ಕಿಂಕರರು ಗಣಪನ್ನ ಧ್ಯಾನಿಸಿ ಪ.
ಪಾದ ಪಂಕಜವನೆ ನೆನೆಯುವುದು ಮನದೊಳು
ಶಂಕರನ ಪ್ರಾಥಿಸುತ ಹರಿಯನಾತಂಕವಿಲ್ಲದೆ 1
ಪರಿ ಶಂಕೆಯಿಲ್ಲದೆ ಹರಿ ಮಹಿಮೆ ಪೊಗಳಲು 2
ಸರಸತಿಯ ಧ್ಯಾನಿಸಿ ನಿಮ್ಮ ಮಂಕಿನಜ್ಞಾನವನು
ಕಳೆಯಲು ಪವಮಾನಗೆ ವಂದಿಸಿ 3
ಪಂಕಜಾಕ್ಷಿ ರಮಾದೇವಿ ಶ್ರೀ ಶ್ರೀನಿವಾಸನ
ಪಾದ ಪಂಕಜವÀ ನೆನೆದು ಹರುಷದಿ 4
ಹರಿಕಿಂಕರು ಇರಿ ಎಂದರುಹಿದ
ಪುರಂದರದಾಸರ ನೆನವೆನನುದಿನವೂ 5