ಲಕ್ಷ್ಮೀದೇವಿ
ಅಂಬೋರುಹೇಕ್ಷಣೆ ಅಂಬಾಲತೇ ಜಗ
ದಂಬಾ ಪೊರೆಯೆ ಸತತ ಗಂಭೀರ ಗಜಗಮನೆ ಪ
ನಂಬಿದೆ ನಿನ್ನ ಪದಾಂಬುಜಯುಗಳವ
ಕಂಬು ಕಂಧರಿ ಕನಕಾಂಬರ ಧಾರಿಣಿ
ಬೆಂಬಲವೀಯೆ ವಿಳಂಬವ ಮಾಡದೆ ಅ.ಪ
`ಯಂಕಾಮಯೇ'ತ್ಯಾದಿ ಶೃತಿಗಳೆಲ್ಲಾ
ಪಂಕಜಭವಮುಖ ಸುಮನಸರು
ಕಿಂಕರರೆನ್ನುತ ಪೊಗಳುತಿರೆ
ಶಂಕೆಯುಂಟೆ ನಿನ್ನ ಮಹಿಮೆಗಳಲ್ಲಿ ಶ
ಶಾಂಕ ಸೋದರಿ ಆತಂಕವ ಬಿಡಿಸೆ 1
ನೀರಜಾತಗಣ ಕೃತ ನಿಲಯೇ
ಮಾರಜನಕ ಹರಿ ಪ್ರಿಯ ಜಾಯೆ
ಕೋರುವೆ ನಿನ್ನಯ ಪರಮದಯೆ
ಸಾರಸಾಕ್ಷಿ ಸರಿಯಾರು ನಿನಗೆ ಕರು
ಣಾರಸಮಯೆ ಸುವಿಶಾರದೆ ಜನನಿ 2
ಕನ್ಯೆ ನಿಖಿಲ ಸುರನರರೊಳಗೆ
ಮಾನ್ಯೆ ನಿನ್ನ ಪೋಲುವರನ್ಯರುಂಟೆ
ನಿನ್ನ ದಾಸನಾದ ಎನ್ನ ಮನೋರಥ
ವನ್ನು ತಿಳಿಸೆ ಪ್ರಸನ್ನ ಶ್ರೀ ಹರಿಯಲಿ 3