ಸ್ವಾಗತವು ಸ್ವಾಗತವು ಯೋಗಿವರ್ಯಾ ಪ
ಪಾದ ಪಂಕಜವಾ ಅ.ಪ.
ಯೋಗಿ ಜನ ವಂದ್ಯ ಭವರೋಗಾಹಿ ಖಗನೆನಿಪನಾಗ ಭೂಷಣ ಸಖನ ಯೋಗ ನಿರತಾ |ಆಗು ಹೋಗುಗಳೆರಡು ಸಹಿಸುವಲಿ ನಿಷ್ಠಾತಕಾಗಿನಿಯ ತಟವಾಸ ರಚಿತ ಸುಧೆ ಭರಿತಾ 1
ನಿತ್ಯ ನಿಜಯತಿ ಚರ್ಯಸ್ತುತ್ಯ ಪರಮೌದಾರ್ಯ ಯೋಗ ಧುರ್ಯಾ |ಸತ್ಯಾತ್ಮ ಪರಯುಗ್ಮ ಭಕ್ತಿಯಲಿ ಚಾತುರ್ಯಪ್ರತ್ಯಹರ್ರಾಮ ಪದ ಅರ್ಥ ಕೈಂಕರ್ಯಾ 2
ಭಾವಜನಯ್ಯ ಗುರು ಗೋವಿಂದ ವಿಠಲ ಪದಭಾವದಲಿ ಭಜಿಪಂಥ ಗುರುವರೇಣ್ಯಾ |ಪಾವನವು ನಿಮ್ಮ ಪದ ತೊಳೆದುದಕ ಶಿರಧೃತವುಪಾವಿಸಿತು ನಮ್ಮ ಕುಲ ನಾ ಪರಮ ಧನ್ಯಾ 3