ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಾಮ ಶ್ರೀ ರಘುನಂದನ ಶರಣು ಸಾರ್ವ- ಭೌಮ ಭೂಸುರವಂದ್ಯ ಸೋಮಶೇಖರಮಿತ್ರ ಕಾಮಿತ ಫಲದಾತ್ರ ಸನ್ನುತ ಸೀತಾ ಪ. ಕ್ರೂರ ದಾನವ ಸಂಹಾರ ಕೌಸಲ್ಯಾಕುಮಾರ ಭೂ- ಭಾರಹರ ಭಜಕÀಜನೋದ್ಧಾರ ವೇದಾಂತಸಾರ ಚಾರುವದನ ಮಣಿಹಾರ ಕುಂಡಲಧರ ವೀರರಾಘವ ವಿಶ್ವಾಧಾರ ಕರುಣಿಸು ಸೀತಾ 1 ಪಾಪರಹಿತ ಪಾವನ ಚರಿತ ಅಹಲ್ಯಾ ಹರಣ ದಿವ್ಯರೂಪ ರಮಾರಮಣ ತಾಪ ವಿಚ್ಛೇದನ ತಾಮಸ ಗುಣಹರಣ ದ- ಯಾಪರ ಬ್ರಹ್ಮಸ್ವರೂಪ ಮೂರುತಿ ಸೀತಾ 2 ಮಾಧವ ಪುಣ್ಯಚರಿತ ಕರುಣಾಪಾಂಗ ಹೆಳವನಕಟ್ಟೆ ರಂಗಯ್ಯ ಸದಾನಂದ ಸುಮತೀಂದ್ರ ಹೃದಯ ಪಂಕಜಭೃಂಗ ಕದನ ವಿಕ್ರಮ ಬಾಹು ಕೋದಂಡಧೃತ ಸೀತಾ 3
--------------
ಹೆಳವನಕಟ್ಟೆ ಗಿರಿಯಮ್ಮ
ನಮ್ಮಪ್ಪ ಸುಮ್ಮಗಿರೊ ಗೋಪಾಲಾ-|ಗುಮ್ಮನು ಎಳೆದೊಯ್ವನು ಪಎಡದ ಕೈಯಲಿ ಕಪಾಲ-ಗೋಪಾಲಾ-|ಬಲದ ಕೈಯಲಿ ತ್ರಿಶೂಲ ||ಚಳಿಬೆಟ್ಟದ ಹೆಣ್ಣ ಮೈಯೊಳಿಟ್ಟವನಂತೆ |ಅಲೆದು ಸ್ಮಶಾನವ ತಿರುಗುವನಂತೆ 1ಮೂರು ಕಣ್ಣಿನವನೊ-ಗೋಪಾಲಾ-|ಐದು ತಲೆಗಳವನೊ ||ದಾರಿಯ ಪೋಗುವ ನಾರಿಯನೆಳತಂದು |ಸೇರಿಸಿ ಶಿರದಲ್ಲಿ ಹೊತ್ತನೊ 2ಚಂದ್ರನರ್ಧವ ಪಿಡಿದು-ತಲೆಯ ಮೇಲೆ-ಚೆಂದಕಿಟ್ಟಿರುವನಂತೆ ||ಅಂದಗಾರನಂತೆ [ಅನಲನೇತ್ರನಂತೆ] |ಮುಂದಿಪ್ಪ ಹುಡುಗನ ಕೊಂದು ತಿಂದವನಂತೆ 3ನಿನ್ನ ಮಗನ ಮಗನೊ-ಗೋಪಾಲಾ-|ಪನ್ನಗಭೂಷಣನೋ ||ಧನ್ಯನಾಗಿ ಶ್ರೀರಾಮ ನಾಮವನು |ಚೆನ್ನಾಗಿ ಚಿಂತಿಪನೊ 4ಕರಿಯಜಿನ ಪೊತ್ತವನೊ ಗೋಪಾಲಾ-|ನೆರೆದ ಭೂತ ತಂದವನೊ ||ಶರಧಿಶಯನ ನಿನ್ನಚರಣಪಂಕಜಭೃಂಗ|ಪುರಂದರವಿಠಲ ಪನ್ನಂಗ ಶಯನನೆ 5
--------------
ಪುರಂದರದಾಸರು