ಪ್ರಿಯ ಹಯಾಸ್ಯವಿಠಲ | ದಯದಿ ಪೊರೆ ಇವನಾ ಪ
ನಯವಿನಯದಿಂ ಬೇಡ್ವ | ದಾಸತ್ವ ದೀಕ್ಷಾ ಅ.ಪ.
ದಾಸರಾಯರ ಕರುಣ | ಪಾತ್ರ ನಿರುವನು ಈತಸೂಸಿದತಿಭಕುತಿಯಿಂ | ಸೇವೆಯನು ಗೈವಾ |ಏಸೊ ಜನ್ಮದ ಪುಣ್ಯ | ರಾಶಿ ಬಂದೊದಗುತಲಿಆಶಿಸುತ್ತಿರುವನೂ | ದಾಸದೀಕ್ಷೆಯನು 1
ಅಂಕಿತವ ನಿತ್ತಿಹೆನೊ | ಪಂಕಜಸನ ವಂದ್ಯಶಂಕೆಯಿಲ್ಲದೆ ಸ್ವಪ್ನ | ಸೂಚ್ಯದಂತೇವೆಂಕಟೇಶನೆ ಇವನಾ | ಮಂಕುಮತಿಯನೆ ಕಳೆದುಬಿಂಕದಿಂ ಪೊರೆಯಲ್ಕೆ | ಪ್ರಾರ್ಥಿಸುವೆ ಹರಿಯೇ 2
ಶ್ರದ್ಧೆಯಿಂದಲಿ ಇವನು | ಮಧ್ವಮತ ದೀಕ್ಷೆಯಲಿಬದ್ಧವಾಗಲಿ ಹರಿಯೆ | ಸಿದ್ದ ಮುನಿವಂದ್ಯಾಶುದ್ದ ತತ್ವಗಳೆಲ್ಲ | ಬುದ್ದಿಗೇ ನಿಲುಕಿಸುತಶುದ್ದೋದ ನೀನು ತವ | ಪ್ರಧ್ವಂಸಗೊಳಿಸೊ 3
ಹರಿಯರಲಿ ಸದ್ಭಕ್ತಿ | ಕರುಣಿಸುತ ತೋಕನಿಗೆ ಪರಿಪರಿಯಲಿಂ ಕೀರ್ತಿ | ಸಂಪನ್ನನೆನಿಸೋಮರುತಂತರಾತ್ಮ ಹರಿ | ದುರಿತಾಳಿ ಪರಿಹರಿಸಿಕರುಣದಿಂ ಕೈಪಿಡಿದು | ಉದ್ದರಿಸೊ ಹರಿಯೇ 4
ಕೈವಲ್ಯದರಸಾಗಿ | ಭಾವಮೈದುನಗೊಲಿದುಬೋವ ಬಂಡಿಗೆ ಆದೆ | ಶ್ರೀವರನೆ ಹರಿಯೇಗೋವತ್ಸದನಿ ಕೇಳಿ | ಆವು ಧಾವಿಸುವಂತೆನೀವೊಲಿದು ಪೊರೆಯೊ ಗುರು | ಗೋವಿಂದ ವಿಠಲಾ 5