ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವೆಂಕಟಾಚಲವಾಸ ಪಂಕಜಪ್ರಿಯಭಾಸ ಶಂಕರಾರ್ಚಿತ ಚರಣ ಪಂಕಜಾಸನ ಪಿತ ಪಂಕಜಲೋಚನ ಕಿಂಕರಜನ ಶರಣ ಪ ಪರಮಾತ್ಮ ನಿನ್ನ ಶ್ರೀಪದಸೇವಕನಾಗಿಪರರನನುಸರಿಸುವೆನೆ ಸಿರಿರಮಣನೆ ನಿನ್ನ ಕರುಣೆಯುಳ್ಳೆ ಪರಸಿರಿಯ ಬಯಸುವೆನೆ 1 ಧರಣಿಯನಾಳುವ ದೊರೆಯ ಕುಮಾರನು ತಿರಿಕೆಯ ಬೇಡುವನೆ ಸುರತರುವಿನ ತಂಪುನೆರಳೊಳು ಕುಳಿತು ತಾ ಗರಿಕೆಯನರಸುವನೆ 2 ಸಾರನಿಗಮ ವಿಚಾರವುಳ್ಳವ ನಿಸ್ಸಾರದಿ ಬೆರೆಯುವನೆ ವಾರಿಧಿಲಂಘಿಪಧೀರನುಕೊಳಚೆಯನೀರಿಗೆಜರಿಯುವನೆ 3 ಕ್ಷೀರಾಬ್ಧಿ ಮಥಿಸಿದ ಶೂರನಿನ್ನವನಿಗೆ ನೀರು ಮಜ್ಜಿಗೆ ಗಣನೆ ನಾರಸಿಂಹನ ಪದ ಸಾರಿದರವನು ಮದವಾರಣಕ್ಕಂಜುವನೆ 4 ಗರುಡಗಮನ ನಿನ್ನ ಶರಣಾದವನಿಗೆ ತರಳನ ಹಾವಳಿಯೆ ನರಕಾಂತಕ ನಿನ್ನ ಸ್ಮರಿಸುವ ನರನಿಗೆ ದುರಿತಂಗಳಟ್ಟುಳಿಯೆ 5 ಹೊಳೆಯೊಳು ನೆನೆಯದ ಬಲುಗಟ್ಟಿಕಲ್ಲು ತಾ ಮಳೆಯೊಳು ನೆನೆಯುವದೆ ಇಳೆಯೊಳು ಪುಲಿಗಿರಿನಿಲಯನ ದಾಸರ ಬಲುಹು ಕುಂದಕವಹುದೆ 6 ಇಷ್ಟದಿ ಮನೆಯೊಳು ಮೃಷ್ಟಾನ್ನವುಂಡವ ಪಿಷ್ಟವ ಬಯಸುವನೆ ಸೃಷ್ಟೀಶ ನಿನ್ನೊಳಗಿಟ್ಟು ದುರ್ದೈವದ ದೃಷ್ಟಿಯನರಸುವನೆ 7 ನಿಗಮಗೋಚರ ಕೇಳು ಜಗವ ತೂಗುವನಿಗೆ ಮಗುವತಿ ಘನವಹುದೆ ಜಗದಘಹರಣ ಎನ್ನಘವ ನೀಗಲು ನಿನ್ನ ಬಗೆಗೆ ದುರ್ಘಟವಹುದೆ 8 ಪರಮಾತ್ಮ ಪರಿಪೂರ್ಣ ಪರವಸ್ತು ನೀನೆಂದು ಮರೆಹೊಕ್ಕೆ ಕಾಯೊ ಎನ್ನ ವರಸುಗುಣಾಕರವರದವಿಠಲಪುಲಿಗಿರಿದೊರೆಸುಪ್ರಸನ್ನಾ 9
--------------
ವೆಂಕಟವರದಾರ್ಯರು