರನಾರೇರ ಮೋಹಿಸಿ ಪಾರಗಂಡವರುಂಟೆ ಶರೀರದೊಳಿದ್ದ ಮಾರುತೇಶ ಹೊರಸಾರಿ ಬರೆ ಧೀರ ಭೀಮರಾಯ ಭೋರಿಡುತ ಹಾರಿ ಕೋರ ಮೀಸೆಯನೇರಿಸಿ ಹುರಿಮಾಡಿ ನಾರಿಮಣಿ ಯಿತ್ತ ಬಾರೆಂದು ಕರೆದು ಸಾರಿದನು ನಿಜಾಗಾರವನು 14 ಸರಸವು ನಿನಗೆ ವಿರಸವು ಆಯಿತು ಕರೆಸೆಲೊ ಈ ಪುರದರಸಾ ಕಳ್ಳನ ನರಸಿಂಹನ ನಿಜ ಅರಸಿಗೆ ಮನವನು ಮಂದರ ಅರಸನೆ ಅರಸಿ ನೋಡುತಿರೆ ವರೆಸಿದನಾ ಜೀವ ದೊರಸೆಯ ಖೂಳನ ಬೆರೆಸಿ ಸವಾಂಗ ಸಿರಿ ವಿಜಯವಿಠ್ಠಲ ಅರಸಿನ ಲೀಲೆಯ ಸ್ಮರಿಸುತಲಿ 15
--------------
ವಿಜಯದಾಸ
ವಿಧಿ ಭವ ಸುರಾರ್ಚಿತಪಂಕಜಾಂಘ್ರಿ ಸುಪೋಷಾ | ಲಕ್ಷ್ಮೀ ನಿವಾಸಾ ಪ ಶಂಖ ಚಕ್ರ ವರಾಭಯಕರ ಶ | ಶಾಂಕ ವದನ ಕಳಂಕ ರಹಿತನೆಕಿಂಕರನ ಅವಗುಣಗಳೆಣಿಸದೆ | ಪಂಕಜಜ ಪರಿಪಾಲಕನೆ ಶ್ರೀ ಅ.ಪ. ಶುಭ ಭಾರ ಕಾರುಣಿಕ ಪರಿ | ವಾರ ಮಾಮನೊಹಾರ ಮೂರುತಿ1 ಭವ ಕೈಟಭಾರಿ ಮಹಾಮಹಿಮ ಗುಣ ||ಕೂಟದಿಂದಲಿ ಜಗವ ನಿರ್ಮಿಸಿ | ಹಾಟಕೋದರ ಹರ ಪ್ರಮುಖ್ಯರನೀಟು ಸೂತ್ರದಿ ಈಟದಿಂದದಿ | ಚೂಟದಲಿ ಚೆಲ್ಲಾಟವಾಡಿದ 2 ಪರ ಕಲುಷ ಕಾ | ನನವ ಖಂಡಿಸೊ ವ್ಯಾಸ ವಿಠ್ಠಲಮನ ವಚನ ಕಾಯದಲಿ ನಮಿಸುವೆ | ಘನ ಮಹಿಮ ಗಜವರದ ಸುಂದರ 3
--------------
ವ್ಯಾಸವಿಠ್ಠಲರು
ಶ್ರೀ ಸರಸ್ವತೀ ತಾ ಸುಮತೀ ಭವತೀ ಭಾರತಿ ಪ. ವಾಣೀ ವೀಣಾಪುಸ್ತಕಪಾಣಿ ಪಂಕಜಾಂಘ್ರಿಯುಗೇ ಫಣಿವೇಣಿ ಮಂಜುಳವಾಣಿ ಏಣಾಂಕವದನೆ ಶುಭಗುಣಶ್ರೇಣಿಗೀರ್ವಾಣಿ ಜನನಿ 1 ದೂರೆ ಶುಭ್ರಾಂಬರೆಧಾರೇ ಸಾರಸಭವ ಹೃತ್ಸರಸವಿಹಾರೇ ಧೀರೇ ಚತುರೆ ಕರಪಲ್ಲವ ಚತುರೇ 2 ವರದೇ ರಸನದೆ ನಿಂತವಸರದೇ ಸರಸದಿನುಡಿ ನಿಜಗುಣದಿ ಸೂನೃತೆ ವ್ರತದಿ ವರಶೇಷಾದ್ರಿನಿಕೇತನನಂಘ್ರಿಯ ಮರೆಯದೆ ಭಜಿಸುವೆ ತೆರದಿಂ ಕುಡುವರಮಂ 3
--------------
ನಂಜನಗೂಡು ತಿರುಮಲಾಂಬಾ