ಶ್ರೀರಮಣೀಮಣಿ ಬಾರೌ ಶ್ರೀಕರಮಣಿಪೀಠಕೆ ಪ.
ಸಾರಸದಳನಯನೆ ಸುಗುಣಾಭರಣೆ
ಸಾರಸಭವವಂದಿತಚರಣೆ
ಕ್ಷೀರಸಾಗರನಂದನೇ ವರ
ಕಾರುಣ್ಯಾಮೃತಪೂರಿತ ವದನೆ 1
ಪವನಾತ್ಮಜಸಂಸೇವಿತಾಂಘ್ರಿಯುಗಳೇ
ಪಾಲಿತಾಮರ ಜಾಲೇ
ಪಾವನಗುಣಶೀಲೇ ಶಶಾಂಕನಿಭಫಾಲೇ
ಪಾಲಿಸುನೀಂ ಪಂಕಜಸುಮಮಾಲೆ 2
ಕೇಶವಹೃದಯನಿವಾಸಿನೀ ಪದ್ಮಾಸಿನೀ
ಕ್ಲೇಶ ನಿವಾರಿಣಿ ಭುವನೈಕ ಜನನಿ
ಕಾಂಕ್ಷಿತಾರ್ಥ ಪ್ರದಾಯಿನಿ 3